ADVERTISEMENT

ಎಲ್ಲ ಭಾರತೀಯರಿಗೂ ಧನ್ಯವಾದ, ಐಪಿಎಲ್‌ 10ನೇ ಆವೃತ್ತಿ ನನಗೆ ಅವಿಸ್ಮರಣೀಯ: ಸ್ಟೀವ್‌ ಸ್ಮಿತ್‌

ಏಜೆನ್ಸೀಸ್
Published 22 ಮೇ 2017, 11:01 IST
Last Updated 22 ಮೇ 2017, 11:01 IST
ಎಲ್ಲ ಭಾರತೀಯರಿಗೂ ಧನ್ಯವಾದ, ಐಪಿಎಲ್‌ 10ನೇ ಆವೃತ್ತಿ ನನಗೆ ಅವಿಸ್ಮರಣೀಯ: ಸ್ಟೀವ್‌ ಸ್ಮಿತ್‌
ಎಲ್ಲ ಭಾರತೀಯರಿಗೂ ಧನ್ಯವಾದ, ಐಪಿಎಲ್‌ 10ನೇ ಆವೃತ್ತಿ ನನಗೆ ಅವಿಸ್ಮರಣೀಯ: ಸ್ಟೀವ್‌ ಸ್ಮಿತ್‌   

ಹೈದರಾಬಾದ್‌: ಐಪಿಎಲ್‌ 10ನೇ ಆವೃತ್ತಿಯಲ್ಲಿ ಆಸ್ಟ್ರೇಲಿಯಾ ತಂಡದ ನಾಯಕ ಸ್ಟೀವ್‌ ಸ್ಮಿತ್‌ ರೈಸಿಂಗ್ ಪುಣೆ ಸೂಪರ್‌ಜೈಂಟ್ ತಂಡವನ್ನು ಯಶಸ್ವಿಯಾಗಿ ಮುನ್ನೆಡಿಸಿದ್ದಾರೆ.

ಉಪ್ಪಳದ ರಾಜೀವಗಾಂಧಿ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಫೈನಲ್‌ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್‌– ರೈಸಿಂಗ್ ಪುಣೆ ತಂಡಗಳು ‌ಮುಖಾಮುಖಿಯಾಗಿದ್ದವು.

ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ತಂಡ 20 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 129 ರನ್‌ ಗಳಿಸಿತ್ತು. ಇದೇ ಮೊದಲ ಬಾರಿ ಫೈನಲ್‌ ಪ್ರವೇಶಿಸಿದ್ದ ರೈಸಿಂಗ್ ಪುಣೆ ತಂಡವು 20 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 128 ರನ್‌ ಗಳಿಸಿತು. ಪುಣೆ ತಂಡದ ನಾಯಕ ಸ್ಟೀವನ್ ಸ್ಮಿತ್ (51; 50ಎ 2ಬೌಂ, 2ಸಿ) ಮತ್ತು ಅಜಿಂಕ್ಯ ರಹಾನೆ (44; 38ಎ, 5ಬೌಂ) ಅವರ ದಿಟ್ಟ ಬ್ಯಾಟಿಂಗ್‌ನ ಹೊರತಾಗಿಯೂ ಜಯ ಒಲಿಯಲಿಲ್ಲ.

ಕೊನೆಯ ಓವರ್‌ನಲ್ಲಿ ಎಡಗೈ ವೇಗಿ ಮಿಷೆಲ್‌ ಜಾನ್ಸನ್ ಅವರು ಕಬಳಿಸಿದ ಎರಡು ವಿಕೆಟ್‌ಗಳ ನೆರವಿನಿಂದ ಮುಂಬೈ ತಂಡವು 1 ರನ್‌ ಅಂತರದಿಂದ ರೈಸಿಂಗ್ ಪುಣೆ ಸೂಪರ್‌ಜೈಂಟ್ ತಂಡವನ್ನು ಸೋಲಿಸಿತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.