ADVERTISEMENT

4ನೇ ಕ್ಲಾಸ್‌ನಲ್ಲೇ ಕ್ರಷ್‌ ಆಗಿತ್ತು...

ರೇಷ್ಮಾ ಶೆಟ್ಟಿ
Published 24 ಅಕ್ಟೋಬರ್ 2016, 19:30 IST
Last Updated 24 ಅಕ್ಟೋಬರ್ 2016, 19:30 IST
4ನೇ ಕ್ಲಾಸ್‌ನಲ್ಲೇ ಕ್ರಷ್‌ ಆಗಿತ್ತು...
4ನೇ ಕ್ಲಾಸ್‌ನಲ್ಲೇ ಕ್ರಷ್‌ ಆಗಿತ್ತು...   
ಕನ್ನಡದ ‘ಹುಡುಗರು’, ‘ಪಂಚರಂಗಿ’, ‘ನೀನ್ಯಾರೆ’, ‘ನಟೋರಿಯಸ್‌ ಅನಾರ್ಕಲಿ’ ಮುಂತಾದ ಚಿತ್ರಗಳಲ್ಲಿ ನಟಿಸಿ, ತಮಿಳು ಚಿತ್ರರಂಗಕ್ಕೂ ಅಡಿಯಿಟ್ಟು ಬಂದವರು ಮಡಿಕೇರಿ ಮೂಲದ ನಟಿ ರಮ್ಯಾ ಬಾರ್ನಾ. ಅರಳು ಕಣ್ಣು, ದುಂಡುಮುಖದ ಈ ನಟಿ ಮಾತಿಗೆ ಸಿಕ್ಕಾಗ...
 
*ಚಿತ್ರಗಳಲ್ಲಿ ಹೆಚ್ಚಾಗಿ ತುಂಟಿ ನೀವು, ನಿಜ ಜೀವನದಲ್ಲೂ ಹೀಗೇನಾ?
ಸ್ನೇಹಿತರ ಜೊತೆ ಇದ್ದಾಗ ಮಾತ್ರ ನಾನು ತುಂಟಿನೇ. ಆದರೆ ಚಿತ್ರಗಳ ವಿಷಯಕ್ಕೆ ಬಂದಾಗ ಚಾಲೆಂಜಿಂಗ್‌ ಪಾತ್ರ ಇಷ್ಟಪಡ್ತೀನಿ. ಹಾಗೆಯೇ ಕೆಲಸ ಮಾಡೋ ಟೈಂನಲ್ಲಿ ಅದನ್ನು ಇಷ್ಟಪಟ್ಟು ಮಾಡ್ತೀನಿ.
 
*ನಿಮ್ಮ ಅರಳು ಕಣ್ಣಿಗೆ ಎಷ್ಟು ಜನ ಹುಡುಗರು ಬಿದ್ದಿದ್ದಾರೆ? 
ಹಹಹ... ನಿಜ, ನನ್ನ ಕಣ್ಣು ಚೆನ್ನಾಗಿದೆ ಎಂದು ತುಂಬಾ ಕಾಂಪ್ಲಿಮೆಂಟ್‌ ಬಂದಿದೆ. ಆದ್ರೆ ಎಷ್ಟು ಜನ ಬಿದ್ದಿದ್ದಾರೆ ಎಂದು ನನಗೆ ಗೊತ್ತಿಲ್ಲಪ್ಪ. ಅಷ್ಟಕ್ಕೂ ನಾನು ಓದಿದ್ದು ಹುಡುಗಿಯರ ಕಾಲೇಜಿನಲ್ಲಿ. 
 
*ಹುಡುಗಿಯರ ಕಾಲೇಜಿನಲ್ಲಿ ಓದಿ ಇಂಥದನ್ನೆಲ್ಲಾ ಮಿಸ್‌ ಮಾಡ್ಕೊಂಡೆ ಅನ್ನಿಸಿದ್ದು ಇದ್ಯಾ?
ಹಾಗೆ ಅನಿಸಲಿಲ್ಲ. ಯಾಕೆಂದ್ರೆ ಕಾಲೇಜು ಹುಡುಗಿಯರದ್ದು ಆದ್ರೆ ಏನಾಯ್ತು? ಕಾಲೇಜಿನ ಹೊರಗಡೆ ಹುಡುಗರು ಫ್ರೆಂಡ್ಸ್‌ ಇದ್ರಲ್ಲ... ಅದೂ ಅಲ್ದೇ ಕಾಲೇಜಿನಲ್ಲಿ ನಾವೆಲ್ಲ ಡೀಸೆಂಟ್‌ ಅನ್ನಿಸಿದ್ರೂ ಕಾಲೇಜಿನ ಹೊರಗಡೆ ಹುಡುಗರ ಥರಾನೇ ಇರ್ತಾ ಇದ್ವಿ. ಹಾಗಾಗಿ ಹಾಗೆಲ್ಲಾ ಬೇಸರ ಪಟ್ಟುಕೊಳ್ಳುವ ಪ್ರಮೇಯ ಬಂದಿಲ್ಲ.
 
*ನಿಮ್ಮ ಕನಸಿನ ಹುಡುಗ ಹೇಗಿರಬೇಕು?
ಕನಸಿನ ಹುಡುಗ ಕನಸಿನ ಥರಾನೇ ಇರ್ಬೇಕು. ಒಂದು ಒಳ್ಳೆ ಕನಸು ಬಿದ್ರೆ ಅದರಲ್ಲಿರೋ ಒಳ್ಳೆತನ ಎಲ್ಲವನ್ನೂ ನಾವು ಒಪ್ಪಿಕೊಂಡು ಸ್ವೀಕರಿಸುತ್ತೇವೆ. ಹಾಗೇ ಕನಸಿನ ಹುಡುಗ ಕೂಡ. ಇನ್ನೂ ಹೇಳಬೇಕು ಅಂದ್ರೆ ನನ್ನ ಖುಷಿಯಾಗಿಟ್ಟುಕೊಳ್ಳೋ ಒಂದು ಜೀವ ಬೇಕು. ನನ್ನನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಬೇಕು. ನನ್ನ ಮೇಲೆ ಸಹಾನುಭೂತಿ ಇರ್ಬೇಕು. 
 
*ನಿಮ್ಮ ಫಸ್ಟ್ ಕ್ರಷ್ ಯಾರು?
ನಂಗೆ ಫಸ್ಟ್ ಕ್ರಷ್‌ ಆಗಿದ್ದಾಗ ನಾನು ನಾಲ್ಕು ಐದನೇ ಕ್ಲಾಸ್‌ನಲ್ಲೋ ಇದ್ದೆ. ಆದರೆ ನಂಗೆ ಕ್ಲಾಸ್‌ ಹುಡುಗ, ಪಕ್ಕದ್ಮನೆ ಹುಡುಗನ ಮೇಲೆ ಕ್ರಷ್ ಆಗಿರಲಿಲ್ಲ. ಬದಲಾಗಿ ಅಮಿತಾಭ್‌ ಬಚ್ಚನ್ ಮೇಲೆ ಕ್ರಷ್‌ ಆಗಿತ್ತು. ವಾವ್! ಇವರು ಎಷ್ಟು ಚೆನ್ನಾಗಿದಾರೆ, ಎಷ್ಟು ಚೆನ್ನಾಗಿ ಆ್ಯಕ್ಟ್ ಮಾಡ್ತಾರೆ ಅಂತೆಲ್ಲಾ ಅನ್ನಿಸ್ತಾ ಇತ್ತು. 
 
*ಪ್ರೇಮ ವಿವಾಹ ಇಷ್ಟಪಡ್ತೀರೋ ಇಲ್ಲಾ... ಅರೇಂಜ್ ಮ್ಯಾರೇಜೋ?
ಮದುವೆ ಹೇಗೆ ಆಗ್ತೀವಿ ಎನ್ನೋದಕ್ಕಿಂತ ಯಾರನ್ನು ಮದುವೆ ಆಗ್ತೀವಿ ಎನ್ನೋದು ಮುಖ್ಯ. ಮದುವೆಯಾಗುವ ವ್ಯಕ್ತಿ ಒಳ್ಳೆಯವನಿರಬೇಕು. ಕೆಲವು ವೇಳೆ ನೋಡಿ, ಪ್ರೀತಿಸಿ ಮದುವೆ ಆದವರು ಕೂಡ ದೂರ ಆಗ್ತಾರೆ. ಅದೆಲ್ಲಾ ನಮ್ಮ ಹಣೆಬರಹ, ಹೀಗೇ ಆಗ್ಬೇಕು ಅಂತಾ ಇದ್ರೆ ಅದೇ ಆಗುತ್ತೆ. 
 
*ನಿಮಗೆ ಡೇಟಿಂಗ್ ಮಾಡೋಕೆ ಅವಕಾಶ ಸಿಕ್ರೆ?
ಇನ್ನೊಂದು ಕಷ್ಟದ ಪ್ರಶ್ನೆ ಬಂತಲ್ಲಪ್ಪಾ... ಡೇಟಿಂಗ್ ಒಬ್ರೆ ಒಪ್ಪಿ ಹೋಗೋದಲ್ಲ. ಅದಕ್ಕೆ ಇಬ್ಬರ ಸಮ್ಮತಿಯೂ ಬೇಕು. ಆದರೂ ನಂಗೆ ಅವಕಾಶ ಸಿಕ್ರೆ ರಣವೀರ್‌ ಸಿಂಗ್‌ ಜೊತೆ ಡೇಟಿಂಗ್ ಮಾಡೋದು ಇಷ್ಟ. ಅವರು ಉತ್ತಮ ಬಾಯ್‌ಫ್ರೆಂಡ್ ಎನ್ನೋದು ನನ್ನ ಅನಿಸಿಕೆ. 
 
*ಅಭಿಮಾನಿಗಳು ನಿಮಗೆ ಕಾಟ ಕೊಟ್ಟಿದ್ದೇನಾದ್ರೂ ಇದೆಯಾ?
ಕಾಟ ಅಂತ ಯಾರೂ ಕೊಟ್ಟಿಲ್ಲ, ಆದ್ರೇ ಬೇರೆ ಬೇರೆ ದೇಶಗಳಿಗೆ ಹೋದಾಗ ಜನ ನಮ್ಮನ್ನು ಗುರುತಿಸಿ ಮಾತನಾಡಿಸ್ತಾರೆ. ಆಗ ಖುಷಿ ಆಗುತ್ತೆ. ಕನ್ನಡದವರು ತುಂಬಾ ಸ್ವೀಟ್‌, ಅವರು ತುಂಬಾ ಮರ್ಯಾದೆ ಕೊಡ್ತಾರೆ. ತೊಂದರೆ ಕೊಡೋ ಜನ ಅಲ್ಲಾ. 
 
*ಮರೆಯಲಾಗದ ಘಟನೆ...?
ತುಂಬಾನೇ ಇವೆ. ಇತ್ತೀಚೆಗೆ (ಆಗಸ್ಟ್‌ 4) ನನ್ನ ಹುಟ್ಟುಹಬ್ಬ ಇತ್ತು. ಆಗ ನಾನು ಯೂರೋಪ್‌ನಲ್ಲಿದ್ದೆ. ಆ ದಿನ ನನ್ನ ಸ್ನೇಹಿತರು ರಾತ್ರಿ 12 ಗಂಟೆಗೆ ನನಗೆ ಸರ್‌ಪ್ರೈಸ್‌ ಕೊಡುವ ರೀತಿಯಲ್ಲಿ ನನ್ನ ಬರ್ತ್‌ಡೇ ಆಚರಣೆ ಮಾಡಿದ್ದರು. ಇದು ನಂಗೆ ಮರೆಯಲಾರದ ಘಟನೆ ಅಂತಾನೇ ಹೇಳ್ಬೋದು.
 
*ನಟಿ ಆಗಿಲ್ಲದಿದ್ದರೆ...?
ನನಗೆ ತಿರುಗಾಟವೆಂದರೆ ತುಂಬಾ ಇಷ್ಟ. ನಾನು ಓದಿದ್ದು ಟ್ರಾವೆಲ್‌ ಅಂಡ್ ಟೂರಿಸಂ. ಹಾಗಾಗಿ ನಟಿ ಆಗಿಲ್ಲ ಅಂದ್ರೆ ಟ್ರಾವೆಲರ್ ಆಗ್ತಿದ್ದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.