ADVERTISEMENT

ಮಸಾಜ್ ಮಾಡ್ತಾವೆ ಹಾವುಗಳು

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2017, 5:18 IST
Last Updated 9 ಸೆಪ್ಟೆಂಬರ್ 2017, 5:18 IST
ಮಸಾಜ್ ಮಾಡ್ತಾವೆ ಹಾವುಗಳು
ಮಸಾಜ್ ಮಾಡ್ತಾವೆ ಹಾವುಗಳು   

ದೇಹ ತುಂಬಾ ದಣಿವಾದಾಗ ಸ್ಪಾಗೆ ಹೋಗಿ ಮಸಾಜ್‌ ಮಾಡಿಸಿಕೊಂಡು ದಣಿವಾರಿಸಿಕೊಳ್ಳುವುದು ಈಗ ಸಾಮಾನ್ಯ. ಆದರೆ ಹಾವುಗಳಿಂದ ಮಸಾಜ್‌ ಮಾಡಿಸಿಕೊಂಡರೆ ಹೇಗಿರಬಹುದು?

ಅಂಥಾದ್ದೊಂದು ಅನುಭವ ಪಡೆಯುವ ಆಸೆಯಿದ್ದರೆ ಇಂಡೊನೇಷ್ಯಾ ಮತ್ತು ಫಿಲಿಪ್ಪೀನ್ಸ್‌ಗೆ ಹೋಗಿಬನ್ನಿ. ಇಂಡೋನೇಷ್ಯಾದ ಮಸಾಜ್‌ ಪಾರ್ಲರ್‌ಗಳಲ್ಲಿ ಮತ್ತು ಫಿಲಿಪ್ಪೀನ್ಸ್‌ನ ಸಿಬು ಸಿಟಿ ಮೃಗಾಲಯದಲ್ಲಿ ಗ್ರಾಹಕರು ಹಾವುಗಳಿಂದ ಮಸಾಜ್‌ ಮಾಡಿಸಿಕೊಳ್ಳುತ್ತಾರೆ.

ವಿಷಮುಕ್ತವಾದ ಈ ಹಾವುಗಳು ದೇಹದೆಲ್ಲೆಡೆ ಹರಿದಾಡುವುದರಿಂದ ಕೆಲವೇ ನಿಮಿಷಗಳಲ್ಲಿ ದಣಿವಾರಿಸಿಕೊಂಡು, ವಿಶ್ರಾಂತಿ ಪಡೆಯುತ್ತಾರೆ. ನೋವು ನಿವಾರಣೆಗೂ ಈ ಮಸಾಜ್ ಸಹಕಾರಿಯಾಗಿದೆ. ದೇಹ ಮತ್ತು ಮನಸ್ಸಿಗೆ ವಿಶ್ರಾಂತಿ ನೀಡುವ ಈ ಅನನ್ಯ ಅನುಭವಕ್ಕಾಗಿ ಜನರು ಸಾಲುಸಾಲಾಗಿ ನಿಲ್ಲುತ್ತಾರಂತೆ.

ADVERTISEMENT

ಪಂಜರದಲ್ಲಿರುವ ಹೆಬ್ಬಾವುಗಳನ್ನು ಹೊರತೆಗೆದು, ಮೊದಲು ಗ್ರಾಹಕರ ಕಾಲಿನ ಮೇಲೆ ಹರಿಬಿಡುತ್ತಾರೆ. ನಂತರ ಬಿದಿರು ಹಾಸಿನ ಮೇಲೆ ಮಲಗಿಸಿ, ಮೈಮೇಲೆ ಬಗೆಬಗೆಯ ಹಾವುಗಳನ್ನು ಬಿಡುತ್ತಾರೆ. 250 ಕೆ.ಜಿ. ತೂಕದ ಹಾವುಗಳನ್ನು ಬಿಟ್ಟುಕೊಳ್ಳುವವರೂ ಇದ್ದಾರೆ. ಹಾವುಗಳು ದೇಹದ ಮೇಲೆ ನಿಧಾನಗತಿಯಲ್ಲಿ ಚಲಿಸುತ್ತವೆ. ಈ ಚಲನೆ ಮನುಷ್ಯನನ್ನು ಶಾಂತ ಸ್ಥಿತಿಗೆ ತರುತ್ತದೆ ಎಂಬುದು ಮಸಾಜ್‌ ಮಾಡಿಸಿಕೊಳ್ಳುವವರ ನಂಬಿಕೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.