ADVERTISEMENT

ಕುಟುಂಬ ಪ್ರಭುತ್ವ!’

ಪ್ರೊ ಆರ್‌ ವಿ ಹೊರಡಿ ಧಾರವಾಡ
Published 10 ಫೆಬ್ರುವರಿ 2016, 19:48 IST
Last Updated 10 ಫೆಬ್ರುವರಿ 2016, 19:48 IST

19ನೇ ಶತಮಾನದದಲ್ಲಿ ಅಬ್ರಹಾಂ ಲಿಂಕನ್‌ರು ಕೊಟ್ಟಿದ್ದ ಪ್ರಜಾಪ್ರಭುತ್ವದ ವ್ಯಾಖ್ಯೆ ಬಹಳಷ್ಟು ಬದಲಾಗಿದೆ.

‘ರಾಜಕಾರಣಿಗಳಿಂದ, ರಾಜಕಾರಣಿಗಳಿಗಾಗಿ ನಡೆಯುವ ಪ್ರಭುತ್ವ’ ಎಂದಾಗಿ, ಕಾಲಾಂತರದಲ್ಲಿ ‘ಅಪರಾಧಿಗಳಿಂದ ಅಪರಾಧಿಗಳಿಗಾಗಿ ನಡೆಯುವ ಪ್ರಭುತ್ವ’ ಎಂದು ಬದಲಾಗಿ ಇದೀಗ ‘ಕುಟುಂಬದವರಿಂದ ಕುಟುಂಬದವರಿಗಾಗಿ  ನಡೆಯುವ ಪ್ರಭುತ್ವ’ ಎಂದು ಮಾರ್ಪಾಡಾಗಿ ‘ಡೆಮಾಕ್ರಸಿ’ ಎಂಬುದು ‘ಹಿಪಾಕ್ರಸಿ’ ಎಂಬಂತಾಗಿದೆ.

ಪಾರ್ಲಿಮೆಂಟು, ಅಸೆಂಬ್ಲಿ, ನಗರಪಾಲಿಕೆ, ಪಂಚಾಯಿತಿ ಚುನಾವಣೆಗಳಲ್ಲಿ ಗಂಡ, ಹೆಂಡತಿ, ಮಗ, ಮಗಳು, ಅಳಿಯ, ಅಪ್ಪ, ಚಿಕ್ಕಪ್ಪ ಇವರೇ ಅಭ್ಯರ್ಥಿಗಳು! ನಮಗೆ ‘ಲಾ’ (ಕಾನೂನು) ಮುಖ್ಯವಲ್ಲ. ‘ಇನ್‌ಲಾ’ಗಳು (ಸಂಬಂಧಿಗಳು) ಮುಖ್ಯ! ಪ್ರಜಾತಂತ್ರ ಎಂದರೆ ಕುತಂತ್ರ!
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.