ADVERTISEMENT

‘ಕೆರೆಭಾಗ್ಯ’ ಘೋಷಿಸಿ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2015, 19:30 IST
Last Updated 16 ಏಪ್ರಿಲ್ 2015, 19:30 IST

ವೋಟ್‌ ಬ್ಯಾಂಕ್‌ ಆಧರಿಸಿ ಕೆಲವು ವರ್ಗಗಳಿಗೆ ಮಾತ್ರ ಉಪಯೋಗವಾಗುವಂತೆ ಅನ್ನಭಾಗ್ಯ, ಶಾದಿಭಾಗ್ಯ, ದಂತಭಾಗ್ಯ, ಕ್ಷೀರ ಭಾಗ್ಯದಂತಹ ಯೋಜನೆಗಳನ್ನು  ಸರ್ಕಾರ ಘೋಷಿಸಿದೆ. ಆದರೆ ಎಲ್ಲ ವರ್ಗದವರಿಗೂ ಅನುಕೂಲವಾಗುವಂತಹ ರಸ್ತೆಭಾಗ್ಯ ಮತ್ತು ಕೆರೆಭಾಗ್ಯವನ್ನು ಏಕೆ  ಘೋಷಿಸಿಲ್ಲ?

ರಾಜ್ಯದಲ್ಲಿ ಕೆಟ್ಟುಹೋಗಿರುವ ರಸ್ತೆಗಳನ್ನು ದುರಸ್ತಿ ಮಾಡಿಸಿದರೆ ಜನರ ಆರೋಗ್ಯ ವರ್ಧಿಸುತ್ತದೆ ಮತ್ತು ಅಪಘಾತದ ಪ್ರಮಾಣ ತಗ್ಗುತ್ತದೆ. ತಮಿಳುನಾಡಿನಲ್ಲಿ ವ್ಯರ್ಥವಾಗಿ ಸಮುದ್ರ ಸೇರುವ ನೀರನ್ನು ಮಳೆಗಾಲದಲ್ಲಿ ಕಾಲುವೆಗಳ ಮೂಲಕ ಎಲ್ಲ ಕೆರೆಗಳಿಗೆ ತುಂಬಿಸುತ್ತಾರೆ. ಇದರಿಂದ ಬೇಸಿಗೆಯಲ್ಲಿ ದನಕರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಮತ್ತು ಅಂತರ್ಜಲ ಸಮಸ್ಯೆ ಇರುವುದಿಲ್ಲ.

ಬೋರ್‌ವೆಲ್‌ಗಳಲ್ಲಿ ಬೇಸಿಗೆಯಲ್ಲೂ ನೀರು ಬರುವುದರಿಂದ ವ್ಯವಸಾಯಕ್ಕೆ ಮತ್ತು ಕುಡಿಯುವ ನೀರಿಗೆ ತೊಂದರೆಯಾಗದು.
ಕರ್ನಾಟಕದಲ್ಲಿ ಬೇಸಿಗೆ ಬಂದರೆ ಕುಡಿಯುವ ನೀರಿಗೆ ಹಾಹಾಕಾರ ಶುರುವಾಗುತ್ತದೆ. ಆದ್ದರಿಂದ ಮುಖ್ಯಮಂತ್ರಿಗಳು ಕಡ್ಡಾಯವಾಗಿ ‘ಕೆರೆ ಭಾಗ್ಯ’ ಘೋಷಿಸಿ, ಜನಸಾಮಾನ್ಯರ ನೀರಿನ ಬವಣೆ ನೀಗಿಸಲಿ.
ಎಂ.ಎಸ್‌. ಧರ್ಮೇಂದ್ರ, ದೊಡ್ಡಮಗ್ಗೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.