ADVERTISEMENT

ಹಾಸ್ಯಪ್ರಿಯ ಶರಣ್‌

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2018, 19:30 IST
Last Updated 5 ಫೆಬ್ರುವರಿ 2018, 19:30 IST
ಶರಣ್
ಶರಣ್   

ಚಿಕ್ಕಪುಟ್ಟ ಹಾಸ್ಯ ಪಾತ್ರಗಳು, ಪೋಷಕ ಪಾತ್ರಗಳಲ್ಲಿ ನಟಿಸುವ ಮೂಲಕ ಚಿತ್ರರಂಗದಲ್ಲಿ ಗುರುತಿಸಿಕೊಂಡ ಶರಣ್‌ ಈಗ ಕನ್ನಡ ಚಿತ್ರರಂಗದಲ್ಲಿ ಬಹುಬೇಡಿಕೆಯ ನಾಯಕ ನಟ. ರಂಗಭೂಮಿ ಹಿನ್ನೆಲೆ ಇರುವ ಕುಟುಂಬದಲ್ಲಿ ಶರಣ್‌ ಜನಿಸಿದ್ದು 1976, ಫೆಬ್ರುವರಿ 2 ರಂದು. ಸಂಗೀತದ ಬಗೆಗೆ ವಿಶೇಷ ಒಲವಿಟ್ಟುಕೊಂಡಿದ್ದ ಶರಣ್‌ ಆರ್ಕೆಸ್ಟ್ರಾಗಳಲ್ಲಿ ಕೂಡ ಗಾಯಕರಾಗಿಯೂ ಗುರುತಿಸಿಕೊಂಡಿದ್ದರು. ಭಕ್ತಿಗೀತೆಗೆ ಸಂಬಂಧಿಸಿದ ಆಲ್ಬಂ ಅವರ ಹೆಸರಲ್ಲಿದೆ. ಅಲ್ಲದೆ ಟಿ.ವಿ. ಕಾರ್ಯಕ್ರಮಗಳಲ್ಲಿ ಶರಣ್‌ ಹಾಡಿದ್ದರು ಕೂಡ.

ಆದರೆ ನಟನಾ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುವಂತೆ ಶರಣ್‌ ಅವರನ್ನು ಒತ್ತಾಯಿಸಿದ್ದು ಅವರ ಪೋಷಕರು. ಟಿ.ವಿ.ಯಲ್ಲಿ ಬರುತ್ತಿದ್ದ ಸರಣಿ ಕಾರ್ಯಕ್ರಮಗಳು ಹಾಗೂ ಧಾರಾವಾಹಿಗಳಲ್ಲಿ ಅಭಿನಯಿಸುತ್ತಿದ್ದ ಶರಣ್‌ ಅವರ ಪ್ರತಿಭೆಗೆ ಮೊದಲ ವೇದಿಕೆ ಒದಗಿಸಿದ್ದು ಪ್ರೇಮ ಪ್ರೇಮ ಪ್ರೇಮ ಚಿತ್ರ. ಅಲ್ಲಿಂದ ನೂರಾರು ಚಿತ್ರಗಳಲ್ಲಿ ಅಭಿನಯಿಸುತ್ತಾ ಪ್ರೇಕ್ಷಕರ ಮೊಗದಲ್ಲಿ ನಗೆಯುಕ್ಕಿಸುವ ಜನಪ್ರಿಯ ನಟರಾಗಿ ಬೆಳೆದರು. ಸದ್ಯ ನಾಯಕ ನಟ ಹಾಗೂ ಚಿತ್ರ ನಿರ್ಮಾಪಕರಾಗಿಯೂ ಶರಣ್‌ ಗುರುತಿಸಿಕೊಂಡಿದ್ದಾರೆ.

ಕರ್ಪೂರದ ಗೊಂಬೆ, ಫ್ರೆಂಡ್ಸ್‌, ಮೊನಾಲಿಸಾ, ಜೊತೆ ಜೊತೆಯಲಿ, ಪಲ್ಲಕ್ಕಿ, ಮಳೆಯಲಿ ಜೊತೆಯಲಿ, ವಿಕ್ಟ್ರಿ, ಸತ್ಯಹರಿಶ್ಚಂದ್ರ, ರಾಜ್‌ ವಿಷ್ಣು ಮುಂತಾದ ಚಿತ್ರಗಳು ಅವರಿಗೆ ಹೆಸರು ತಂದುಕೊಟ್ಟವು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.