ADVERTISEMENT

ಕೂಸು ಹುಟ್ಟುವ ಮೊದಲೇ...

ಪ್ರಕಾಶ ಕುಗ್ವೆ
Published 19 ಮೇ 2018, 19:30 IST
Last Updated 19 ಮೇ 2018, 19:30 IST

ದಾವಣಗೆರೆ: ಅಧಿಕಾರದ ಆಸೆ ಯಾರಿಗಿಲ್ಲ? ಆದರೆ, ದಾವಣಗೆರೆ ಜಿಲ್ಲೆಯ ಬಿಜೆಪಿ ಶಾಸಕರು ಹಾಗೂ ಮುಖಂಡರು ಮಾತ್ರ ವಿಪರೀತ ಎನ್ನುವಷ್ಟು ಆಸೆ ವ್ಯಕ್ತಪಡಿಸಿ ಚರ್ಚೆಗೆ ಗ್ರಾಸವಾಗಿದ್ದಾರೆ.

ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುತ್ತಿದ್ದಂತೆ ಅವರ ಪಕ್ಷದ ಚುನಾಯಿತ ಪ್ರತಿನಿಧಿಗಳು ಹಾಗೂ ಮುಖಂಡರು ಸಚಿವ ಸ್ಥಾನ ಅಥವಾ ವಿವಿಧ ಪ್ರಾಧಿಕಾರಗಳ ಅಧ್ಯಕ್ಷ ಹುದ್ದೆಯ ಕನಸು ಕಾಣಲು ತೊಡಗಿದ್ದರು.

ಜಗಳೂರು ಶಾಸಕ ಎಸ್‌.ವಿ. ರಾಮಚಂದ್ರ, ‘ನಾನು ಯಡಿಯೂರಪ್ಪ ಸಚಿವ ಸಂಪುಟದ ಸದಸ್ಯ ಸ್ಥಾನದ ಆಕಾಂಕ್ಷಿಯಾಗಿದ್ದೇನೆ. ಅವರು ನನಗೆ ಮಂತ್ರಿ ಸ್ಥಾನ ಖಚಿತಪಡಿಸಿದ್ದಾರೆ’ ಎಂದು ಹೇಳಿಕೊಂಡಿದ್ದರು. ರೈತ ಮುಖಂಡರೊಬ್ಬರು, ಭದ್ರಾ ‘ಕಾಡಾ’ ಪ್ರಾಧಿಕಾರದ ಅಧ್ಯಕ್ಷ ಹುದ್ದೆಗೆ ತಾವು ಆಕಾಂಕ್ಷಿ
ಯಾಗಿದ್ದು, ‘ಯಡಿಯೂರಪ್ಪ ನನ್ನನ್ನೇ ನೇಮಕ ಮಾಡಬೇಕು’ ಎಂದು ಒತ್ತಾಯವನ್ನೂ ಮಾಡಿದ್ದರು.

ADVERTISEMENT

ಯಡಿಯೂರಪ್ಪ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ ಈ ಸಂದರ್ಭದಲ್ಲಿ ಜಿಲ್ಲೆಯ ಮುಖಂಡರ ಅಧಿಕಾರದ ಆತುರ ಬಿಸಿಬಿಸಿ ಚರ್ಚೆಗೆ ಕಾರಣವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.