ADVERTISEMENT

ಸಂತತಿ ಹೆಚ್ಚಲಿ

​ಪ್ರಜಾವಾಣಿ ವಾರ್ತೆ
Published 29 ಜುಲೈ 2016, 19:30 IST
Last Updated 29 ಜುಲೈ 2016, 19:30 IST

‘ರತ್ನವಾಗುವುದು ಸೇವೆಯಿಂದಲೇ ವಿನಾ ಪ್ರತಿಭೆಯಿಂದಲ್ಲ’ ಎಂಬ ಆಕಾರ್‌ ಪಟೇಲ್‌ ಅವರ ಮಾತು ಮೆಚ್ಚತಕ್ಕದ್ದು (ಪ್ರ.ವಾ., ಜುಲೈ 25). ಈ ಒಂದು ಸಣ್ಣ ವಿಚಾರವೂ ತಿಳಿಯದ, ಜಾತಿ, ಜನಪ್ರಿಯತೆ ಹಾಗೂ ಹಣವನ್ನೇ ಮಾನದಂಡವನ್ನಾಗಿ ಒಪ್ಪಿಕೊಂಡು ‘ಭಾರತರತ್ನ’ ಕೊಟ್ಟಿರುವವರು ತಪ್ಪದೇ ಓದಬೇಕಾದ ಲೇಖನವಿದು. 

ಅವರ ಧೈರ್ಯಕ್ಕೆ ಮೆಚ್ಚುಗೆ ಸೂಚಿಸಲೇಬೇಕು. ದೇಶಕ್ಕೆ ಅಮೂಲ್ಯ ಸೇವೆಗೈದು ತಮ್ಮ ವಿದ್ವತ್ತನ್ನೇ ಧಾರೆಯೆರೆದು ದೇಶದ ಚರಿತ್ರೆಯನ್ನೇ ಬದಲಾಯಿಸಿದ ಮಹನೀಯರ ನಡುವೆ ಇಂಥ ಸ್ವಾರ್ಥಿಗಳ ಹೆಸರನ್ನು ನೋಡಿದರೆ ಭಾರತರತ್ನ ಪ್ರಶಸ್ತಿ ನೀಡುವುದನ್ನೇ ನಿಲ್ಲಿಸಿದರೆ ಒಳ್ಳೆಯದು ಎನಿಸುತ್ತದೆ.

ಹೀಗೆ ಧೈರ್ಯದಿಂದ ಸತ್ಯ ಹೇಳುವವರ ಸಂಖ್ಯೆ  ಹೆಚ್ಚಲಿ ಎಂಬುದಷ್ಟೆ  ನಮ್ಮ ನಿರೀಕ್ಷೆ.
-ಸಂಜೀವ ಸಿದ್ಧಾರ್ಥ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.