ಕೈಮಗ್ಗ ಬಟ್ಟೆಗಳ ಬೆಲೆ ತುಸು ದುಬಾರಿ. ಈ ಅಂಶ ಜನಸಾಮಾನ್ಯರನ್ನು ಹಿಮ್ಮೆಟ್ಟಿಸುತ್ತದೆ. ಶ್ರೀಮಂತರು ಉಪ್ಪಿನಕಾಯಿ ತರಹ ಯಾವಾಗಲೋ ಒಮ್ಮೆ ಇಂತಹ ಬಟ್ಟೆ ಉಪಯೋಗಿಸುತ್ತಾರೆ. ಇದರಿಂದಾಗಿ ಬೇಡಿಕೆ ಇಲ್ಲವಾಗಿದೆ.
ಕೈಮಗ್ಗ ಬಟ್ಟೆಯ ಉತ್ಪಾದನಾ ವೆಚ್ಚ ಕಡಿಮೆಯಾಗಬೇಕು ಮತ್ತು ಹೆಚ್ಚು ಮಾರಾಟವಾಗಬೇಕು. ಆಗಲೇ ನೇಕಾರರ ಸ್ಥಿತಿ ಉತ್ತಮಗೊಳ್ಳುತ್ತದೆ. ಕೈಮಗ್ಗ ಬಟ್ಟೆ ಬೇಸಿಗೆ ಹಾಗೂ ಚಳಿಗಾಲಕ್ಕೂ ಒಪ್ಪುವಂತಹದು. ಹಿತಕರ. ಆರೋಗ್ಯಕ್ಕೂ ಒಳ್ಳೆಯದು.
ಎಂಜಿನಿಯರುಗಳು, ವೈದ್ಯರು, ಶ್ರೀಮಂತ ವರ್ಗದ ವಿದ್ಯಾರ್ಥಿಗಳು, ರಾಜಕಾರಣಿಗಳು ಮತ್ತು ಹೆಚ್ಚು ಆದಾಯವಂತರ ಮನವೊಲಿಸಿ ಕನಿಷ್ಠ ವಾರಕ್ಕೊಮ್ಮೆಯಾದರೂ ಕೈಮಗ್ಗ ಬಟ್ಟೆ ಧರಿಸುವಂತೆ ಮಾಡಬೇಕು. ಹೆಚ್ಚು ಜನ ಬಳಸಿದರೆ ಬೇಡಿಕೆ ಜಾಸ್ತಿಯಾಗಿ ನೇಕಾರರ ಆದಾಯ ಹೆಚ್ಚಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.