ADVERTISEMENT

ವಿರೋಧವಿದೆ

ಡಾ.ಶ್ರೀಧರ ಉಡುಪ ದಾವಣಗೆರೆ
Published 6 ಮೇ 2016, 19:30 IST
Last Updated 6 ಮೇ 2016, 19:30 IST

ಕೆ.ಎಂ.ಸಿ. ಮತ್ತು ವೈದ್ಯರ ಜಟಾಪಟಿ (ಪ್ರ.ವಾ., ಮೇ 2). ಈ ಕುರಿತು ವರದಿಗೆ ವಂದನೆ. ಆದರೆ ವರದಿಯಲ್ಲಿ ‘ವೈದ್ಯರಾರೂ ನಿರಂತರ ವೈದ್ಯಕೀಯ ಶಿಕ್ಷಣ (ಸಿಎಂಇ) ಎಂಬ ಪರಿಕಲ್ಪನೆಯನ್ನು ವಿರೋಧಿಸುತ್ತಿಲ್ಲ’ ಎಂದಿರುವುದು ತಪ್ಪು. ನನ್ನಂಥ ಅನೇಕ ವೈದ್ಯರು ಸಿಎಂಇಯನ್ನೇ ಪ್ರಶ್ನಿಸುತ್ತಿದ್ದಾರೆ, ವಿರೋಧಿಸುತ್ತಿದ್ದಾರೆ. ಏಕೆಂದರೆ ಇಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ.

ಕೆಲವು ವೈದ್ಯರಿಗೆ ಏನೂ ಗೊತ್ತಿಲ್ಲ. ಏನು ಕಲಿಸಬೇಕೆಂಬ ಸ್ಪಷ್ಟ ಮಾಹಿತಿ ಇಲ್ಲ. ವಿದೇಶಿ ನಿಯಮಗಳು ಭಾರತಕ್ಕೆ ಅನ್ವಯಿಸುವುದಿಲ್ಲ. ಏಕೆಂದರೆ ಇಲ್ಲಿ ಸರ್ಕಾರವೇ ನಡೆಸುವ ಆಯುರ್ವೇದ, ಸಿದ್ಧ, ಯುನಾನಿ, ಹೋಮಿಯೋಪಥಿ ಮುಂತಾದ ಕಾಲೇಜು, ಆಸ್ಪತ್ರೆಗಳಿವೆ. ವಿದೇಶಗಳಲ್ಲಿ ಇವೆಲ್ಲಾ ಇಲ್ಲ.

ಅಲ್ಲಿ ಎಲ್ಲವೂ  ವೈಜ್ಞಾನಿಕವಾಗಿ ನಡೆಯುತ್ತದೆ. ಎಲ್ಲರಿಗೂ ವೈದ್ಯಕೀಯ ವಿಮೆಯಡಿ ಉತ್ಕೃಷ್ಟವಾದ ಅಲೋಪಥಿ ಚಿಕಿತ್ಸೆ ಮಾತ್ರ ಇದೆ. ಕೆಲಸದ ಭದ್ರತೆ ಇದೆ. ಇವೆಲ್ಲಾ ಗೊತ್ತಾದರೆ ಶೇ 90ರಷ್ಟು ವೈದ್ಯರು ವಿರೋಧಿಸುತ್ತಾರೆ.

ಆದ್ದರಿಂದ ನಮ್ಮಂಥವರು ಸಾರಾಸಗಟಾಗಿ ಸಿಎಂಇಯನ್ನು ವಿರೋಧಿಸುತ್ತೇವೆ. ಕೆ.ಎಂ.ಸಿ.ಯು ಬ್ರಿಟಿಷರಿಂದ ಬಂದ ಅಧಿಕಾರ ದುರ್ಬಳಕೆ, ದರ್ಪ ಪ್ರಯೋಗಿಸಿ ತನ್ನ ಕಪಿಮುಷ್ಟಿಯಲ್ಲಿ ಎಲ್ಲರನ್ನೂ ಸಿಲುಕಿಸುವ ಹವಣಿಕೆಯಲ್ಲಿದೆ.  ಅಲ್ಲದೇ ಸರ್ಕಾರದ ಕುತಂತ್ರವೂ ಅಡಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.