ADVERTISEMENT

ಹಾಕಿಯನ್ನೂ ಬೆಂಬಲಿಸಿ

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2017, 19:04 IST
Last Updated 12 ನವೆಂಬರ್ 2017, 19:04 IST

ಭಾರತದ ಮಹಿಳಾ ಹಾಕಿ ತಂಡ, ಜಪಾನ್‌ನಲ್ಲಿ ನಡೆದ ಮಹಿಳೆಯರ ಏಷ್ಯಾಕಪ್‌ ಟೂರ್ನಿ ಗೆದ್ದು ಮಹತ್ವದ ಸಾಧನೆ ಮಾಡಿದೆ. 13 ವರ್ಷಗಳ ನಂತರ ಭಾರತದ ವನಿತೆಯರು ಈ ಸಾಧನೆ ಮಾಡಿದ್ದಾರೆ. ಇಂಥ ಐತಿಹಾಸಿಕ ಸಾಧನೆ ಮಾಡಿದ ಮಹಿಳೆಯರಿಗೆ ಯೋಗ್ಯ ರೀತಿಯ ಪ್ರೋತ್ಸಾಹ– ಪುರಸ್ಕಾರ ಲಭಿಸಿಲ್ಲ ಎಂಬುದು ಬೇಸರದ ಸಂಗತಿ.

ಕ್ರಿಕೆಟ್‌ ಒಂದೇ ಕ್ರೀಡೆಯಲ್ಲ ಎಂಬುದನ್ನು ನಮ್ಮ ಸರ್ಕಾರಗಳು ಅರಿತು, ಎಲ್ಲಾ ಕ್ರೀಡೆಗಳು ಮತ್ತು ಕ್ರೀಡಾಪಟುಗಳಿಗೆ ಸಮಾನ ಸ್ಥಾನಮಾನ, ಸೌಲಭ್ಯಗಳನ್ನು ಕೊಡಬೇಕು. ಇತರ ಕ್ರೀಡೆಗಳಲ್ಲಿ ಮಿಂಚುತ್ತಿರುವ ಕ್ರೀಡಾಪಟುಗಳನ್ನು ಗುರುತಿಸಿ, ಆರ್ಥಿಕ ಹಾಗೂ ಇತರ ಅಗತ್ಯ ನೆರವು ನೀಡಿದರೆ ಮಾತ್ರ ಕ್ರೀಡಾ ಕ್ಷೇತ್ರದಲ್ಲಿ ನಮ್ಮವರಿಂದ ಮಹತ್ತರ ಸಾಧನೆ ನಿರೀಕ್ಷಿಸಲು ಸಾಧ್ಯ.

–ಕಾವ್ಯ ಎಚ್. ಎನ್., ದಾವಣಗೆರೆ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.