ADVERTISEMENT

ತಲೆ ಮೇಲೊಂದು ಗಿಡ

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2017, 19:30 IST
Last Updated 15 ನವೆಂಬರ್ 2017, 19:30 IST
ತಲೆ ಮೇಲೊಂದು ಗಿಡ
ತಲೆ ಮೇಲೊಂದು ಗಿಡ   

ಫ್ಯಾಷನ್‌ ಪ್ರಪಂಚದಲ್ಲಿ ಪ್ರಯೋಗವೊಂದೇ ಶಾಶ್ವತ. ಯಾವುದು ಊಹೆಗೂ ಸಿಗುವುದಿಲ್ಲವೋ ಅದೇ ಫ್ಯಾಷನ್ ಆಗಿ ಎದುರು ನಿಂತಿರುತ್ತದೆ. ಅಂಥದ್ದೇ ಒಂದು ಫ್ಯಾಷನ್ ಚೀನಾದಲ್ಲಿ ಭಾರೀ ಸುದ್ದಿ ಮಾಡಿದ್ದು. ಅದು ಸ್ಪ್ರೌಟ್ ಹೇರ್‌ಪಿನ್.

ಗಿಡದ ಚಿಗುರನ್ನು, ಹೂವನ್ನು ಹೋಲುವ ಹೇರ್‌ಪಿನ್‌ಗಳು ಇದೀಗ ಅಲ್ಲಿ ಜನರ ತಲೆ ಮೇಲೆ ನಲಿದಾಡುತ್ತಿವೆ. ಸೂರ್ಯಕಾಂತಿ, ಚೆಂಡು, ಲ್ಯಾವೆಂಡರ್, ಅಣಬೆ, ಮೆಣಸಿನಕಾಯಿ, ಚೆರ್ರಿ, ಪೈನ್ ಟ್ರೀ ಇವೆಲ್ಲವು ಹೇರ್‌ಪಿನ್ ರೂಪದಲ್ಲಿ ಕಾಣಿಸಿಕೊಳ್ಳುತ್ತಿವೆ. ಇವೆಲ್ಲಕ್ಕಿಂತ, ಮೊಳಕೆಯೊಡೆದ ಗಿಡದಂತಿರುವ ಪಿನ್‌ಗಳೇ ತುಂಬಾ ಬೇಡಿಕೆ ಗಿಟ್ಟಿಸಿಕೊಂಡಿವೆಯಂತೆ.

ಆದರೆ ಇದು ಹೇಗೆ ಹುಟ್ಟಿಕೊಂಡಿತು? ಇದನ್ನು ಕಂಡುಹಿಡಿ ದವರು ಯಾರು ಎಂಬ ಬಗ್ಗೆ ಎಲ್ಲೂ ಮಾಹಿತಿ ಇಲ್ಲ. ಕಾರ್ಟೂನ್ ಶೋ ಒಂದರಿಂದ ಪ್ರೇರೇಪಿತವಾಗಿ ಈ ಹೇರ್‌ಪಿನ್ ಹುಟ್ಟಿಕೊಂಡಿದೆ ಎಂಬುದಷ್ಟೇ ಅಲ್ಲಿನವರಿಗೂ ತಿಳಿದಿರುವುದು. ಪುರುಷರು, ಮಹಿಳೆ ಯರು, ಮಕ್ಕಳು ಎಂಬ ಭೇದ ಈ ಪಿನ್‌ಗೆ ಇಲ್ಲ.

ADVERTISEMENT

ತಲೆ ಮೇಲೆ ಆಂಟೆನಾ ಇಟ್ಟಂತೆ ಕಾಣುವುದರಿಂದ ಇದನ್ನು ಆಂಟೆನಾ ಹೇರ್ ಪಿನ್ ಎಂದೂ ಕರೆಯುತ್ತಾರಂತೆ. ಏನಾದರಾಗಲಿ, ತಲೆ ಮೇಲೆ ಗಿಡ ಚಿಗುರೊಡೆದಂತೆ ಕಾಣುವ ಇವುಗಳನ್ನು ಕಂಡು ಮತ್ತೊಮ್ಮೆ ತಿರುಗಿ ನೋಡುವ ಮಂದಿಯೂ ಹೆಚ್ಚಾಗಿದ್ದಾರೆ. ಹಾಗೆ ನೋಡುತ್ತಲೇ ತಾವೂ ಒಂದು ಕೊಂಡು ಸಿಕ್ಕಿಸಿಕೊಂಡು ಖುಷಿ ಪಡುತ್ತಿದ್ದಾರೆ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.