ADVERTISEMENT

ಎಂಜಿನಿಯರಿಂಗ್‌ನಲ್ಲಿ ನಾಯಕತ್ವ

​ಪ್ರಜಾವಾಣಿ ವಾರ್ತೆ
Published 11 ಜನವರಿ 2017, 19:30 IST
Last Updated 11 ಜನವರಿ 2017, 19:30 IST
ಎಂಜಿನಿಯರಿಂಗ್‌ನಲ್ಲಿ ನಾಯಕತ್ವ
ಎಂಜಿನಿಯರಿಂಗ್‌ನಲ್ಲಿ ನಾಯಕತ್ವ   

ವರ್ತಮಾನದ ಬದುಕು ಮತ್ತು ತಂತ್ರಜ್ಞಾನದ ಜೊತೆಗಿನ ಸಂಬಂಧ ಅವಿನಾಭಾವ. ಅಂದರೆ ಎಂಜಿನಿಯರ್‌ಗಳು ನಮ್ಮ ಬದುಕಿನೊಳಗೆ ಹಿಂದೆಂದಿಗಿಂತಲೂ ಮುಖ್ಯರಾಗುತ್ತಿದ್ದಾರೆ ಎಂದರ್ಥ.

ಈ ಸವಾಲಿಗೆ ಎಂಜಿನಿಯರ್‌ಗಳು ಹೇಗೆ ತೆರೆದುಕೊಂಡಿದ್ದಾರೆ ಎಂಬುದೀಗ ಮುಖ್ಯವಾಗುತ್ತಿದೆ. ಅಂದರೆ ನೀತಿ ನಿರೂಪಣೆಯಲ್ಲಿಯೂ ಎಂಜಿನಿಯರಿಂಗ್‌ಗೆ ಪಾತ್ರವಿದೆ ಎಂದಾದಾಗ ಎಂಜಿನಿಯರಿಂಗ್ ಅರಿತವರು ನೀತಿ ನಿರೂಪಣೆಯ ಉನ್ನತ ಹಂತಗಳಿಗೆ ಏರುತ್ತಾರೆ. ಅಂದರೆ ಎಂಜಿನಿಯರಿಂಗ್ ಎಂದರೆ ವೃತ್ತಿ ಕೌಶಲ ಮಾತ್ರವಾಗಿ ಉಳಿದಿಲ್ಲ.

ಅದು ನಾಯಕತ್ವ ಸಂಬಂಧಿಸಿದ ವಿಚಾರವೂ ಆಗಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಡೆಲ್ಫ್‌ಟ್ ಯೂನಿವರ್ಸಿಟಿ ಆಫ್ ಟೆಕ್ನಾಲಜಿ ಹೊಸತೊಂದು ಕೋರ್ಸ್ ರೂಪಿಸಿದೆ.ಕೋರ್ಸ್ ರೂಪುಗೊಳ್ಳುವುದರ ಹಿನ್ನೆಲೆಯನ್ನೂ ಗಮನಿಸುವ ಅಗತ್ಯವಿದೆ. ಪ್ರಪಂಚದ ಅತಿ ಪ್ರತಿಷ್ಠಿತ ಎನ್ನಬಹುದಾದ 100 ಕಂಪೆನಿಗಳ ಮುಖ್ಯ ಕಾರ್ಯನಿರ್ವಾಹಕರಲ್ಲಿ ಹೆಚ್ಚಿನವರು ಎಂಜಿನಿಯರ್‌ಗಳು.

ಈ ಸಂದರ್ಭದಲ್ಲಿ ಎಂಜಿನಿಯರಿಂಗ್ ಪದವಿ ಪಡೆಯುವವರು ಕೌಶಲದ ಆಚೆಗಿನ ಸಂಗತಿಗಳ ಬಗ್ಗೆ ಆಲೋಚಿಸಬೇಕು ಎಂಬುದು ಆಧುನಿಕ ವ್ಯವಹಾರಾಡಳಿತ ತಜ್ಞರ ಅನಿಸಿಕೆ.

ಅದಕ್ಕೆ ಅನುಗುಣವಾಗಿ ಈ ಕೋರ್ಸ್ ರೂಪುಗೊಂಡಿದೆ. ಐದು ವಾರಗಳ ಅವಧಿಯ ಈ ಕೋರ್ಸ್ ಅನ್ನು ನಮ್ಮದೇ ವೇಗದಲ್ಲಿ ಕಲಿಯಬಹುದು. ಇಂಗ್ಲಿಷ್‌ ಜ್ಞಾನವಿರುವ ಎಲ್ಲಾ ಎಂಜಿನಿಯರಿಂಗ್ ಪದವೀಧರರೂ ಈ ಕೋರ್ಸ್‌ಗೆ ಸೇರಬಹುದು. ನೋಂದಾಯಿಸಿಕೊಳ್ಳುವುದಕ್ಕಾಗಿ ಇಲ್ಲಿರುವ ಲಿಂಕ್ ಬಳಸಬಹುದು: http://bit.ly/2i5mr8I

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.