ಇತ್ತೀಚೆಗೆ ನಡೆದ ಹಲವು ಪ್ರಕರಣಗಳಲ್ಲಿ ನಾವು ಕಂಡಂತೆ ಜನಪ್ರತಿನಿಧಿಗಳೇ ರೌಡಿ ಪುಂಡರ ಜೊತೆ ಜೊತೆಗೆ ಕಾಣಿಸಿಕೊಳ್ಳುತ್ತಿದ್ದಾರೆ (ಯಾವ ನಾಚಿಕೆಯಿಲ್ಲದೆ). ಹಾಗಿರುವಾಗ ಅಂತಹ ರೌಡಿ ಶೀಟರ್ಗಳ ಸಹಚರರು ಮಾಡುವ ದುಷ್ಕೃತ್ಯಗಳನ್ನು ಪೊಲೀಸರಾದರೂ ಹೇಗೆ ನಿಭಾಯಿಸುವರು? ಸಾಲದ್ದಕ್ಕೆ ಅನೇಕ ಅತ್ಯಾಚಾರಗಳ ಹಿಂದೆ ದೊಡ್ಡದೊಡ್ಡವರ ಹೆಸರು ಕೇಳಿಬಂದರೂ ಯಾರೂ ಜೈಲುವಾಸಿಗಳಾದ ಉದಾಹರಣೆಯಿಲ್ಲ.
ನಮ್ಮ ಬಡಪಾಯಿ ಪೊಲೀಸರು ಯಾರಿಗಾಗಿ ದುಡಿಯುತ್ತಿದ್ದಾರೋ ಅವರಿಂದ ಯಾವ ರಕ್ಷಣೆಯೂ ಸಿಕ್ಕದ ಅತಂತ್ರ ಸ್ಥಿತಿ ಅವರದ್ದು. ಪೊಲೀಸರ ಕಡೆ ಬೆರಳು ಮಾಡುತ್ತಿರುವ ಎಲ್ಲರೂ ಸಾರ್ವಜನಿಕರಾಗಿ ತಮ್ಮ ಕರ್ತವ್ಯದ ಬಗ್ಗೆ ಒಮ್ಮೆಯಾದರೂ ಆಲೋಚಿಸಿದ್ದಾರೆಯೇ?
–ರಾಘವೇಂದ್ರ ಬಿ.ಕೆ., ಬೆಂಗಳೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.