ADVERTISEMENT

ಯಾರಿಗೋ ಬರೆ

​ಪ್ರಜಾವಾಣಿ ವಾರ್ತೆ
Published 6 ಜುಲೈ 2018, 17:02 IST
Last Updated 6 ಜುಲೈ 2018, 17:02 IST

ಬಹು ನಿರೀಕ್ಷಿತ ಸಾಲಮನ್ನಾ ಕೊಡುಗೆಯನ್ನು ಕುಮಾರಸ್ವಾಮಿ ಅವರು ಬಜೆಟ್‌ ಭಾಷಣದಲ್ಲಿ ಪ್ರಕಟಿಸಿದ್ದಾರೆ. ಆದರೆ, ವೆಂಕಣ್ಣನನ್ನು ಮೆಚ್ಚಿಸಲು ಸೀನಣ್ಣನಿಗೆ ಬರೆ ಹಾಕಿದಂತಿದೆ. ಪೆಟ್ರೋಲ್, ಡೀಸೆಲ್‌ ಬೆಲೆ ಹೆಚ್ಚಳದ ಪರಿಣಾಮವಾಗಿ ಮತ್ತೆ ಎಲ್ಲಾ ಅತ್ಯವಶ್ಯಕ ವಸ್ತುಗಳ ಬೆಲೆ ಏರಿಕೆ ನಿಶ್ಚಿತ. ವಿದ್ಯುತ್ ಬೆಲೆ ಏರಿಕೆ ಜನಸಾಮಾನ್ಯರಿಗೆ ನೇರವಾಗಿ ತಟ್ಟುತ್ತದೆ.

ಇದರ ಮಧ್ಯೆ ಹಿರಿಯ ನಾಗರಿಕರಿಗೆ ಹೆಚ್ಚಿನ ಸೌಲಭ್ಯಗಳನ್ನು ಕೊಡುವ ದಿಟ್ಟಿನಲ್ಲಿ ಸರ್ಕಾರ ಮೌನ ವಹಿಸಿದೆ. ಚುನಾವಣಾಪೂರ್ವ ಹೋಮ, ಹವನಗಳ ಪರಿಣಾಮವೋ ಎಂಬಂತೆ ಬ್ರಾಹ್ಮಣ ಸಮುದಾಯಕ್ಕೆ ಅನುದಾನ ಘೋಷಿಸಿರುವುದು ಮರಳುಗಾಡಿನಲ್ಲಿ ಓಯಸಿಸ್ ಕಂಡಂತಾಗಿದೆ. ಸರ್ಕಾರದ ಅನವಶ್ಯಕ ಖರ್ಚನ್ನು ಕಮ್ಮಿ ಮಾಡಿಕೊಳ್ಳುವ ನಿಟ್ಟಿನಲ್ಲಿ ಯೋಜನೆಯನ್ನು ಹಮ್ಮಿಕೊಂಡು, ಅದನ್ನು ಕಾರ್ಯರೂಪಕ್ಕೆ ತಂದರೆ ಜನರಿಗೆ ಸರ್ಕಾರದ ಕಾರ್ಯವೈಖರಿ ಬಗ್ಗೆ ಸ್ವಲ್ಪವಾದರೂ ನಂಬಿಕೆ ಬರುತ್ತದೆ.

-ವಿ.ವಿಜಯೇಂದ್ರ ರಾವ್,ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.