ADVERTISEMENT

ಆತಿಥೇಯರಿಗೆ ಮಣಿದ ಇಂಗ್ಲೆಂಡ್‌

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2016, 19:48 IST
Last Updated 10 ಫೆಬ್ರುವರಿ 2016, 19:48 IST

ಸೆಂಚೂರಿಯನ್‌ (ಎಎಫ್‌ಪಿ): ಕ್ವಿಂಟನ್‌ ಡಿ ಕಾಕ್‌ ಮತ್ತು ಹಾಶಿಮ್‌ ಆಮ್ಲಾ ಅವರ ದ್ವಿಶತಕದ ಜೊತೆಯಾಟದ ನೆರವಿ ನಿಂದಾಗಿ ಆತಿಥೇಯ ದಕ್ಷಿಣ ಆಫ್ರಿಕಾ ತಂಡ ಇಂಗ್ಲೆಂಡ್ ಎದುರಿನ ಮೂರನೇ ಏಕದಿನ ಕ್ರಿಕೆಟ್‌ ಪಂದ್ಯದಲ್ಲಿ ಏಳು ವಿಕೆಟ್‌ಗಳ ಭರ್ಜರಿ ಗೆಲುವು ಪಡೆದಿದೆ.

ಇದರಿಂದ ಐದು ಪಂದ್ಯಗಳ ಸರಣಿ ಯಲ್ಲಿ 2–1ರಲ್ಲಿ ಮುನ್ನಡೆ ಪಡೆದು ಕೊಂಡಿತು. ಸೂಪರ್‌ ಸ್ಪೋರ್ಟ್ಸ್‌ ಪಾರ್ಕ್‌ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ  ಪ್ರವಾಸಿ ತಂಡ ನಿಗದಿತ ಓವರ್‌ಗಳಲ್ಲಿ ಎಂಟು ವಿಕೆಟ್‌ ಕಳೆದುಕೊಂಡು 318 ರನ್‌ ಕಲೆ ಹಾಕಿತ್ತು. ಸವಾಲಿನ ಗುರಿಯನ್ನು ಹರಿಣಗಳ ನಾಡಿನ ತಂಡ 46.2 ಓವರ್‌ಗಳಲ್ಲಿ ತಲುಪಿತು.

ಸಂಕ್ಷಿಪ್ತ ಸ್ಕೋರು: ಇಂಗ್ಲೆಂಡ್‌ 50  ಓವರ್‌ಗಳಲ್ಲಿ 8  ವಿಕೆಟ್‌ಗೆ 318 (ಅಲೆಕ್ಸ್ ಹೇಲ್ಸ್‌ 65, ಜೋ ರೂಟ್‌ 125, ಬೆನ್‌ ಸ್ಟೋಕ್ಸ್‌ 53; ಕೇಲ್‌ ಅಬಾಟ್‌ 50ಕ್ಕೆ2, ಕಗಿಸೊ ರಬಾಡ 65ಕ್ಕೆ2). ದಕ್ಷಿಣ ಆಫ್ರಿಕಾ 46.2 ಓವರ್‌ಗಳಲ್ಲಿ 3 ವಿಕೆಟ್‌ಗೆ 319 ( ಡಿ ಕಾಕ್‌ 135,  ಆಮ್ಲಾ 127 ; ಕ್ರಿಸ್‌ ಜೋರ್ಡಾನ್‌ 54ಕ್ಕೆ1, ಮೊಯಿನ್ ಅಲಿ 75ಕ್ಕೆ1). ಫಲಿತಾಂಶ: ದಕ್ಷಿಣ ಆಫ್ರಿಕಾಕ್ಕೆ 7 ವಿಕೆಟ್‌ ಜಯ. ಪಂದ್ಯ ಶ್ರೇಷ್ಠ: ಕ್ವಿಂಟನ್‌ ಡಿ ಕಾಕ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.