ADVERTISEMENT

ಜನಾಂಗೀಯ ಹಿಂಸಾಚಾರ: ನೊಬೆಲ್‌ ಪ್ರಶಸ್ತಿಗೆ ದ್ರೋಹ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2017, 19:30 IST
Last Updated 14 ಸೆಪ್ಟೆಂಬರ್ 2017, 19:30 IST
ಜನಾಂಗೀಯ ಹಿಂಸಾಚಾರ: ನೊಬೆಲ್‌ ಪ್ರಶಸ್ತಿಗೆ ದ್ರೋಹ
ಜನಾಂಗೀಯ ಹಿಂಸಾಚಾರ: ನೊಬೆಲ್‌ ಪ್ರಶಸ್ತಿಗೆ ದ್ರೋಹ   

ಮ್ಯಾನ್ಮಾರ್‌ನಲ್ಲಿ ಜನಾಂಗೀಯ ಹಿಂಸಾಚಾರ ಭುಗಿಲೆದ್ದು ಅಲ್ಲಿನ ರೋಹಿಂಗ್ಯಾ ಮುಸ್ಲಿಂ ಸಮುದಾಯದ ಲಕ್ಷಾಂತರ ಜನರು ಜೀವಭಯದಿಂದ ದಿಕ್ಕುದೆಸೆಯಿಲ್ಲದೆ ಓಡಿ ಹೋಗುತ್ತಿದ್ದಾರೆ. ಆದರೆ ಶಾಂತಿಗಾಗಿ ನೊಬೆಲ್‌ ಪುರಸ್ಕಾರ ಪಡೆದಿರುವ, ಮ್ಯಾನ್ಮಾರ್‌ನ ಆಡಳಿತ ಚುಕ್ಕಾಣಿ ಹಿಡಿದಿರುವ ಆಂಗ್‌ ಸಾನ್‌ ಸೂಕಿ ಮಾತ್ರ ಈ ಕುರಿತು ಏನೇನೂ ಕ್ರಮ ಕೈಗೊಳ್ಳದಿರುವುದು ಖಂಡನೀಯ.

ರೋಹಿಂಗ್ಯಾ ಸಮುದಾಯದಲ್ಲಿಯೂ ಕೆಲವು ಸಮಾಜಘಾತುಕರು ಸೇರಿಕೊಂಡಿರಬಹುದು. ಅವರನ್ನು ಗುರುತಿಸಿ ಕಾನೂನು ಕ್ರಮ ಕೈಗೊಳ್ಳುವುದನ್ನು ಬಿಟ್ಟು, ಇಡೀ ಸಮುದಾಯವನ್ನೇ ನರಳಿಕೆಗೆ ಒಳಪಡಿಸುತ್ತಿರುವುದು ಅತ್ಯಂತ ಅಮಾನವೀಯ.

ಮ್ಯಾನ್ಮಾರ್‌ನಲ್ಲಿ ಸೇನಾ ಆಡಳಿತದ ವಿರುದ್ಧ ದೀರ್ಘಕಾಲ ಹೋರಾಡಿ, ಪ್ರಜಾಪ್ರಭುತ್ವ ಸ್ಥಾಪಿಸಲು ಕಾರಣರಾಗಿದ್ದ ಸೂಕಿ ಅವರ ಬಗ್ಗೆ ಇಡೀ ವಿಶ್ವ ಮೆಚ್ಚುಗೆ ವ್ಯಕ್ತಪಡಿಸಿತ್ತು. ರೋಹಿಂಗ್ಯಾ ಬೆಳವಣಿಗೆಯ ನಂತರ ಸೂಕಿ ಅವರ ಘನತೆ ಕುಸಿಯುವಂತಾಗಿದೆ.

ADVERTISEMENT

-ಹಜರತಅಲಿ ದೇಗಿನಾಳ, ವಿಜಯಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.