ADVERTISEMENT

ಉದ್ಯೋಗ ಸೃಷ್ಟಿ

ಎಚ್.ಎಸ್.ಮಂಜುನಾಥ
Published 26 ಮೇ 2017, 19:30 IST
Last Updated 26 ಮೇ 2017, 19:30 IST

ಗೌರಿಬಿದನೂರಿನಲ್ಲಿ ನಾನು ಓದಿದ ನ್ಯಾಷನಲ್ ಕಾಲೇಜಿಗೆ ಈ ತಿಂಗಳ 22ರಂದು  ಹೋದಾಗ, ಪಿ.ಯು. ಪ್ರಿನ್ಸಿಪಾಲರ ಕೊಠಡಿ ಮುಂದೆ ಜನಜಂಗುಳಿ ಇತ್ತು. ನಗರಗಳಲ್ಲಿ, ಮೆಟ್ರೊಗಳಲ್ಲಿ ಇದು ಇನ್ನೂ ಹೆಚ್ಚು.

ಈಚೆಗೆ ಪತ್ರಿಕೆಗಳು ಎಸ್ಸೆಸ್ಸೆಲ್ಸಿ, ಪಿ.ಯು.ಸಿ. ಫಲಿತಾಂಶ ಬಗ್ಗೆ ವರದಿ ಮಾಡಿದವು. ಆಮೇಲೆ ಸಿ.ಎಂ.ಐ.ಇ. ಅಧ್ಯಯನದ ಸಾರಾಂಶ ಹೊರಬಂತು. ‘ವರ್ಷಕ್ಕೆ ಒಂದು ಕೋಟಿಯಿಂದ 1.2 ಕೋಟಿ ಉದ್ಯೋಗಗಳು ಸೃಷ್ಟಿಯಾಗ ಬೇಕು. ಆದರೆ ಕಳೆದ ಒಂದು ವರ್ಷದಲ್ಲಿ ಒಂದು ಲಕ್ಷ ಉದ್ಯೋಗಗಳು ಮಾತ್ರ ಸೃಷ್ಟಿಯಾಗಿವೆ’ ಎಂಬ ಅಂಶ ಅದರಲ್ಲಿ ಇದೆ. ಎಸ್ಸೆಸ್ಸೆಲ್ಸಿಯ  ಶೇ 68ರಷ್ಟು ವಿದ್ಯಾರ್ಥಿಗಳು ಪಾಸಾಗುತ್ತಾರೆ. ಪಿ.ಯು.ಸಿ. ತಲುಪಿದ ಶೇ 52ರಷ್ಟು ವಿದ್ಯಾರ್ಥಿಗಳು ಮುಂದೆ ಹೋಗುತ್ತಾರೆ. ಆದರೆ ಅವರ ಭವಿಷ್ಯ ಏನು?

ನಾವು ಪದವಿ ಮುಗಿಸಿದ ಕಾಲಕ್ಕೆ (1982) ತಾಂತ್ರಿಕ ಪದವಿ ಪಡೆದವರಲ್ಲೂ ನಿರುದ್ಯೋಗ ಇತ್ತು. 25 ವರ್ಷಗಳ ನಂತರವೂ ಇದೆ. ಇನ್ನು ಸಾಮಾನ್ಯ ಪದವಿ, ಸ್ನಾತಕೋತ್ತರ ಪದವಿ ಪಡೆದವರಿಗೆ ಏನು ದಾರಿ? ಕನಿಷ್ಠ ಮಟ್ಟದ ಸಂಬಳ ಇಲ್ಲದ ಕಾರಣಕ್ಕೆ ಉದ್ಯೋಗ ಸೇರದವರೂ ಇದ್ದಾರಂತೆ. ಉದ್ಯೋಗಾವಕಾಶ ಸೃಷ್ಟಿಸದ ಬೆಳವಣಿಗೆ ಯಾರಿಗಾಗಿ?
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.