ADVERTISEMENT

ಹಾಸ್ಯಾಸ್ಪದ

​ಪ್ರಜಾವಾಣಿ ವಾರ್ತೆ
Published 6 ಮೇ 2015, 19:30 IST
Last Updated 6 ಮೇ 2015, 19:30 IST

ರಾಷ್ಟ್ರಕವಿ ಆಯ್ಕೆ ಸಮಿತಿಯ ನಿರ್ಧಾರ ಸರಿಯಾಗಿದೆ. ‘ರಾಷ್ಟ್ರಕವಿ’ ಪ್ರಶಸ್ತಿಯನ್ನು ಕೇಂದ್ರ ಸರ್ಕಾರ ನೀಡಿದರೆ, ಅದು ನಮ್ಮ ಕನ್ನಡದ ಕವಿಗಳಿಗೆ ಲಭಿಸಿದರೆ ನಾವು ಹೆಮ್ಮೆಪಡಬೇಕು; ಅದು ಬಿಟ್ಟು ನಮ್ಮವರನ್ನು ನಾವೇ ‘ರಾಷ್ಟ್ರಕವಿ’ ಎಂದು ಕರೆದುಕೊಳ್ಳುವುದು ಹಾಸ್ಯಾಸ್ಪದ. 

ಆಯ್ಕೆ ಸಮಿತಿಯ ನಿರ್ಧಾರವನ್ನು ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಸಮ್ಮತಿಸಿದಂತಿದೆ. ಆದರೆ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪುಂಡಲೀಕ ಹಾಲಂಬಿ ಅವರು ಅದನ್ನು ವಿರೋಧಿಸಿ ಮಾತನಾಡಿದ್ದಾರೆ. ಸಮಿತಿಯ ನಿರ್ಧಾರವನ್ನು ಎಲ್ಲರೂ ಒಪ್ಪಬೇಕೆಂದಿಲ್ಲ. ಆದರೆ, ಹಾಲಂಬಿಯವರು ವಿರೋಧಿಸಲು ನೀಡಿರುವ ಹೋಲಿಕೆಗಳು (ಪ್ರ.ವಾ., ಮೇ 6)  ನಗು ತರಿಸುತ್ತವೆ.

ಹಾಲಂಬಿಯವರು ಅರ್ಥ ಮಾಡಿಕೊಳ್ಳಬೇಕು; ಪ್ರಶಸ್ತಿಗಳಿಂದ ಒಂದು ಭಾಷೆಗೆ ಹಾಗೂ ಭಾಷಿಕ ಕುಲಕ್ಕೆ ಏನೂ ಸಿಗುವುದಿಲ್ಲ ಹಾಗೂ ಜಾಗತಿಕ ಭಾಷಿಕ ಚಟುವಟಿಕೆಗಳಿಗೆ ಸರಿಸಮಾನವಾಗಿ ನಿಲ್ಲುತ್ತಿರುವ ಕನ್ನಡ ಸಾಹಿತ್ಯ ಲೋಕದಲ್ಲಿ ಒಬ್ಬಿಬ್ಬರಿಗೆ ಇಂಥಾ ಪ್ರಶಸ್ತಿ ಕೊಟ್ಟರೆ ಅದು ಉಳಿದ ಸಾಹಿತಿಗಳಿಗೆ ಮಾಡುವ ಅವಮಾನವಾಗುತ್ತದೆ. ಜವಾಬ್ದಾರಿಯುತ ಸಂಸ್ಥೆಯೊಂದರ ಅಧ್ಯಕ್ಷ ಆಗಿರುವ ಹಾಲಂಬಿಯವರು ಆಯ್ಕೆ ಸಮಿತಿ ಅಧ್ಯಕ್ಷರ ಮಾತುಗಳನ್ನು ಲೇವಡಿ ಮಾಡಿರುವುದು ಸರಿಯಲ್ಲ.
ಹುಲಿಕುಂಟೆ ಮೂರ್ತಿ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.