ADVERTISEMENT

ಕಾರು ಖರೀದಿ ಹಳ್ಳಿಯೂ ಮುಂದು

ವಿಶ್ವನಾಥ್ ಎಸ್.
Published 27 ಆಗಸ್ಟ್ 2014, 19:30 IST
Last Updated 27 ಆಗಸ್ಟ್ 2014, 19:30 IST

ಜಗತ್ತಿನ ಅತಿದೊಡ್ಡ ವಾಹನ ಮಾರುಕಟ್ಟೆಗಳಲ್ಲಿ ಭಾರತಕ್ಕೆ ಆರನೇ ಸ್ಥಾನ. 2020ರ ವೇಳೆಗೆ ಲಘು ವಾಹನಗಳ ಮಾರಾಟ 11 ಮಿಲಿಯನ್‌ಗೆ ಏರಿಕೆ ಆಗಲಿದ್ದು, ಜಗತ್ತಿನ ಮೂರನೇ ಅತಿದೊಡ್ಡ ಕಾರು ಮಾರುಕಟ್ಟೆಯಾಗಿ ಭಾರತ ಬೆಳೆಯಲಿದೆ ಎಂದು ಜೆ.ಡಿ. ಪವರ್್ ಆ್ಯಂಡ್್ ಅಸೋಸಿಯೇಟ್ಸ್ ಭವಿಷ್ಯ ನುಡಿದಿದೆ. ದೇಶದಲ್ಲಿ ಇತ್ತೀಚಿನ ಕಾರು ಮಾರಾಟದ ಪ್ರಗತಿ ಅದನ್ನೇ ಸೂಚಿಸುತ್ತಿದೆ. ಗ್ರಾಮೀಣ ಭಾಗಗಳಲ್ಲೂ ಕಾರು ಖರೀದಿ ಹೆಚ್ಚುತ್ತಿದೆ. ಈಗಾಗಲೇ ದೇಶದ ಒಟ್ಟಾರೆ ಕಾರು ಮಾರಾಟದಲ್ಲಿ ಶೇ 30ರಷ್ಟು ಗ್ರಾಮೀಣ ಪ್ರದೇಶಗಳದ್ದಾಗಿದೆ.

ಮಧ್ಯಮ ಗಾತ್ರದ ಸೆಡಾನ್ ಶ್ರೇಣಿಯ ಕಾರುಗಳಿಗೆ ದೇಶದಲ್ಲಿ ಬಲು ಬೇಡಿಕೆ ಇದೆ. ಹೋಂಡಾ, ಹ್ಯುಂಡೈ, ಟಾಟಾ ಮೋಟಾರ್ಸ್ ಕಂಪೆನಿಗಳ ಮಾರುಕಟ್ಟೆ ವಹಿವಾಟು ಕೂಡಾ ಸೆಡಾನ್ ಶ್ರೇಣಿಯಿಂದ ಹೆಚ್ಚುತ್ತಿದೆ. ಇಂಧನ ದಕ್ಷತೆ ಇರುವ 8ರಿಂದ 12 ಲಕ್ಷದವರೆಗಿನ 3 ಸೆಡಾನ್ ಕಾರುಗಳ ಪರಿಚಯ ಇಲ್ಲಿದೆ.

ಹೋಂಡಾ ಸಿಟಿ
ದೇಶದ ಮಾರುಕಟ್ಟೆಯಲ್ಲಿ ಕಾರು ಮಾರಾಟದಲ್ಲಿ ಇಂಧನ ದಕ್ಷತೆ ಬಹುಮುಖ್ಯ ಅಂಶವಾಗಿದೆ. ಈ ದೃಷ್ಟಿಯಿಂದ ಹೋಂಡಾ ನಾಲ್ಕನೇ ತಲೆಮಾರಿನ ‘ಸಿಟಿ’ ಕಾರನ್ನು ಹೆಚ್ಚಿನ ಇಂಧನ ದಕ್ಷತೆ ಇರುವಂತೆ ನೋಡಿಕೊಂಡಿದೆ. 15.ಲೀಟರ್ ಐ-ವಿಟೆಕ್ ಪೆಟ್ರೋಲ್ ಎಂಜಿನ್ ಲೀಟರಿಗೆ 18 ಕಿ.ಮೀ ಚಲಿಸುವ ಸಾಮರ್ಥ್ಯ ಹೊಂದಿದೆ.

1.5ಲೀಟರ್ ಐ-ಡಿಟೆಕ್ ಡೀಸೆಲ್ ಎಂಜಿನ್ ಲೀಟರಿಗೆ 26ಕಿ.ಮೀ ಚಲಿಸಬಲ್ಲದು. ಹೋಂಡಾ ಸಿಟಿ 1998ರಿಂದ ದೇಶದ ಮಾರುಕಟ್ಟೆಯಲ್ಲಿ ಯಶಸ್ಸಿನ ಹಾದಿಯಲ್ಲಿದೆ. ಇದೀಗ ನಾಲ್ಕನೇ ಶ್ರೇಣಿಯ ಹೋಂಡಾ ಸಿಟಿ ಪರಿಚಯಿಸಿದೆ. 1.5 ಲೀಟರ್ ಡೀಸೆಲ್ ಕಾರು ತನ್ನ ಪ್ರತಿಸ್ಪರ್ಧಿ ಹ್ಯುಂಡೈ ವರ್ನಾ ಕಾರನ್ನು ಹಿಂದಿಕ್ಕಿ ಮಧ್ಯಮ ಗಾತ್ರದ ಸೆಡಾನ್್ ಶ್ರೇಣಿಯ ಮಾರಾಟದಲ್ಲಿ ಮತ್ತೆ ಅಗ್ರಸ್ಥಾನಕ್ಕೇರಿದೆ. ಬಿಡುಗಡೆಯಾದ ಮೊದಲ ಎರಡು ತಿಂಗಳಲ್ಲಿ ಹೋಂಡಾ ಸಿಟಿ 14,397 ಕಾರುಗಳು ಮಾರಾಟವಾಗಿವೆ.

ಆದರೆ ಹ್ಯುಂಡೈನ ಹೊಸ ವರ್ನಾ ಕಾರುಗಳು ಮಾರಾಟವಾಗಿದ್ದು 7,145 ಮಾತ್ರ . ಸದ್ಯದ ಕಾರು ಮಾರುಕಟ್ಟೆಯಲ್ಲಿ ಹೋಂಡಾ ಕಂಪೆನಿ ಉತ್ತಮ ಪ್ರಗತಿ ಸಾಧಿಸಿದೆ. ಐ-ವಿಟೆಕ್ ಎಂಜಿನ್ 6600ಆರ್ ಎಂಪಿಯಲ್ಲಿ 119ಪಿಎಸ್ ಮತ್ತು 4600ಆರ್ ಪಿಎಂನಲ್ಲಿ 145 ಟಾರ್ಕ್ ಶಕ್ತಿ ಉತ್ಪಾದಿಸಬಲ್ಲದು. ಹೋಂಡಾ ಸಿಟಿ ರೂ. 7.20 ಲಕ್ಷದಿಂದ 11.05 ಲಕ್ಷದವರೆಗೆ (ಎಕ್ಸ್ ಷೋರೂಂ ಬೆಲೆ) ಲಭ್ಯವಿದೆ.

ಹ್ಯುಂಡೈ ವರ್ನಾ
ದೇಶದ ಕಾರು ಮಾರುಕಟ್ಟೆಯಲ್ಲಿ ಹೋಂಡಾ ಮತ್ತು ಹ್ಯುಂಡೈ ಸದಾ ಪೈಪೋಟಿ ನಡೆಸುತ್ತಿರುತ್ತವೆ. ಈಚೆಗೆ ಬಿಡುಗಡೆಯಾಗಿರುವ ಹೋಂಡಾ ಸಿಟಿ ಮತ್ತು ಹ್ಯುಂಡೈ ವರ್ನಾ ಇದಕ್ಕೆ ಉತ್ತಮ ಉದಾಹರಣೆ. ಇಂಧನ ದಕ್ಷತೆ ದೃಷ್ಟಿಯಿಂದ ವರ್ನಾ ಕೂಡಾ ಉತ್ತಮವಾಗಿದೆ.
1.6 ಲೀಟರ್ ಡೀಸೆಲ್ ಎಂಜಿನ್ 89ಬಿಎಚ್ ಪಿ ಮತ್ತು 220 ಎನ್ ಎಂ ಟಾರ್ಕ್ ಸಾಮರ್ಥ್ಯ ಹೊಂದಿದೆ. 23.5ಕಿ.ಮೀ ಚಲಿಸಬಲ್ಲದು.

1.4 ಪೆಟ್ರೋಲ್ ಎಂಜಿನ್ 1599ಸಿಸಿ ಹಾಗೂ 103ಬಿಎಚ್್ಪಿ ಮತ್ತು 146 ಟಾರ್ಕ್ ಹೊಂದಿದ್ದು, ಫೈವ್ ಸ್ಪೀಡ್ ಮ್ಯಾನುಯಲ್ ಟ್ರಾನ್ಸ್ ಮಿಷನ್ ಹೊಂದಿದೆ. ಲೀಟರಿಗೆ 11.8ಕಿ.ಮೀ ದೂರ ಚಲಿಸಬಲ್ಲದು. ಬೆಲೆ 7.18 ಲಕ್ಷದಿಂದ 11.51 ಲಕ್ಷದವರೆಗೆ(ಎಕ್ಸ್ ಷೋರೂಂನಂತೆ) ಲಭ್ಯವಿದೆ. 4ನೇ ತಲೆಮಾರಿನ ಹೊಂಡಾ ಸಿಟಿ ಪರಿಚಯವಾದ ಮೇಲೆ ಹ್ಯುಂಡೈ ವರ್ನಾ ಮಾರುಕಟ್ಟೆ ಕುಸಿತ ಕಾಣುತ್ತಿದೆ.

ಭಾರತೀಯ ವಾಹನ ತಯಾರಕ ಸಂಸ್ಥೆಗಳು (ಎಸ್್ ಐಎಎಂ) ಸಂಗ್ರಹಿಸಿದ ಮಾಹಿತಿ ಮತ್ತು ಕಂಪೆನಿ ಮೂಲಗಳ ಪ್ರಕಾರ ಜನವರಿ ಮತ್ತು ಜುಲೈ ಅವಧಿಯಲ್ಲಿ ಹೋಂಡಾ ಸಿಟಿ ಮಾರಾಟ 50 ಸಾವಿರ ದಾಟಿದೆ. ಆದರೆ ಹ್ಯುಂಡೈ ವರ್ನಾ ಮಾರಾಟವಾಗಿರುವುದು ಕೇವಲ 23 ಸಾವಿರ.

ಫೋರ್ಡ್ ಫಿಯೆಸ್ಟಾ
ದೇಶದ ಕಾರು ಮಾರುಕಟ್ಟೆಯಲ್ಲಿ ತೀವ್ರ ಹಿನ್ನಡೆ ಅನುಭವಿಸಿದ್ದ ಫಿಯೆಸ್ಟಾ ಇದೀಗ ಕೆಲವು ಬದಲಾವಣೆಗಳೊಂದಿಗೆ ಮತ್ತೆ ಮಾರುಕಟ್ಟೆಗೆ ಬಂದಿದೆ. ಉತ್ತಮ ಒಳವಿನ್ಯಾಸ, ಇಂಧನ ದಕ್ಷತೆಯಿಂದ ಮರಳಿ ಗ್ರಾಹಕರನ್ನು ಸಂಪಾದಿಸಿಕೊಂಡಿದೆ. ಆರನೇ ತಲೆಮಾರಿನ ಫಿಯೆಸ್ಟಾ ಉತ್ತಮ ಡೀಸೆಲ್ ಎಂಜಿನ್ ಹೊಂದಿದೆ. 1.5 ಲೀಟರ್ 4 ಸಿಲಿಂಡರ್ ಡ್ಯೂರಾಟಾರ್ಕ್ ಟಿಡಿಸಿಐ 90ಬಿಎಚ್ ಪಿ ಮತ್ತು 204 ಎನ್ ಎಂ ಶಕ್ತಿ ಉತ್ಪಾದಿಸಬಲ್ಲದು. ಲೀಟರಿಗೆ 25.1ಕಿ.ಮೀ ದೂರ ಚಲಿಸಬಲ್ಲದು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.