ADVERTISEMENT

ತಲೆಗೆ ಹುಳ ಬಿಡುವ ‘ಜಲೇಬಿ’

ದೀಪಕ್ ಎನ್.
Published 10 ಜನವರಿ 2017, 19:30 IST
Last Updated 10 ಜನವರಿ 2017, 19:30 IST
ತಲೆಗೆ ಹುಳ ಬಿಡುವ ‘ಜಲೇಬಿ’
ತಲೆಗೆ ಹುಳ ಬಿಡುವ ‘ಜಲೇಬಿ’   

ರಸಪ್ರಶ್ನೆ ಅಂದರೆ ಆಸಕ್ತಿ ಇದೆಯೇ? ಪದ ಸಂಪತ್ತನ್ನು ನಿಮ್ಮದಾಗಿಸಿಕೊಳ್ಳಬೇಕೇ? ಆಟವಾಡುತ್ತಲೇ ಜ್ಞಾನದ ಪರೀಕ್ಷೆ ನಡೆದರೆ ಹೇಗೆ? ಇಂಥವರ ತಲೆಗೆ ಕೆಲಸ ಕೊಡಲೆಂದೇ ಒಂದು ಒಗಟಿನ ಆ್ಯಪ್ ಗೂಗಲ್ ಪ್ಲೇಸ್ಟೋರ್‌ನಲ್ಲಿದೆ. jalebi ಹೆಸರಿನ ಈ ಆ್ಯಪ್‌ ಈವರೆಗೆ 5 ಲಕ್ಷ ಮೊಬೈಲ್‌ಗಳಿಗೆ ಇನ್‌ಸ್ಟಾಲ್ ಆಗಿದೆ. ‘ಜಲೇಬಿ’ ಎಂದರೆ ಸಿಹಿ ತಿನಿಸು ಎಂದು ಅರ್ಥೈಸಿಕೊಂಡವರೇ ಹೆಚ್ಚು. ಇದು ನಾಲಿಗೆಗೆ ಅಲ್ಲ, ತಲೆಗೆ ಸಿಹಿ ಕೊಡುವ ಜಲೇಬಿ.

ಈ ಆ್ಯಪ್ ಅಭಿವೃದ್ಧಿಪಡಿಸಿರುವುದು ‘ಹ್ಯಾಪಿ ಅಡ್ಡ’ ಬಳಗ. ಈ ಆ್ಯಪ್‌ನೊಂದಿಗೆ ಆಟವಾಡುತ್ತಾ ಬೆರಳ ತುದಿಯಲ್ಲಿಯೇ ಅಕ್ಷರದ ರುಚಿ ನೋಡಬಹುದು. ಕನ್ನಡ, ಇಂಗ್ಲೀಷ್‌, ಹಿಂದಿ, ಮಲಯಾಳಂ, ಮರಾಠಿ, ತೆಲುಗು, ಬಂಗಾಳಿ, ಗುಜರಾತಿ, ಒರಿಯಾ, ತಮಿಳು ಸೇರಿದಂತೆ ಹತ್ತು ಪ್ರಮುಖ ಭಾಷೆಗಳಲ್ಲಿ ‘ಜಲೇಬಿ’ ಪದಬಂಧ ಲಭ್ಯ.

ವೈಶಿಷ್ಟ್ಯ: ಗೂಗಲ್‌ ಪ್ಲೇಸ್ಟೋರ್‌ನಿಂದ ಜಲೇಬಿ ಆ್ಯಪ್‌ ಡೌನ್‌ಲೋಡ್‌ ಮಾಡಿ ಇನ್‌ಸ್ಟಾಲ್‌ ಮಾಡಿಕೊಂಡರೆ ಸಾಕು. ಅಂತರ್ಜಾಲ ಸಂಪರ್ಕ ಇಲ್ಲದೆಯೂ ನಿರಂತರ ಆಟ ಮುಂದುವರಿಸಬಹುದು.

ಪ್ರಾರಂಭದಲ್ಲಿ ಎರಡೇ ಅಕ್ಷರಗಳ ಪದಕ್ಕೆ ಉತ್ತರಿಸಲು ಸುಲಭದ ಪ್ರಶ್ನೆಯನ್ನೇ ನಿಮ್ಮ ಮುಂದಿಡುತ್ತದೆ. ನಂತರ ಮೂರು, ನಾಲ್ಕು, ಐದು, ಹೀಗೆ ಮುಂದೆ ಹೋದಂತೆ ನಿಮ್ಮ ಪದ ಮತ್ತು ಜ್ಞಾನ ಸಂಪತ್ತಿಗೆ ಚಾಲೆಂಜ್‌ ತಪ್ಪಿದ್ದಲ್ಲ. ಒಂದೊಂದೇ ಹಂತ ದಾಟುತ್ತಿದ್ದಂತೆ ಬೋನಸ್‌ ಅಂಕಗಳು ಜೊತೆಗೂಡುತ್ತವೆ. ಅಂಕ ಹೆಚ್ಚಾದರೆ ಯಾರಿಗೆ ತಾನೆ ಖುಷಿ ಆಗುವುದಿಲ್ಲ?

ಕನ್ನಡ ಕಲಿಸಿ
ಕನ್ನಡ ಬಾರದವರಿಗೂ ಕನ್ನಡ ಭಾಷೆಯ ಬಗೆಗೆ ಆಸಕ್ತಿ ಬೆಳೆಸಲು ಜಲೇಬಿ ಆಟವನ್ನು ಬಳಸಿಕೊಳ್ಳಬಹುದು. ಕುತೂಹಲ ಕೆರಳಿಸುವ ಪ್ರಶ್ನೆಗಳನ್ನು ಅಕ್ಕ–ಪಕ್ಕದ ಸ್ನೇಹಿತರಿಗೆ, ಸಹೋದ್ಯೋಗಿಗಳ ಮುಂದಿಟ್ಟು ಕ್ವಿಜ್‌ ಮಾಸ್ಟರ್‌ನಂತೆ ಕಂಗೊಳಿಸಬಹುದು. ಆ್ಯಪ್‌ ಬಳಕೆದಾರರಲ್ಲಿ ಭಾಷೆಯ ಬಳಕೆ, ಪದ ಪ್ರಯೋಗ, ವಾಕ್ಯ ರಚನೆ, ಕನ್ನಡ ಪದ ಬಳಕೆ ಬಗ್ಗೆ ಹಿಡಿತ ಸಾಧಿಸುವಂತೆ ಮಾಡುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.