ADVERTISEMENT

ಪತ್ರ ಸಂಸ್ಕೃತಿ...

ಯು.ಎಸ್‌.ಸಂಗನಾಳಮಠ, ಹೊನ್ನಾಳಿ
Published 29 ನವೆಂಬರ್ 2015, 19:47 IST
Last Updated 29 ನವೆಂಬರ್ 2015, 19:47 IST

ತ್ವರಿತ ಸಂದೇಶ ವಿಷಯವಾಹಕವಾಗಿರುವ ಮೊಬೈಲ್‌, ಇ–ಮೇಲ್‌ ಬಳಕೆಯಿಂದ ಪತ್ರ ಸಂಸ್ಕೃತಿ ಕಡಿಮೆ ಆಗುವುದರೊಂದಿಗೆ ಎಲ್ಲ ಊರುಗಳ ಪ್ರಮುಖ ಸ್ಥಳಗಳಲ್ಲಿ ಕಂಡು ಬರುತ್ತಿದ್ದ ‘ಅಂಚೆ ಕೆಂಪು ಡಬ್ಬಿಗಳು’ ಸಹ ಕಣ್ಮರೆಯಾಗಿವೆ. ಪತ್ರಗಳನ್ನು ಹಾಕಬೇಕೆಂದುಕೊಂಡರೆ  ಅಂಚೆ ಕಚೇರಿಯನ್ನು ಹುಡುಕುವಂತಾಗಿದೆ. 

ಊರಿನ ಬಸ್‌– ರೈಲ್ವೆ ನಿಲ್ದಾಣ ಅಥವಾ ಶಾಲಾ ಕಾಲೇಜು ಬಳಿ ‘ಕೆಂಪು ಡಬ್ಬಿಗಳು’ ಪುನಃ ಕಾಣುವಂತಾಗಲಿ. ಜನರು ಪತ್ರ ಸಂಸ್ಕೃತಿ ರೂಢಿಸಿಕೊಳ್ಳಲಿ. ಭಾಷಾ ಬೆಳವಣಿಗೆಗೆ ಇದು ಪೂರಕ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.