ADVERTISEMENT

ಬೇಡವಾದ ‘ಅತಿಥಿ’

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 12 ಫೆಬ್ರುವರಿ 2016, 19:30 IST
Last Updated 12 ಫೆಬ್ರುವರಿ 2016, 19:30 IST

ನಾನು, ಸರ್ಕಾರಿ ಕನ್ನಡ ಶಾಲಾ ಅತಿಥಿ ಮಾಸ್ತರಾಗಿ ಐದು ವರ್ಷಗಳಿಂದಲೂ, ತಿಂಗಳಿಗೆ ಐದು ಸಾವಿರ ರೂಪಾಯಿ ಪಗಾರದಂತೆ, ಶಾಲಾ ದಿನಗಳಲ್ಲಿ ಒಂದು ದಿನವೂ ಬಿಡುವಿಲ್ಲದಂತೆ ಪಾಠ ಮಾಡಿದ್ದೇನೆ. ಕನ್ನಡ ಶಾಲೆಗಳಿಗೆ ಸರ್ಕಾರ ನೇಮಿಸಿದ ಮಾಸ್ತರರು ಈ ತಿಂಗಳ 7ರಂದು ಡ್ಯೂಟಿಗೆ ಹಾಜರಾದ ಕಾರಣ  ನಾವೆಲ್ಲರೂ ಈಗ ಬೀದಿಪಾಲಾಗಿದ್ದೇವೆ.

ಮುಂದಿನ ವಾರ ಹೈಸ್ಕೂಲ್‌ಗಳಿಗೂ ಹೊಸ ಮಾಸ್ತರರು ಬರಲಿದ್ದಾರೆ. ಪರಿಣಾಮವಾಗಿ ಅಲ್ಲಿಂದಲೂ ಅತಿಥಿ ಶಿಕ್ಷಕರು ಹೊರ ಬರುತ್ತಾರೆ. ಇದು ನಮ್ಮಂಥವರ ಗೋಳು.

ಕಾಲೇಜುಗಳಲ್ಲಿ ತಿಂಗಳಿಗೆ 12 ಸಾವಿರ ರೂಪಾಯಿ ಪಗಾರ ಪಡೆಯುವ ಅತಿಥಿ ಉಪನ್ಯಾಸಕರ ಬಗೆಗೆ ಕೆಲವು ಸಾಹಿತಿ–ಹೋರಾಟಗಾರರು ಮಾನವೀಯ ಮಾತು ಆಡಿದ್ದಾರೆ. ಅದೇ ಮಾತು ನಮಗ್ಯಾಕೆ ಅನ್ವಯವಾಗುವುದಿಲ್ಲ?
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.