ADVERTISEMENT

ಕಲ್ಕಿ ಕಲಿಕಾ ಕಮ್ಮಟ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2014, 19:30 IST
Last Updated 12 ಡಿಸೆಂಬರ್ 2014, 19:30 IST
ಕಲ್ಕಿ ಕಲಿಕಾ ಕಮ್ಮಟ
ಕಲ್ಕಿ ಕಲಿಕಾ ಕಮ್ಮಟ   

‘ಅಭಿನಯವನ್ನು ಇನ್ನೂ ಕಲಿಯುತ್ತಿದ್ದೇನೆ. ನಾನು 90 ವರ್ಷದವಳಾಗುವಷ್ಟರಲ್ಲಿ ಉತ್ತಮ ನಟಿಯಾಗುತ್ತೇನೆ’ ಎಂದಿದ್ದಾರೆ ನಟಿ ಕಲ್ಕಿ ಕೊಯ್ಲಿನ್‌.

‘ಅನುಭವಗಳೇ ಜೀವನದ ಪಾಠ ಇದ್ದಂತೆ. ಪ್ರತಿ ಚಿತ್ರದ ನಂತರ ಎಲ್ಲರೂ ಒಂದಲ್ಲ ಒಂದನ್ನು ಕಲಿಯುತ್ತೇವೆ. ಹೀಗೆ ನನಗೆ 90 ವರ್ಷ ತುಂಬುವಷ್ಟರಲ್ಲಿ ನಾನು ಶ್ರೇಷ್ಠ ನಟಿಯಾಗಿರುತ್ತೇನೆ’ ಎಂದು ಮುಂಬೈನಲ್ಲಿ ಮಾಧ್ಯಮದವರೊಂದಿಗೆ ಮಾತನಾಡುತ್ತಾ ಹೇಳಿದ್ದಾರೆ. 

‘ನಾನು ಯಶಸ್ಸು ಸಾಧಿಸದ ಚಿತ್ರಗಳಲ್ಲಿ ನಟಿಸಿದ್ದೇನೆ, ಪರವಾಗಿಲ್ಲ. ನಟಿಸಿದ ಎಲ್ಲ ಚಿತ್ರಗಳೂ ಯಶಸ್ವಿಯಾಗಬೇಕು ಎಂದೇನಿಲ್ಲ. ಕಲಾವಿದರ ಅಭಿನಯಕ್ಕೆ ಮೆಚ್ಚುಗೆ ದೊರೆತರೆ ಸಾಕು. ಅಭಿನಯಿಸುವ ಪ್ರತಿ ಚಿತ್ರದಲ್ಲೂ  ಕಲಾವಿದರು ತಮ್ಮ ಅಭಿನಯ ಕೌಶಲವನ್ನು ಮತ್ತಷ್ಟು ಉತ್ತಮ ಪಡಿಸಿಕೊಳ್ಳಲು ಪ್ರಯತ್ನಿಸುತ್ತಾರೆ’ ಎಂದಿದ್ದಾರೆ 30 ವರ್ಷದ ನಟಿ.

‘ದೇವ್‌ ಡಿ’ ಸಿನಿಮಾದಲ್ಲಿ ಅಭಿನಯಿಸಿದ್ದ ಕಲ್ಕಿ ಆಮೇಲೆ ‘ಜಿಂದಗಿ ನಾ ಮಿಲೆಗಿ ದೊಬಾರ’ ಹಾಗೂ ‘ಯೆ ಜವಾನಿ ಹೈ ದಿವಾನಿ’ ತರಹದ ಕಮರ್ಷಿಯಲ್‌ ಚಿತ್ರಗಳಲ್ಲೂ ನಟಿಸಿದ್ದರು. ‘ಕಮರ್ಷಿಯಲ್ ಚಿತ್ರಗಳಿಗೆ ಸಹಿ ಹಾಕುವಾಗ ನಾನು ಪ್ರಜ್ಞಾಪೂರ್ವಕವಾಗಿ ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳುವುದಿಲ್ಲ. ಇಂತಹ ಚಿತ್ರಗಳಿಗೆ ಸಹಿ ಹಾಕುವಾಗ ನಾನು ತುಂಬಾ ಯೋಚಿಸುವುದೂ ಇಲ್ಲ. ಸ್ವಲ್ಪ ವಿಶೇಷವಾಗಿ ಇದೆ ಅಂತನ್ನಿಸಿದರೆ ಸಾಕು ಸಹಿ ಹಾಕುತ್ತೇನೆ’ ಎಂದಿದ್ದಾರೆ ಕಲ್ಕಿ.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.