ADVERTISEMENT

ಸಲ್ಲದ ಆತುರ

ಚಂದ್ರಶೇಖರ ಪುಟ್ಟಪ್ಪ, ಬೆಂಗಳೂರು
Published 7 ಅಕ್ಟೋಬರ್ 2015, 19:54 IST
Last Updated 7 ಅಕ್ಟೋಬರ್ 2015, 19:54 IST

ರಾಜ್ಯದಲ್ಲಿ ಎಲ್ಇಡಿ ಬಲ್ಬ್‌ಗಳ ಬಳಕೆಯನ್ನು ಕಡ್ಡಾಯ ಮಾಡುವುದು ವಿದ್ಯುತ್ ಉಳಿತಾಯದ ದೃಷ್ಟಿಯಿಂದ ಸ್ವಾಗತಾರ್ಹ. ಆದರೆ ₹ 600 ಕೋಟಿ ವೆಚ್ಚ ಮಾಡಿ ಈ ಯೋಜನೆಯನ್ನು ಅನುಷ್ಠಾನಗೊಳಿಸಲು ತುದಿಗಾಲಲ್ಲಿ ನಿಂತು, ಕೇವಲ ಮೂರು ತಿಂಗಳಲ್ಲೇ ಅದನ್ನು ಕಡ್ಡಾಯಗೊಳಿಸಲು ತೋರಿಸುತ್ತಿರುವ ಸರ್ಕಾರದ ಅತಿ ಆಸಕ್ತಿ ಅರ್ಥವಾಗುತ್ತಿಲ್ಲ.

ರಾಜ್ಯ ಸರ್ಕಾರಿ ಸ್ವಾಮ್ಯದ ‘ಮೈಸೂರು ಲ್ಯಾಂಪ್ಸ್‌’ ಸಂಸ್ಥೆಯ ಪುನಶ್ಚೇತನ ಮತ್ತು ನೌಕರರ ಭದ್ರತೆ ಬಗ್ಗೆ ಯೋಚಿಸದಿರುವುದಕ್ಕೆ ಕಾರಣಗಳೇನು ಎನ್ನುವುದನ್ನು ಸರ್ಕಾರ ಸ್ಪಷ್ಟಪಡಿಸಬೇಕು. ಎಲ್‌ಇಡಿ ಬಲ್ಬ್‌ ಯೋಜನೆಗೆ ಬಳಸುವ ಅಷ್ಟೊಂದು ಹಣವನ್ನು ‘ಮೈಸೂರು ಲ್ಯಾಂಪ್ಸ್‌’ನಲ್ಲೇ ವಿನಿಯೋಗಿಸಿ ಅಲ್ಲೇ ಬಲ್ಬ್‌ಗಳನ್ನು ಉತ್ಪಾದನೆ ಮಾಡಿ ಯೋಜನೆಯನ್ನು ಹಂತಹಂತವಾಗಿ ಸಾಕಾರಗೊಳಿಸಲು ಸಾಧ್ಯವಿಲ್ಲವೇ? ಆಗ ಖಾಸಗಿಯವರು ಪೂರೈಸುವುದಕ್ಕಿಂತಲೂ ಕಡಿಮೆ ದರದಲ್ಲಿ ಬಲ್ಬ್‌ ಪಡೆಯಬಹುದಲ್ಲವೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.