ADVERTISEMENT

ಸೈಕ್ಲಿಂಗ್‌ ಬ್ಯಾಲೆನ್ಸ್‌ ದಾಖಲೆ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2016, 19:30 IST
Last Updated 26 ಸೆಪ್ಟೆಂಬರ್ 2016, 19:30 IST
ಸೈಕ್ಲಿಂಗ್‌ ಬ್ಯಾಲೆನ್ಸ್‌ ದಾಖಲೆ
ಸೈಕ್ಲಿಂಗ್‌ ಬ್ಯಾಲೆನ್ಸ್‌ ದಾಖಲೆ   

ಸೈಕ್ಲಿಂಗ್‌ನಲ್ಲಿ ಹಲವು ರೀತಿಯ ಗಿನ್ನಿಸ್‌ ದಾಖಲೆಗಳಾಗಿರುವುದನ್ನು ನಾವು ನೋಡುತ್ತಿರುತ್ತೇವೆ. ಆದರೆ ಇವೆಲ್ಲವುಗಳಿಗಿಂತ ಭಿನ್ನವಾದ ದಾಖಲೆಯೊಂದು ಈಗ ಸೃಷ್ಟಿಯಾಗಿದೆ. ಅದೇನೆಂದರೆ ಅತಿ ಹೆಚ್ಚು ಅವಧಿಯವರೆಗೆ ಸೈಕಲ್‌ ಅನ್ನು ಒಂದೇ ಚಕ್ರದ ಮೇಲೆ ನಿಲ್ಲಿಸಿ ಬಹು ದೂರದವರೆಗೆ ಅದೇ ಬ್ಯಾಲೆನ್ಸ್‌ ಕಾಪಾಡಿಕೊಂಡು ಹೋಗಿ ದಾಖಲೆ ಮಾಡುವುದು. ಇಂಥ ದಾಖಲೆ ಮಾಡಿದ್ದಾರೆ ಭಾರತದ ಅಬ್ದುಲ್‌ ರೆಹಮಾನ್‌.

ಇದಕ್ಕಾಗಿ ಅವರು ಆಯ್ದುಕೊಂಡದ್ದು ಪರಿಸರಸ್ನೇಹಿ ಸೈಕಲ್‌. ‘ಅಬ್‌ ಇಂಡಿಯಾ ಥೋಡೆಗಾ’ (ಈಗ ಭಾರತ (ದಾಖಲೆ) ಮುರಿಯುತ್ತದೆ) ಎಂಬ ಘೋಷವಾಕ್ಯದೊಂದಿಗೆ ಈ ಸಾಹಸ ಕಾರ್ಯಮಾಡಿದ್ದಾರೆ.

ವೇಗವಾಗಿ ಸೈಕಲ್‌ ತುಳಿದು ಬಂದ ಅವರು ಸೈಕಲ್‌ನ ಮುಂಭಾಗದ ಚಕ್ರವನ್ನು ಮೇಲಕ್ಕೆ ಎತ್ತಿ ನಿಲ್ಲಿಸಿದರು. ನಂತರ ತಮ್ಮ ಎರಡೂ ಕಾಲುಗಳನ್ನು ಸೈಕಲ್‌ನ ಹ್ಯಾಂಡಲ್‌ ಬಾರ್‌ ಮೇಲೆ ಇಟ್ಟುಕೊಳ್ಳುವ ಮೂಲಕ ಬ್ಯಾಲೆನ್ಸ್‌ ಮಾಡಿದರು.

ಇದೇ ಸಮತೋಲನ ಕಾಪಾಡಿಕೊಂಡು 17.50ಮೀಟರ್‌ಗಳಷ್ಟು ದೂರ ಸೈಕಲ್‌ ತುಳಿಯುವಲ್ಲಿ ಯಶಸ್ವಿಯಾಗಿದ್ದಾರೆ. 2008ರಲ್ಲಿ ಅಮೆರಿಕದ ಜಿಮ್ ಡೇಚ್ಯಾಂಪ್‌ ಎಂಬುವವರು ಇದೇ ರೀತಿ ಬ್ಯಾಲೆನ್ಸ್‌ ಮಾಡಿ 15.76ಮೀಟರ್‌ ದೂರ ಕ್ರಮಿಸಿ ದಾಖಲೆ ಮಾಡಿದ್ದರು. ಈ ದಾಖಲೆಯನ್ನೀಗ ಅಬ್ದುಲ್‌ ರೆಹಮಾನ್‌ ಮುರಿದು ಗಿನ್ನಿಸ್‌ ದಾಖಲೆ ಸೇರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.