ADVERTISEMENT

ಪೊಲೀಸರು ಬಲಿಪಶುಗಳೇ?

​ಪ್ರಜಾವಾಣಿ ವಾರ್ತೆ
Published 22 ಜುಲೈ 2014, 19:30 IST
Last Updated 22 ಜುಲೈ 2014, 19:30 IST

ರಾಜ್ಯದಲ್ಲಿ ಇತ್ತೀಚೆಗೆ ಹೆಚ್ಚುತ್ತಿರುವ ಲೈಂಗಿಕ ದೌರ್ಜನ್ಯದ ಪ್ರಕರಣಗಳಲ್ಲಿ ಪೊಲೀಸರನ್ನು ಬಲಿಪಶು ಮಾಡ­ಲಾಗುತ್ತಿದೆ. ಕಾನೂನು ಮತ್ತು ಸುವ್ಯವಸ್ಥೆಯ ಹೊಣೆಗಾರಿಕೆ ಪೊಲೀಸಿನವರದಾದರೂ ಇಂತಹ ಸಂದರ್ಭ­ದಲ್ಲಿ ಸಾರ್ವಜನಿಕರು ಪೊಲೀಸಿನವರೊಂದಿಗೆ ಸಹಕರಿಸ­ಬೇಕಾಗುತ್ತದೆ.

ಇತ್ತೀಚೆಗೆ ಚಾಮರಾಜಪೇಟೆಯಲ್ಲಿ ಗಸ್ತಿನಲ್ಲಿದ್ದ ಪೊಲೀಸರು ಸಂಶಯಾಸ್ಪದ ದ್ವಿಚಕ್ರ ವಾಹನ ಸವಾರನನ್ನು ನಿಲ್ಲಿಸಿ ತಪಾಸಣೆ ಮಾಡುವ ಸಂದರ್ಭದಲ್ಲಿ ಆತ ಉದ್ಧಟತನದಿಂದ ವರ್ತಿಸಿದ್ದನ್ನು ನಾನು ಗಮನಿಸಿದ್ದೇನೆ. ಸಾರ್ವಜನಿಕರು ಪೊಲೀಸರಿಗೆ ಸಹಕಾರ ನೀಡಬೇಕಲ್ಲವೇ?

ಲೈಂಗಿಕ ದೌರ್ಜನ್ಯದ ಪ್ರಕರಣದಲ್ಲಿ ಪೊಲೀಸರನ್ನು ಹಿಗ್ಗಾಮುಗ್ಗಾ ಟೀಕಿಸಿದ ಜನಪ್ರತಿನಿಧಿಗಳು ಜೀವದ ಹಂಗು ತೊರೆದು ಕಳ್ಳರು, ಕೊಲೆಗಾರರನ್ನು ಹಿಡಿದ ದಕ್ಷ ಪೊಲೀ­ಸ­ರನ್ನು ಪ್ರಶಂಸಿಸಿಲ್ಲ. ಮೂಲಸೌಲಭ್ಯಗಳ ಕೊರತೆ, ಉನ್ನತ ಸ್ಥಾನದಲ್ಲಿರುವವರ ಒತ್ತಡ, ರಜೆ ಸೌಲಭ್ಯಗಳಿಲ್ಲದೆ, ಸರಿ­ಯಾದ ಸಮಯಕ್ಕೆ ಊಟ ಮಾಡದೆ ಪೊಲೀಸರು ಅನಾ­ರೋಗ್ಯಕ್ಕೆ ತುತ್ತಾಗುತ್ತಿರುವುದಕ್ಕೆ ಮಾನವೀಯ ನೆಲೆಯಲ್ಲಿ ಸ್ಪಂದಿಸಬೇಕಾಗಿದೆ. ‘ಅನಿಷ್ಟಕ್ಕೆಲ್ಲಾ ಶನೀಶ್ವರನೇ ಕಾರಣ’­ನೆಂಬಂತೆ ಪೊಲೀಸ್ ಅಧಿಕಾರಗಳನ್ನು ವರ್ಗಾವಣೆ ಮಾಡಿ­ರುವುದು ಎಷ್ಟು ಸರಿ? ಇಂತಹ ಪ್ರಕರಣಗಳು ಪ್ರಾಮಾ­ಣಿಕ­ವಾಗಿ ಕೆಲಸ ಮಾಡುವ ದಕ್ಷ ಪೊಲೀಸರ ನೈತಿಕ ಸ್ಥೈರ್ಯ­ವನ್ನು ಕುಗ್ಗಿಸುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.