ADVERTISEMENT

ಶಿಕ್ಷಣವೊಂದೇ ಪರಿಹಾರ

​ಪ್ರಜಾವಾಣಿ ವಾರ್ತೆ
Published 19 ಜುಲೈ 2017, 19:30 IST
Last Updated 19 ಜುಲೈ 2017, 19:30 IST

ನಮ್ಮ ಹೆಣ್ಣು ಮಕ್ಕಳ ಕರಾಳ ಬದುಕನ್ನು ‘ದಂಧೆಯ ಒಡಲಾಳ’ ಸರಣಿ (ಪ್ರ.ವಾ) ವರದಿ ಬಹಳ ಚೆನ್ನಾಗಿ ಪರಿಚಯಿಸುತ್ತಿದೆ. ಹೆಣ್ಣುಮಕ್ಕಳ ಈ ಸ್ಥಿತಿಗೆ ಕಾರಣಗಳನ್ನು ಹುಡುಕುತ್ತಾ ಹೋದರೆ ನಮ್ಮ ಸಮಾಜ, ಪಾಲಕರು ಅಥವಾ ಗಂಡನೇ ಹೊಣೆಯಾಗಿರುವುದು ಸ್ಪಷ್ಟವಾಗುತ್ತದೆ.

ಹೆಣ್ಣು ಮಕ್ಕಳಿಗೆ ಮದುವೆಯೊಂದೇ ಜೀವನಾಧಾರ ಎಂದು ಪೋಷಕರು ಅವರ ಶಿಕ್ಷಣಕ್ಕೆ ಆದ್ಯತೆ ನೀಡದೆ ಚಿಕ್ಕ ವಯಸ್ಸಿಗೇ ಮದುವೆ ಮಾಡಿ, ತಮ್ಮ ಜವಾಬ್ದಾರಿ ಮುಗಿಯಿತೆಂದು ಸುಮ್ಮನಾಗಿಬಿಡುತ್ತಾರೆ.

ವಾಸ್ತವದಲ್ಲಿ ಹೆಣ್ಣು ಮಕ್ಕಳು ಜೀವನದಲ್ಲಿ ಬರುವ ಎಲ್ಲ ಕಷ್ಟಗಳನ್ನು ಎದುರಿಸಲು ಅಸಮರ್ಥರಾಗಿರುತ್ತಾರೆ.  ಶಿಕ್ಷಣವಿಲ್ಲದ ಕಾರಣ ಉದ್ಯೋಗ ಸಿಗದೆ ಕೆಲವರಿಗೆ ಈ ದಾರಿ ಅನಿವಾರ್ಯವಾಗಿರಬಹುದು. ಇನ್ನಾದರೂ ತಂದೆ ತಾಯಂದಿರು ಎಚ್ಚೆತ್ತುಕೊಳ್ಳಬೇಕು.
-ಸುಗುಣ, ನೆಲಮಂಗಲ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.