ADVERTISEMENT

ಕಾಲೇಜಿನ ನೀತಿ ಸಂಹಿತೆ

ವಾಚಕರ ವಾಣಿ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2017, 19:30 IST
Last Updated 12 ಫೆಬ್ರುವರಿ 2017, 19:30 IST

ಒಂದು ಶಾಲೆ ಅಥವಾ ಕಾಲೇಜಿಗೆ ಅದರದ್ದೇ ಆದ ಶಿಸ್ತು, ಬದ್ಧತೆ ಹಾಗೂ ನೀತಿ ಸಂಹಿತೆ ಇರುತ್ತದೆ. ತಮ್ಮ ಧರ್ಮಕ್ಕೆ ವಿರುದ್ಧವಾದುದು ಎನ್ನುವ ಕಾರಣಕ್ಕೆ ವಸ್ತ್ರಸಂಹಿತೆ ಹಾಗೂ ಸಮವಸ್ತ್ರವನ್ನು ನಿರಾಕರಿಸುವುದು ಕಾಲೇಜಿನ ನೀತಿ ಸಂಹಿತೆಗೆ ವಿರುದ್ಧವಾದುದು. ಇಂತಹ ನಡವಳಿಕೆ ಮುಂದುವರಿದರೆ ಸಮವಸ್ತ್ರ ಎಂಬ ನಿಯಮವನ್ನೇ ರದ್ದು ಮಾಡಬೇಕಾಗುತ್ತದೆ.

ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನಲ್ಲಿ ನಡೆದಿರುವ ಸಮವಸ್ತ್ರ ಕುರಿತ ವಿವಾದ ಅತ್ಯಂತ ಗಂಭೀರವಾಗಿದ್ದು, ಭವಿಷ್ಯದಲ್ಲಿ ಎಲ್ಲಾ ಶಾಲಾ ಕಾಲೇಜುಗಳಿಗೂ ಹರಡುವ ಆತಂಕವಿದೆ. ಸಂಬಂಧಪಟ್ಟವರು ಮುನ್ನೆಚ್ಚರಿಕೆ ವಹಿಸಬೇಕು.
- ಕೆ.ಎಲ್.ಪ್ರಕಾಶ್, ಕಡೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.