ADVERTISEMENT

ಉದ್ದ ಕೋಡಿನ ಮೇಕೆ!

ಮೇಕೆಯ ಹೆಸರು ರಾಸ್ಪುಟಿನ್‌

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2017, 19:30 IST
Last Updated 12 ಮಾರ್ಚ್ 2017, 19:30 IST
ಉದ್ದ ಕೋಡಿನ ಮೇಕೆ!
ಉದ್ದ ಕೋಡಿನ ಮೇಕೆ!   
ಮೇಕೆ ಕೋಡು ಸಾಮಾನ್ಯವಾಗಿ 10ರಿಂದ 25 ಇಂಚು ಬೆಳೆದಿರುವುದನ್ನು ನೋಡಿದ್ದೇವೆ. ಆದರೆ ಇಲ್ಲೊಂದು ಮೇಕೆ ಇದೆ, ಈ ಮೇಕೆಯ ಕೊಂಬುಗಳು ಬರೋಬ್ಬರಿ  53.23 ಇಂಚು (135.2 ಸೆಂ.ಮೀ) ಬೆಳೆದಿದ್ದು, ಗಿನ್ನಿಸ್‌ ವಿಶ್ವ ದಾಖಲೆಯನ್ನೂ ಮಾಡಿದೆ!
 
ಈ ಮೇಕೆಯ ಹೆಸರು ರಾಸ್ಪುಟಿನ್‌. ಆಸ್ಟ್ರೀಯಾ ದೇಶದ ಲೇಯಿಂಜ್‌ ಪಟ್ಟಣದ ನಿವಾಸಿ ಮಾರ್ಟಿನ್‌ ಅವರು ಸಾಕಿರುವ ಮೇಕೆಯಿದು. ಉದ್ದ ಕೂದಲು ಹಾಗೂ ಬಹು ದೊಡ್ಡ ಕೊಂಬಿನಿಂದ ಎಲ್ಲರ ಗಮನಸೆಳೆಯುತ್ತಿದೆ. ಎರಡು ಕೊಂಬುಗಳ ನಡುವಿನ ವಿಸ್ತಾರ 4.5 ಅಡಿಯಿದೆ. 
 
‘ರಾಸ್ಪುಟಿನ್‌ ಐದು ವರ್ಷವಾಗಿದ್ದಾಗಿನಿಂದ ಕೊಂಬನ್ನು ಅಳತೆ ಮಾಡುತ್ತಿದ್ದೇನೆ. ಸ್ವಿಟ್ಜರ್‌ಲೆಂಡ್‌ನ ಸ್ನೇಹಿತರು ಗಿನ್ನೆಸ್‌ ದಾಖಲೆಗೆ ಏಕೆ ಪ್ರಯತ್ನಿಸಬಾರದು ಎಂದು ಹೇಳಿದ್ದರಿಂದ  ಪ್ರಯತ್ನಿಸಿದೆ. ಇದು ಬಹಳ ಸೌಮ್ಯ ಸ್ವಭಾವದ ಮೇಕೆ, ಯಾರಿಗೂ ತೊಂದರೆ ಮಾಡಿಲ್ಲ’ ಎನ್ನುತ್ತಾರೆ ಮಾಲೀಕ ಮಾರ್ಟಿನ್‌.
ಈ ಮುಂಚಿನ ದಾಖಲೆ ಅಮೆರಿಕದ ಅಂಕಲ್‌ ಸ್ಯಾಮ್‌ ಅವರ ಮೇಕೆಯದಾಗಿತ್ತು (ಏಪ್ರಿಲ್‌ 2004). ಆ ಮೇಕೆಯ ಕೋಡುಗಳ ಉದ್ದ 52 ಇಂಚು (132 ಸೆಂ.ಮೀ) ಇತ್ತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.