ADVERTISEMENT

ಲೋಪ ಸರಿಪಡಿಸಿ

ಬೇ.ನೆ.ಶ್ರೀನಿವಾಸಮೂರ್ತಿ, ತುಮಕೂರು
Published 31 ಜುಲೈ 2015, 19:45 IST
Last Updated 31 ಜುಲೈ 2015, 19:45 IST

ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಈ ಬಾರಿ ನಡೆಯುತ್ತಿರುವ ಶಿಕ್ಷಕರ ಅರ್ಹತಾ ಪರೀಕ್ಷೆಗೆ ಆನ್‌ಲೈನ್‌ ಅರ್ಜಿ ತುಂಬುವಾಗ ಆಗುತ್ತಿರುವ ಅನನುಕೂಲಗಳನ್ನು ಹೇಳಿದಷ್ಟೂ ತೀರದು. ಅದರಲ್ಲೂ ವಿಜ್ಞಾನ ವಿಭಾಗದವರು, ಪತ್ರಿಕೆ ಎರಡರಲ್ಲಿ ಪರೀಕ್ಷೆಗೆ ಐಚ್ಛಿಕ ಪತ್ರಿಕೆಯಾಗಿ ವಿಜ್ಞಾನ ಮತ್ತು ಗಣಿತ ಎಂದು ಭರ್ತಿ ಮಾಡಿ ಅರ್ಜಿಯನ್ನು ಹಾಕಿದರೂ ಅದು ತಾನೇತಾನಾಗಿ ಸಮಾಜ ವಿಜ್ಞಾನ ಎಂದು ಅಪ್‌ಲೋಡ್‌ ಆಗುತ್ತಿದೆ. ಪ್ರಿವ್ಯೂನಲ್ಲೂ ಪರೀಕ್ಷೆಗೆ ಐಚ್ಛಿಕ ಪತ್ರಿಕೆಯ ಸ್ಥಳದಲ್ಲಿ ವಿಜ್ಞಾನ ಮತ್ತು ಗಣಿತ      ಎಂದು ಕಂಡುಬಂದರೂ, ಅರ್ಜಿ ತುಂಬಿದ ನಂತರ ಅದು ಸಮಾಜ ವಿಜ್ಞಾನ ಎಂದು ಬದಲಾಗಿರುತ್ತದೆ. ಇದು ತಿಳಿಯದೇ ಹಣವನ್ನು ಪಾವತಿಸಲಾಗಿದೆ. ಆದರೆ ಕೊನೆಗೆ ಅರ್ಜಿ ಡೌನ್‌ಲೋಡ್‌ ಮಾಡಿಕೊಂಡಾಗಲೇ ಲೋಪದ ಅರಿವಾಗುತ್ತದೆ.

ಈ ಸಂಬಂಧ ಇಲಾಖೆಯನ್ನು ಸಂಪರ್ಕಿಸಲು ನೀಡಿರುವ ಮೊಬೈಲ್‌ ಸಂಖ್ಯೆಗಳು ಯಾವಾಗಲೂ ಸ್ವಿಚ್‌ ಆಫ್‌ ಎಂಬ ಪ್ರತ್ಯುತ್ತರ ನೀಡುತ್ತಿವೆ. ಹಾಗಾದರೆ ನಾವು ಯಾರನ್ನು ಸಂಪರ್ಕಿಸಬೇಕು?  ಅನೇಕ ಬಡ ಅಭ್ಯರ್ಥಿಗಳಿಗೆ ಎರಡೆರಡು ಬಾರಿ ಅರ್ಜಿ ಸಲ್ಲಿಸುವ ಸಾಮರ್ಥ್ಯವಿರುವುದಿಲ್ಲ. ಕೂಡಲೇ ಇಲಾಖೆ ಈ ತಪ್ಪುಗಳನ್ನು ಸರಿಪಡಿಸಬೇಕು ಅಥವಾ ಅಭ್ಯರ್ಥಿಗಳು ಭರಿಸಿರುವ ಹಣ ಹಿಂತಿರುಗಿಸಬೇಕು. ಶಿಕ್ಷಣ ಇಲಾಖೆ ಈ ಬಗ್ಗೆ ಪ್ರತಿಕ್ರಿಯಿಸಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.