ADVERTISEMENT

ಕೆಟ್ಟ ಭಾಷೆ ಯಾಕೆ?

​ಪ್ರಜಾವಾಣಿ ವಾರ್ತೆ
Published 21 ಜೂನ್ 2017, 19:30 IST
Last Updated 21 ಜೂನ್ 2017, 19:30 IST

ಮುಖ್ಯಮಂತ್ರಿ ‘ಭ್ರಷ್ಟಾಚಾರ ಹಾಸಿ–ಹೊದ್ದು ಮಲಗಿದ್ದಾರೆ’ ಎಂದು ಅಡಗೂರು ವಿಶ್ವನಾಥ್ ಹೇಳಿದರೆ, ಸಿದ್ದರಾಮಯ್ಯ ‘ಜಾತಿವಾದಿ’ ಎಂದ್ದಾರೆ ಕುಮಾರಸ್ವಾಮಿ (ಪ್ರ.ವಾ., ಜೂನ್‌ 18 ಮತ್ತು 19).  ಶ್ರೀನಿವಾಸ ಪ್ರಸಾದ್, ಜನಾರ್ದನ ಪೂಜಾರಿ ಅಂಥವರೂ ಇಂಥ ಭಾಷೆ ಬಳಸಿದ್ದಿದೆ. ನಮ್ಮ ನಾಯಕರು ಇನ್ನೊಬ್ಬರನ್ನು ಖಂಡಿಸುವ, ಟೀಕಿಸುವ ಭರದಲ್ಲಿ ವೈಯಕ್ತಿಕ ಮಟ್ಟಕ್ಕೆ ಇಳಿದು ‘ಭ್ರಷ್ಟಾಚಾರಿ, ದುರಹಂಕಾರಿ, ಅಯೋಗ್ಯ, ಶನಿ’ ಎಂಬೆಲ್ಲ ಪದಗಳನ್ನು ಬಳಸಿದ ಅನೇಕ ಉದಾಹರಣೆಗಳು ಸಿಗುತ್ತವೆ.

ಗೌರವದಿಂದಲೇ, ಗಂಭೀರವಾಗಿ ತಿವಿಯಬಲ್ಲಂಥ ಸಾಕಷ್ಟು ಪದಗಳಿರುವಾಗ, ಮುಖಂಡರು ಇಂಥ ಅಪಶಬ್ದಗಳನ್ನು ಉಪಯೋಗಿಸಬೇಕೇ? 
ಸಜ್ಜನಿಕೆಯ, ಸಂಸದೀಯ ಮಾತುಗಳಿಂದ ತಮ್ಮ ವರ್ಚಸ್ಸನ್ನು ಬೆಳೆಸಿಕೊಂಡು ಜನರಿಗೆ ಮಾದರಿಯಾಗುವ ಬದಲು ಇಂಥ ಪದಗಳನ್ನು ಬಳಸಿ ತಮ್ಮ ಗೌರವ ತಾವೇ ಕುಂದಿಸಿಕೊಳ್ಳುತ್ತಿರುವುದು ದುರಂತ.
-ಪಿ.ಸಿ. ಕೇಶವ, ನೆಲಮಂಗಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT