ADVERTISEMENT

ಬಾಯ್ತೆರೆದಿರುವ ಮ್ಯಾನ್‌ಹೋಲ್‌

ಹೇಮಂತ ಬಿ.ಆರ್‌.
Published 13 ಏಪ್ರಿಲ್ 2015, 19:30 IST
Last Updated 13 ಏಪ್ರಿಲ್ 2015, 19:30 IST
ಬಾಯ್ತೆರೆದಿರುವ ಮ್ಯಾನ್‌ಹೋಲ್‌
ಬಾಯ್ತೆರೆದಿರುವ ಮ್ಯಾನ್‌ಹೋಲ್‌   

ನಗರದ ಕೇಂದ್ರ ಎಂದೇ ಬಿಂಬಿತವಾಗಿರುವ ಎಂ.ಜಿ ರಸ್ತೆಯ ಹಿಂಭಾಗವಿರುವ ಚರ್ಚ್‌ ಸ್ಟ್ರೀಟ್‌ನಲ್ಲಿ ಕಳೆದ ಒಂದು ತಿಂಗಳಿನಿಂದ ಮ್ಯಾನ್‌ಹೋಲ್‌ ಬಾಯಿ ತೆರೆದುಕೊಂಡಿದೆ. ರಸ್ತೆ ಹಾಗೂ ಪಾದಚಾರಿ ಮಾರ್ಗ ಎರಡಕ್ಕೂ ಹೊಂದಿಕೊಂಡಿರುವಂತೆ ಇರುವ ಈ ಮ್ಯಾನ್‌ಹೋಲ್‌ ಮಳೆ ಬಂದರೆ ನೀರು ತುಂಬಿಕೊಳ್ಳುತ್ತದೆ. ಇದರಿಂದಾಗಿ ಈ ರಸ್ತೆಯಲ್ಲಿ ಸಂಚರಿಸುವ ಸಾರ್ವಜನಿಕರಿಗೆ ಕಷ್ಟವಾಗುತ್ತಿದೆ. ಅದರಲ್ಲೂ ರಾತ್ರಿವೇಳೆ ಸಂಚರಿಸುವವರಿಗೆ ತುಂಬಾ ಕಷ್ಟವಾಗುತ್ತಿದೆ.

ಹಗಲು ಅಥವಾ ರಾತ್ರಿ ಮಕ್ಕಳೇನಾದರೂ ನೋಡದೇ ಕಾಲಿಟ್ಟರೆ ಸೀದಾ ಒಳಗೆ ಹೋಗುತ್ತಾರೆ. ಮಳೆ ಬಂದು ನೀರು ನಿಂತರೆ ಖಂಡಿತ ಅಪಾಯ ತಪ್ಪಿದ್ದಲ್ಲ. ಆದ್ದರಿಂದ ಸಂಬಂಧಪಟ್ಟವರು ಆದಷ್ಟು ಬೇಗ ಇದರ ಬಗ್ಗೆ ಗಮನ ಹರಿಸಿ ಹಾಳಾಗಿ ತೆರೆದುಕೊಂಡಿರುವ ರುವ ಮ್ಯಾನ್‌ಹೋಲ್‌ ಅನ್ನು ಆದಷ್ಟು ಬೇಗ ಮುಚ್ಚಬೇಕು ಎಂದು ವಿನಂತಿಸಿಕೊಳ್ಳುತ್ತೇನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.