ADVERTISEMENT

ಪದವಿಪೂರ್ವ ಶಿಕ್ಷಣ ಇಲಾಖೆಯ ಅವಾಂತರ

ತೇಜಸ್ವಿ, ಚಿಕ್ಕಮಗಳೂರು
Published 22 ಜುಲೈ 2014, 19:30 IST
Last Updated 22 ಜುಲೈ 2014, 19:30 IST

ಪದವಿಪೂರ್ವ ಕಾಲೇಜುಗಳು ಆರಂಭ­ವಾಗಿ ಎರಡು ತಿಂಗಳಾಗುತ್ತ ಬಂದಿದ್ದರೂ ಪಠ್ಯಪುಸ್ತಕಗಳು ಇನ್ನೂ ದೊರೆಯುತ್ತಿಲ್ಲ,
ಇತರೆ ಎಲ್ಲಾ ಸರ್ಕಾರಿ ನೌಕರರಿಗೆ ಎರಡು ವರ್ಷಗಳ ಕಾಯಂಪೂರ್ವ ಸೇವಾ ಅವಧಿ ನಿಗದಿಪಡಿಸಿದ್ದರೂ, ಪದವಿಪೂರ್ವ ಉಪ­ನ್ಯಾಸ­­ಕರಿಗೆ ಮಾತ್ರ 4 ವರ್ಷಗಳ ಕಾಯಂ­ಪೂರ್ವ ಸೇವಾ ಅವಧಿ ನಿಗದಿಪಡಿಸಿದೆ ಸರ್ಕಾರ, ಪ್ರಾಥಮಿಕ, ಪ್ರೌಢಶಾಲಾ ಶಿಕ್ಷಕರಿಗೆ ಹಾಗೂ ಪದವಿ ಕಾಲೇಜು ಉಪನ್ಯಾಸಕರಿಗೆ ವಾರಕ್ಕೆ 16 ಗಂಟೆಗಳ ಬೋಧನಾ ಅವಧಿ, ಆದರೆ ಪದವಿಪೂರ್ವ ಉಪನ್ಯಾಸಕರಿಗೆ ಮಾತ್ರ ವಾರಕ್ಕೆ 20 ಗಂಟೆಗಳ ಬೋಧನಾ ಅವಧಿ, ವೇತನ ತಾರತಮ್ಯದ ವಿರುದ್ಧ ಹೋರಾಡಿದರೆ ಬಗೆಹರಿಸುವ ಆಶ್ವಾಸನೆ ನೀಡಿ ಕಣ್ಣಿಗೆ ಮಣ್ಣೆರಚಲಾಗಿದೆ.

2007ರ ನಂತರ ನೇಮಕಗೊಂಡು ಉಪನ್ಯಾಸಕರಿಗೆ ₨ 500  ವಿಶೇಷ ಭತ್ಯೆ ನೀಡುತ್ತಿಲ್ಲ. ಈ ಎಲ್ಲಾ ಅಂಶ­ಗಳನ್ನು ನೋಡಿದರೆ ಸರ್ಕಾರ, ಶಿಕ್ಷಣ ಮಂತ್ರಿ­ಗಳು ಪದವಿಪೂರ್ವ ಉಪನ್ಯಾಸಕರು ಹಾಗೂ 6 ಲಕ್ಷ ವಿದ್ಯಾರ್ಥಿ­ಗಳ ವಿರುದ್ಧ ಬಿದ್ದು ಹಿತ­ಕಾಯಲು ವಿಫಲ­ರಾಗಿದ್ದಾರೆ.  ಪಠ್ಯಪುಸ್ತಕ ನೀಡದೇ ಇದ್ದರೂ ಶಿಕ್ಷಣ ಮಂತ್ರಿಗಳಿಗೆ ಅಧಿಕಾರ­ದಲ್ಲಿ ಮುಂದು­ವರಿಯುವ ನೈತಿಕ ಹಕ್ಕು ಇದೆಯೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.