ADVERTISEMENT

ನೂರರ ಫೋಟೊಶೂಟ್‌!

​ಪ್ರಜಾವಾಣಿ ವಾರ್ತೆ
Published 23 ಜುಲೈ 2017, 19:30 IST
Last Updated 23 ಜುಲೈ 2017, 19:30 IST
ನೂರರ ಫೋಟೊಶೂಟ್‌!
ನೂರರ ಫೋಟೊಶೂಟ್‌!   

ವಯಸ್ಸಾದರೂ ಜೀವನದ ಉತ್ಸಾಹ ಒಂದಿಷ್ಟೂ ಕುಂದದಂತೆ ಕಾಣುತ್ತಿರುವ ಈ ಅಜ್ಜಿಯಂದಿರಿಗೆ ನೂರರ ಹುಟ್ಟುಹಬ್ಬದ ಸಂಭ್ರಮ. ಈ ಸಂತಸಮಯ ಕ್ಷಣವನ್ನು ಆಕರ್ಷಕ ಉಡುಪು ತೊಟ್ಟು ಫೋಟೊಶೂಟ್‌ ಮಾಡಿಸಿಕೊಳ್ಳುವ ಮೂಲಕ ಸೆರೆಹಿಡಿದಿದ್ದಾರೆ.

ಮರಿಯಾ ಮತ್ತು ಪೌಲಿಯಾ ಹೆಸರಿನ ಅಜ್ಜಿಯಂದಿರು ಬ್ರೆಜಿಲ್‌ ದೇಶದವರು. ಒಂದೇ ವಿನ್ಯಾಸದ, ಬಣ್ಣ ಬೇರೆಯಿರುವ ಉಡುಪನ್ನು ಇವರು ಧರಿಸಿ ಫೋಟೊಶೂಟ್‌ ಮಾಡಿಸಿಕೊಂಡಿದ್ದಾರೆ. ಪೌಲಿಯಾ ಅವರಿಗೆ ಆರು ಮಕ್ಕಳು, ಹತ್ತೊಂಬತ್ತು ಮೊಮ್ಮಕ್ಕಳಿದ್ದಾರೆ. ಮರಿಯಾ ಅವರಿಗೆ ಐದು ಮಕ್ಕಳು, ಹನ್ನೇರಡು ಮೊಮ್ಮಕ್ಕಳಿದ್ದಾರೆ.

ಪೌಲಿಯಾ ಕರುಳಿನ ಕ್ಯಾನ್ಸರ್‌ಗೆ ತುತ್ತಾಗಿದ್ದರು. ಚಿಕಿತ್ಸೆ ಪಡೆದಿರುವ ಅವರು ಈಗಷ್ಟೇ ಚೇತರಿಸಿಕೊಂಡಿದ್ದಾರೆ. ಎರಡು ಬಾರಿ ಹೃದಯಾಘಾತಕ್ಕೂ ಒಳಗಾಗಿದ್ದರು. ಫೋಟೊ ಶೂಟ್‌ಗಾಗಿ ಮೂರು ಬಾರಿ ಉಡುಪು ಬದಲಾಯಿಸಿಕೊಂಡಿರುವ ಇವರು ಅದಕ್ಕೆ ಹೊಂದುವಂತೆ ಮೇಕಪ್‌ ಮಾಡಿ ಕೊಂಡಿದ್ದಾರೆ.

ADVERTISEMENT

ದಣಿವೇ ಇಲ್ಲದಂತೆ ಪ್ರತಿ ಬಾರಿ ಉಡುಪು ತೊಡುವಾಗಲು ಇವರು ಉತ್ಸಾಹದಿಂದ ಇದ್ದರಂತೆ. ಕೇಕ್ ಕತ್ತರಿಸಿ, ಬಂಧುಗಳ ಜೊತೆಗೆ ಪ್ರವಾಸ ಮಾಡುವ ಮೂಲಕ ಇವರು ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.