ADVERTISEMENT

ಆಸ್ಟ್ರೇಲಿಯಾ ಕ್ರಿಕೆಟಿಗರು ಸ್ನೇಹಿತರಾಗಿ ಉಳಿದಿಲ್ಲ: ಕೊಹ್ಲಿ ಹೇಳಿಕೆಗೆ ಆಸೀಸ್‌ ಮಾಜಿ ಕ್ರಿಕೆಟಿಗರಿಂದ ಖಂಡನೆ

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2017, 15:10 IST
Last Updated 29 ಮಾರ್ಚ್ 2017, 15:10 IST
ಆಸ್ಟ್ರೇಲಿಯಾ ಕ್ರಿಕೆಟಿಗರು ಸ್ನೇಹಿತರಾಗಿ ಉಳಿದಿಲ್ಲ: ಕೊಹ್ಲಿ ಹೇಳಿಕೆಗೆ ಆಸೀಸ್‌ ಮಾಜಿ ಕ್ರಿಕೆಟಿಗರಿಂದ ಖಂಡನೆ
ಆಸ್ಟ್ರೇಲಿಯಾ ಕ್ರಿಕೆಟಿಗರು ಸ್ನೇಹಿತರಾಗಿ ಉಳಿದಿಲ್ಲ: ಕೊಹ್ಲಿ ಹೇಳಿಕೆಗೆ ಆಸೀಸ್‌ ಮಾಜಿ ಕ್ರಿಕೆಟಿಗರಿಂದ ಖಂಡನೆ   

ನವದೆಹಲಿ: ಆಸ್ಟ್ರೇಲಿಯಾ ಕ್ರಿಕೆಟ್‌ನ ದಿಗ್ಗಜ ಆಟಗಾರ ಮಾರ್ಕ್‌ ಟೇಲರ್‌ ಸೇರಿದಂತೆ ಹಲವು ಮಾಜಿ ಕ್ರಿಕೆಟಿಗರು ಕೊಹ್ಲಿ ಹೇಳಿಕೆಯನ್ನು ಖಂಡಿಸಿದ್ದಾರೆ.

‘ವೈಯಕ್ತಿಕವಾಗಿ ಇನ್ನಷ್ಟು ಬೆಳೆಯ ಬೇಕಾಗಿರುವುದರಿಂದ ಭಾರತ ಕ್ರಿಕೆಟ್‌ ತಂಡದ ನಾಯಕ ವಿರಾಟ್‌ ಕೊಹ್ಲಿ ಯಾರೊಂದಿಗೂ ಹಗೆ ಇಟ್ಟುಕೊಳ್ಳುವುದು ಬೇಡ. ಕ್ರೀಡೆಯಲ್ಲಿ ಇದೆಲ್ಲಾ ಸಾಮಾನ್ಯ’ ಎಂದು ಮಾರ್ಕ್‌ ಟೇಲರ್‌ ವಿರಾಟ್‌ಗೆ ಸಲಹೆ ನೀಡಿದ್ದಾರೆ.

ಭಾರತ ತಂಡದ ನಾಯಕ ಬಾರ್ಡರ್‌– ಗವಾಸ್ಕರ್‌ ಸರಣಿ ಗೆಲುವಿನ ಬಳಿಕ ಆಸ್ಟ್ರೇಲಿಯಾ ಕ್ರಿಕೆಟಿಗರು ಸ್ನೇಹಿತರಾಗಿ ಉಳಿದಿಲ್ಲ ಎಂದು ಅಭಿಪ್ರಾಯ ಹಂಚಿಕೊಂಡಿದ್ದರು.

ADVERTISEMENT

ಇದರ ಬಗ್ಗೆ ಪ್ರತಿಕ್ರಿಯಿಸಿರುವ ಟೇಲರ್‌ ‘ಇದು ಒಳ್ಳೆಯ ಬೆಳವಣಿಗೆಯಲ್ಲ ಎಂದಿದ್ದು, ದೀರ್ಘಕಾಲ ಕ್ರೀಡೆಯಲ್ಲಿ ಭಾಗವಹಿಸುವಾಗ ವೈರತ್ವ ಕಟ್ಟಿಕೊಳ್ಳುವುದು ಹಾಗು ವಿವಾದಗಳನ್ನು ಮೈಮೇಲೆ ಎಳೆದುಕೊಳ್ಳವಾಗ ಎಚ್ಚರದಿಂದಿರಬೇಕು’ ಎಂದು ತಿಳಿಸಿದ್ದಾರೆ.

ಕ್ರೀಡೆಯನ್ನು ‘ತೀರಾ ವೃತ್ತಿಪರವಾಗಿ ಪರಿಗಣಿಸುವುದಕ್ಕಿಂತ, ಕ್ರೀಡಾಭಿಮಾನಿಗಳು ನಮ್ಮಿಂದ ಬಯಸುವುದರ ಕಡೆಗಷ್ಟೇ ಗಮನ ನೀಡುವುದು ಒಳಿತು’ ಎಂದು ಹೇಳಿದ್ದಾರೆ.

ಆಸ್ಟ್ರೇಲಿಯಾ ಕ್ರಿಕೆಟ್‌ ತಂಡದ ಕೋಚ್‌ ಡೆರೆನ್‌ ಲೆಹ್ಮಾನ್‌ ಕೂಡ ಕೊಹ್ಲಿ ಹೇಳಿಕೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದು, ರಹಾನೆ ನಾಯಕತ್ವದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಟೆಸ್ಟ್‌ ಸರಣಿಯುದ್ದಕ್ಕೂ ಹಲವು ವಿವಾದಗಳು ಸುಳಿದಾಡಿದ್ದವು. ಸರಣಿಯನ್ನು ಭಾರತ 2–1 ಅಂತರದಲ್ಲಿ ಗೆದ್ದು ಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.