ADVERTISEMENT

ತಲೆ ತಗ್ಗಿಸುವಂಥದ್ದು

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2017, 19:30 IST
Last Updated 15 ಫೆಬ್ರುವರಿ 2017, 19:30 IST

ವಿಜಯಪುರ ಜಿಲ್ಲೆಯ ನಾಲತವಾಡ ಪಟ್ಟಣದಲ್ಲಿ ಕಳೆದ ಭಾನುವಾರ ನಡೆಯಬೇಕಿದ್ದ ಮುದ್ದೇಬಿಹಾಳ ತಾಲ್ಲೂಕು ಮೂರನೇ ಕನ್ನಡ ಸಾಹಿತ್ಯ ಸಮ್ಮೇಳನ ಮುಂದಕ್ಕೆ ಹೋಗಿದೆ (ಪ್ರ.ವಾ., ಫೆ. 13). ಇದಕ್ಕೆ ರಾಜಕೀಯ ಪಕ್ಷಗಳ ಸಂಘಟಕರಿಬ್ಬರ ಗುಂಪುಗಳ ನಡುವಿನ ಘರ್ಷಣೆ, ವೈಯಕ್ತಿಕ ಪ್ರತಿಷ್ಠೆ ಕಾರಣವೆಂಬುದನ್ನು ತಿಳಿದು  ತಳಮಳವಾಯಿತು.

ಎಲ್ಲ ಸಿದ್ಧತೆಗಳು ಪೂರ್ಣಗೊಂಡು, ಮರುದಿನ ಜರುಗಬೇಕಿದ್ದ ಸಮ್ಮೇಳನ ಮುಂದಕ್ಕೆ ಹೋಗಿದ್ದು ಸರಿಯಲ್ಲ. ಈ ಸಂಬಂಧದ ಘರ್ಷಣೆ  ಕೈ ಕೈ ಮಿಲಾಯಿಸುವವರೆಗೆ ಬೆಳೆದು, ರಣರಂಗವಾಗಿದ್ದು ಸಭ್ಯ ಸಮಾಜ ನಾಚಿಕೆಯಿಂದ ತಲೆತಗ್ಗಿಸುವಂಥ ಸಂಗತಿ.

ಹಣಬಲ, ಅಧಿಕಾರ ಬಲದ ರಾಜಕೀಯ ಶಕ್ತಿಗಳು ಹೇಗೆ ಸಾಹಿತ್ಯಕ ಕ್ಷೇತ್ರವನ್ನು ಆಳಬಯಸುತ್ತವೆ ಎಂಬುದಕ್ಕೆ ಇದೊಂದು ಉದಾಹರಣೆ. ಇಂಥ ಶಕ್ತಿಗಳಿಂದ ಸಾಹಿತ್ಯ ಕ್ಷೇತ್ರವನ್ನು ಮುಕ್ತಗೊಳಿಸದಿದ್ದರೆ, ಈ ಬಗೆಯ ಪ್ರಕರಣಗಳು ಇನ್ನೂ ಹೆಚ್ಚುತ್ತಾ ಹೋಗುವುದರಲ್ಲಿ ಸಂಶಯವಿಲ್ಲ.
ಮಲ್ಲಿಕಾರ್ಜುನ ಹುಲಗಬಾಳಿ, ಬನಹಟ್ಟಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.