ADVERTISEMENT

ಆಸ್ಟ್ರೇಲಿಯಾ ಓಪನ್‌: ನಾಲ್ಕರ ಘಟ್ಟಕ್ಕೆ ಸಾನಿಯಾ, ಪೇಸ್‌

​ಪ್ರಜಾವಾಣಿ ವಾರ್ತೆ
Published 29 ಜನವರಿ 2015, 9:24 IST
Last Updated 29 ಜನವರಿ 2015, 9:24 IST

ಮೆಲ್ಬರ್ನ್‌ (ಐಎಎನ್‌ಎಸ್‌): ಸಾನಿಯಾ ಮಿರ್ಜಾ – ಬ್ರೂನೊ ಸ್ವಾರೆಸ್‌ ಮತ್ತು ಲಿಯಾಂಡರ್‌ ಪೇಸ್‌– ಮಾರ್ಟಿನಾ ಹಿಂಗಿಸ್‌ ಜೋಡಿ ಆಸ್ಟ್ರೇಲಿಯಾ ಓಪನ್ ಟೆನಿಸ್ ಟೂರ್ನಿಯ ಮಿಶ್ರ ಡಬಲ್ಸ್‌ ವಿಭಾಗದ ಸೆಮಿಫೈನಲ್‌ ಪ್ರವೇಶಿಸಿವೆ.

ಬುಧವಾರ ನಡೆದ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಸಾನಿಯಾ ಮತ್ತು ಬ್ರೆಜಿಲ್‌ನ ಸ್ವಾರೆಸ್‌ 6–2, 6–2 ರಲ್ಲಿ ಕ್ಯಾಸೆ ಡೆಲಾಕ್ವ ಮತ್ತು ಜಾನ್‌ ಪಿಯರ್ಸ್‌ ವಿರುದ್ಧ ಜಯ ಸಾಧಿಸಿ ಸೆಮಿಫೈನಲ್‌ ಪ್ರವೇಶಿಸಿದರು.

ಪೇಸ್‌ ಮತ್ತು ಸ್ವಿಟ್ಜರ್‌ಲೆಂಡ್‌ನ ಮಾರ್ಟಿನಾ ಹಿಂಗಿಸ್‌ 6–3, 6–1 ರಲ್ಲಿ ಜೆಕ್‌ ಗಣರಾಜ್ಯದ ಆಂಡ್ರಿಯಾ ಹವಕೋವಾ– ಆಸ್ಟ್ರಿಯಾದ ಅಲೆಕ್ಸಾಂಡರ್‌ ಪೆಯಾ ಎದುರು ಗೆಲುವು ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT