ADVERTISEMENT

ಸಿರಿವಂತರ ಪ್ರತಾಪ

ಸುಮತಿ ಕೆ.ಎಸ್., ಮೈಸೂರು
Published 29 ಜನವರಿ 2015, 19:30 IST
Last Updated 29 ಜನವರಿ 2015, 19:30 IST

ಅಮೆರಿಕದ ಅಧ್ಯಕ್ಷ ಬರಾಕ್‌ ಒಬಾಮ ಭಾರತಕ್ಕೆ ಭೇಟಿ ನೀಡಿದ್ದರ  ಫಲವಾಗಿ ನಮ್ಮ ನಾಗರಿಕರ ಮೇಲೆ ₨ 900 ಕೋಟಿ ಹೊರೆ ಬಿತ್ತು. ಒಬಾಮ ಅವರ ಜೊತೆಗೆ ಟಿ.ವಿ ತುಂಬಾ ಕಾಣುತ್ತಿದ್ದವರು ಪ್ರಧಾನಿ ನರೇಂದ್ರ ಮೋದಿ. ಚಿನ್ನದ ದಾರದಿಂದ ತಮ್ಮ ಹೆಸರನ್ನು ಬಟ್ಟೆಯುದ್ದಕ್ಕೂ ಹೆಣೆದಿದ್ದ, ಲಂಡನ್ನಿನಲ್ಲಿ ಹೊಲಿದು ಸಿದ್ಧ­ಪಡಿಸಿದ್ದ ಸೂಟನ್ನು ಅವರು ಧರಿಸಿದ್ದರು. ಒಂದೇ ದಿನದಲ್ಲಿ ನಾಲ್ಕು ಬಾರಿ ಸೂಟು ಬದಲಾಯಿಸಿ ಮಿಂಚಿದ ಫ್ಯಾಷನ್ ಐಕಾನ್ ನಮ್ಮ ಹೆಮ್ಮೆಯ ಪ್ರಧಾನಿ! 

ಮಹಾತ್ಮ ಗಾಂಧಿ ಅವರು ದೇಶದ ಎಲ್ಲರಿಗೂ ಕನಿಷ್ಠ ಉಡುಪು ದೊರಕುವವರೆಗೂ ತಾವು ಅರೆಬೆತ್ತಲೆಯಾಗಿಯೇ ಇರಲು ನಿರ್ಧರಿಸಿ ವಿದೇಶಿಗರಿಂದ ‘ಫಕೀರ’ ಎನ್ನಿಸಿ­­­ಕೊಂಡಿ­ದ್ದರು. ಅದೇ ದಿರಿಸಿನಲ್ಲಿ ಲಂಡನ್ನಿನ ದುಂಡು ಮೇಜಿನ ಪರಿ­ಷತ್ತಿಗೂ ಹೋಗಿ­ಬಂದಿ-­ದ್ದರು. ಹರಿದಿದ್ದ ತಮ್ಮ ಶರ್ಟನ್ನು ಮುಚ್ಚಿಕೊಳ್ಳಲು ಮೇಲೊಂದು ಕೋಟು ತೊಟ್ಟು ರಷ್ಯಾಗೆ ಹೋದ ಮಾಜಿ ಪ್ರಧಾನಿ ಲಾಲ್‌ ಬಹದ್ದೂರ್‌ ಶಾಸ್ತ್ರಿ ನಿಗೂಢ­ವಾಗಿ ಪ್ರಾಣ ಕಳೆದುಕೊಂಡರು. ಇಂತಹ­­ವರಿಗೆ ಇಂದಿನ ಪ್ರಧಾನಿಯನ್ನು ಯಾವ ರೀತಿ ಹೋಲಿಸಲು ಸಾಧ್ಯ?

ದೇಶದ ಮೊದಲ ಪ್ರಧಾನಿಯ ಬಟ್ಟೆ ಲಂಡನ್ನಿನಿಂದ ಇಸ್ತ್ರಿಯಾಗಿ ಬರು­ತ್ತಿತ್ತಂತೆ. ಇಂದಿನ ರಾಷ್ಟ್ರೀಯ ಪಕ್ಷ­ವೊಂದರ ನಾಯಕಿಯ ಮನೆಗೆ ಇಟಲಿ­ಯಿಂದಲೇ ಬ್ರೆಡ್‌ ಬರಬೇಕಂತೆ.

ಅವ­ರೆಲ್ಲ ಚಿನ್ನದ್ದೋ ಬೆಳ್ಳಿಯದ್ದೋ ಚಮಚ­ವನ್ನು ಬಾಯಿಯಲ್ಲಿ ಇಟ್ಟುಕೊಂಡೇ ಹುಟ್ಟಿದ­ವರು. ಆದರೆ ನಮ್ಮ ಹೆಮ್ಮೆಯ ಪ್ರಧಾನಿ ‘ಚಾಯ್‌ವಾಲಾ’ ಆಗಿದ್ದವರು. ಬಡತನವನ್ನು ಅತಿ ಹತ್ತಿರದಿಂದ ನೋಡಿ­ದವರು. ಅವರ 5 ಮೀಟರ್ ಬಟ್ಟೆಗೆ ಆದ ಖರ್ಚು ₨ 9.27 ಲಕ್ಷ! ಇದು ಬಡ­ಜನರ ಬಗೆಗಿನ ಅವರ ಕಾಳಜಿಯನ್ನು ಯಾವ ರೀತಿ ತೋರಿಸುತ್ತದೆ?     

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.