ADVERTISEMENT

ವಿಲೀನಗೊಳ್ಳಲಿ

ಡಾ.ಎಚ್‌.ಆರ್‌.ಪ್ರಕಾಶ್‌
Published 28 ಜುಲೈ 2016, 19:30 IST
Last Updated 28 ಜುಲೈ 2016, 19:30 IST

ಕೃಷಿ ಹಾಗೂ ತೋಟಗಾರಿಕಾ ಇಲಾಖೆಗಳಲ್ಲಿ ವಿಸ್ತರಣಾ ಸಿಬ್ಬಂದಿಯ ಕೊರತೆ ಇರುವುದರಿಂದ ನೂತನ ತಂತ್ರಜ್ಞಾನವನ್ನು ರೈತರ ಮನೆ ಬಾಗಿಲಿಗೆ ತಲುಪಿಸಲು ಸಾಧ್ಯವಾಗುತ್ತಿಲ್ಲ.

ರೇಷ್ಮೆಯಂಥ ಒಂದೇ ಬೆಳೆಗೆ ರೇಷ್ಮೆ ಇಲಾಖೆಯ ಹೋಬಳಿ ಮಟ್ಟದಲ್ಲಿ 8–10 ಸಿಬ್ಬಂದಿ ಇರುತ್ತಾರೆ. ರಾಗಿ, ಭತ್ತ, ಜೋಳ, ತೊಗರಿ ಮುಂತಾದ 15 ಬೆಳೆಗಳಿಗೆ ಕೃಷಿ ಇಲಾಖೆಯ ಹೋಬಳಿ ಮಟ್ಟದ ರೈತ ಸಂಪರ್ಕ ಕೇಂದ್ರದಲ್ಲಿ ಒಬ್ಬಿಬ್ಬರು ಸಿಬ್ಬಂದಿ ಇರುತ್ತಾರೆ.  ತೆಂಗು, ತರಕಾರಿ, ಹೂವು, ಔಷಧೀಯ ಸಸ್ಯಗಳನ್ನು ಒಳಗೊಂಡ ತೋಟಗಾರಿಕಾ ಇಲಾಖೆಗೆ ಹೋಬಳಿ ಮಟ್ಟದಲ್ಲಿ ಒಬ್ಬ ಸಿಬ್ಬಂದಿಯೂ ಇರುವುದಿಲ್ಲ.

ರೇಷ್ಮೆ, ಕೃಷಿ ಮತ್ತು ತೋಟಗಾರಿಕಾ ಇಲಾಖೆಗಳನ್ನು ಒಟ್ಟುಗೂಡಿಸಿ ಒಂದೇ  ಇಲಾಖೆಯಡಿ ತರುವುದರಿಂದ ವಿಸ್ತರಣಾ ಸಿಬ್ಬಂದಿ ಕೊರತೆಯನ್ನು ನೀಗಬಹುದಲ್ಲದೆ, ರೈತರ ಮನೆ ಬಾಗಿಲಿಗೆ ಈ ಮೂರೂ ಕ್ಷೇತ್ರಗಳ ತಂತ್ರಜ್ಞಾನವನ್ನು ಸುಲಭವಾಗಿ ತಲುಪಿಸಲು ಸಾಧ್ಯವಾಗುತ್ತದೆ.

ಈ ಇಲಾಖೆಗಳನ್ನು ಒಗ್ಗೂಡಿಸುವುದರಿಂದ ವಾಹನಗಳು, ಕಚೇರಿ ಸ್ಥಳಗಳು, ಪೀಠೋಪಕರಣಗಳು, ಕಂಪ್ಯೂಟರ್‌ ಕೊರತೆಯನ್ನು ಸುಲಭವಾಗಿ ಪರಿಹರಿಸಬಹುದು.

ರೈತರಿಗೆ ಒಂದೇ ಸೂರಿನಡಿ ಮಣ್ಣು, ನೀರಿನ ಸಂರಕ್ಷಣೆ, ಮಣ್ಣು ಪರೀಕ್ಷೆ, ನೀರಿನ ಪರೀಕ್ಷೆ, ಬಿತ್ತನೆ ಬೀಜ, ರಸಗೊಬ್ಬರ, ಕೀಟನಾಶಕಗಳನ್ನು  ಒದಗಿಸಬಹುದು. ಇದರಿಂದ ರಾಜಕೀಯವಾಗಿ ಸಮಸ್ಯೆಯಾಗಬಹುದು.

ಯಾಕೆಂದರೆ ಕೃಷಿ, ತೋಟಗಾರಿಕೆ ಮತ್ತು ರೇಷ್ಮೆಗೆ ಪ್ರತ್ಯೇಕ ಮಂತ್ರಿಗಳು ಇರುವುದರಿಂದ ಅಧಿಕಾರ ಹಂಚಿಕೆಗೆ ತೊಂದರೆಯಾಗುತ್ತದೆ. ಆದರೆ ರೈತರ ಒಳಿತಿಗಾಗಿ ಸರ್ಕಾರ ಈ ಸಮಸ್ಯೆಯನ್ನು ರಾಜಕೀಯವಾಗಿ ಬಗೆಹರಿಸಿಕೊಂಡು ಇಲಾಖೆಗಳ ವಿಲೀನಕ್ಕೆ ಮುಂದಾಗಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.