ADVERTISEMENT

ಉದ್ದೀಪನ ಮದ್ದು: ವಿವರಣೆ ಕೇಳಿದ ಎಎಫ್‌ಐ

ಪಿಟಿಐ
Published 24 ಮೇ 2017, 19:30 IST
Last Updated 24 ಮೇ 2017, 19:30 IST

ನವದೆಹಲಿ: ನಿಷೇಧಿತ ಉದ್ದೀಪನ ಮದ್ದು ‘ಮೆಲ್ಡೋನಿಯಂ’ ಇರಿಸಿಕೊಂಡಿದ್ದಕ್ಕಾಗಿ ಅಥ್ಲೀಟ್‌ ಒಬ್ಬ ರನ್ನು ಅಮಾನತುಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿ ಅಥ್ಲೆಟಿಕ್ ಫೆಡರೇಷನ್ ಆಫ್ ಇಂಡಿಯಾದ (ಎಎಫ್‌ಐ) ಅಧಿ ಕಾರಿಗಳು ತರಬೇತುದಾರರಿಂದ ವಿವರಣೆ ಕೇಳಿದೆ.

ಪಟಿಯಾಲದ ರಾಷ್ಟ್ರೀಯ ಕ್ರೀಡಾ ಸಂಸ್ಥೆಯಲ್ಲಿ ತಪಾಸಣೆ ನಡೆಸಿದ ಸಂದರ್ಭ ದಲ್ಲಿ ಉದ್ದೀಪನ ಮದ್ದು ಕಂಡು ಬಂದ ಕಾರಣ ರಾಷ್ಟ್ರೀಯ ಉದ್ದೀಪನ ಮದ್ದು ಘಟಕ (ನಾಡಾ) ಅಥ್ಲೀಟ್‌ ಒಬ್ಬರನ್ನು (ಹೆಸರು ಬಹಿರಂಗಗೊಳಿಸಿಲ್ಲ) ಅಮಾನತುಗೊಳಿಸಿತ್ತು. 

‘ಕೋಚ್‌ಗಳಿಂದ ಮಾಹಿತಿ ಪಡೆದ ನಂತರ ಮುಂದಿನ ಹೆಜ್ಜೆ ಕುರಿತು ನಿರ್ಧರಿಸಲು ಗುಪ್ತ ಸಭೆ ನಡೆಸಲಾಗುವುದು’ ಎಂದು ಎಎಫ್‌ಐ ಅಧಿಕಾರಿಯೊಬ್ಬರು ಸುದ್ದಿಸಂಸ್ಥೆಗೆ ತಿಳಿಸಿದರು.

ADVERTISEMENT

‘ಅಥ್ಲೀಟ್‌ ಮುಂದಿನ ಸೋಮವಾರ ವಿವರಣೆ ನೀಡಬೇಕು. ಮದ್ದು ಸೇವಿಸಿದ್ದು ಸಾಬೀತಾದರೆ ಅವರ ಮೇಲೆ ನಾಲ್ಕು ವರ್ಷಗಳ ನಿಷೇಧ ಹೇರಲಾಗುವುದು’ ಎಂದು ನಾಡಾ ಮುಖ್ಯಸ್ಥ ನವೀನ್ ಅಗರವಾಲ್‌ ತಿಳಿಸಿದರು. 

ಟೆನಿಸ್ ತಾರೆ, ರಷ್ಯಾದ ಮರಿಯಾ ಶರಪೋವಾ ಅವರ ಪ್ರಕರಣದಲ್ಲಿ ಮೆಲ್ಡೋನಿಯಂ ಜಾಗತಿಕ ಸುದ್ದಿಗೆ ಗ್ರಾಸವಾಗಿತ್ತು. ಶರಪೋವಾ ಈ ಮದ್ದು ಸೇವಿಸಿ 15 ತಿಂಗಳು ನಿಷೇಧಕ್ಕೆ ಒಳಗಾಗಿದ್ದರು. ಭಾರತದಲ್ಲಿ ಅಥ್ಲೀಟ್ ಒಬ್ಬರು ಮೆಲ್ಡೋನಿಯಂ ಸೇವಿಸಿದ ಆರೋಪಕ್ಕೆ ಒಳಗಾಗುತ್ತಿರುವುದು ಇದೇ ಮೊದಲು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.