ADVERTISEMENT

ನ್ಯೂನತೆ ಸರಿಪಡಿಸಿ

ಮ.ಸೊ.ಹಾಲಸ್ವಾಮಿ
Published 1 ಸೆಪ್ಟೆಂಬರ್ 2015, 19:35 IST
Last Updated 1 ಸೆಪ್ಟೆಂಬರ್ 2015, 19:35 IST

ಮೈಸೂರಿನಲ್ಲಿ ಕನ್ನಡ ಕ್ರೈಸ್ತ ಸಂಘದವರಿಂದ ಸನ್ಮಾನ ಸ್ವೀಕರಿಸಿದ ದೇ.ಜವರೇಗೌಡರು ‘ಹಿಂದೂ ಧರ್ಮದ ಬಗ್ಗೆ ನನಗೆ ಕೊಂಚವೂ ಗೌರವವಿಲ್ಲ. ತಾರತಮ್ಯವನ್ನು ಪ್ರತಿಪಾದಿಸುವ ಧರ್ಮ ಧರ್ಮವೇ ಅಲ್ಲ’ ಎಂದಿದ್ದಾರೆ (ಪ್ರ.ವಾ., ಆ. 31). ಯಾವ ಧರ್ಮವೂ ಮನುಷ್ಯ-ಮನುಷ್ಯರ ನಡುವೆ ತಾರತಮ್ಯವನ್ನು ಪ್ರತಿಪಾದಿಸಬಾರದು. ಪ್ರತಿ ಧರ್ಮದ ಸಾರವೂ ಮಾನವೀಯತೆ.

ಆದರೂ ವಿಶ್ವದ ಎಲ್ಲ  ಧರ್ಮಗಳಲ್ಲೂ ಪಟ್ಟಭದ್ರ ಹಿತಾಸಕ್ತಿಗಳು ತಮಗೆ ಅನುಕೂಲವಾಗುವಂತೆ ಆಚರಣೆಗಳನ್ನು ರೂಢಿಸಿವೆ. ಇಂಥ ನ್ಯೂನತೆಗಳನ್ನು ಸರಿಪಡಿಸುವ ಪ್ರಯತ್ನ ಮಾಡಬೇಕೇ ವಿನಾ ಯಾರನ್ನೋ ಖುಷಿಪಡಿಸಲು ಇನ್ಯಾವುದೋ ಧರ್ಮದ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡುವುದು ಸರಿಯಲ್ಲ.

ಕ್ರಿಸ್ತನನ್ನು ಪೂಜಿಸುವುದು, ಧರ್ಮವನ್ನು ಗೌರವಿಸುವುದು ಬಿಡುವುದು ಜವರೇಗೌಡರ ವೈಯಕ್ತಿಕ ವಿಚಾರ. ಆದರೆ ತಾವು ಪೂಜಿಸುವ ದೇವರು ಮಾತ್ರ ಸತ್ಯ, ಉಳಿದ ದೇವರು ಸುಳ್ಳು ಎಂಬ ಅವರ ಧೋರಣೆ ಹಾಸ್ಯಾಸ್ಪದ. ತಮಗಿಷ್ಟ ಬಂದ ದೇವರನ್ನು ಪೂಜಿಸುವುದು ಆಯಾ ವ್ಯಕ್ತಿಯ ನಂಬಿಕೆಗೆ ಬಿಟ್ಟ ವಿಚಾರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.