ADVERTISEMENT

ಕಬಡ್ಡಿ: ಮೂಡುಬಿದಿರೆ ಆಳ್ವಾಸ್ ತಂಡಕ್ಕೆ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2017, 19:39 IST
Last Updated 23 ಏಪ್ರಿಲ್ 2017, 19:39 IST

ಕೊಪ್ಪ: ಮೂಡುಬಿದಿರೆಯ ಆಳ್ವಾಸ್ ತಂಡವು ತಾಲ್ಲೂಕಿನ ಹರಿಹರಪುರದ ಅ.ರಾ.ಸ. ಪದವಿಪೂರ್ವ ಕಾಲೇಜು ಕ್ರೀಡಾಂಗಣದಲ್ಲಿ ನಡೆದ ರಾಜ್ಯಮಟ್ಟದ ಪುರುಷರ ಹೊನಲು ಬೆಳಕಿನ ಕಬಡ್ಡಿ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದುಕೊಂಡಿದೆ.

ಶನಿವಾರ ನಡೆದ ಫೈನಲ್‌ನಲ್ಲಿ ಆಳ್ವಾಸ್‌ ತಂಡ 28–18 ಪಾಯಿಂಟ್ಸ್‌ನಿಂದ ಬೆಂಗಳೂರು ಕೋಸ್ಟಲ್ ಎದುರು ಗೆಲುವು ಪಡೆಯಿತು. ವಿಜಯೀ ತಂಡ ರೈಡಿಂಗ್‌ ಮತ್ತು ರಕ್ಷಣಾ ವಿಭಾಗದಲ್ಲಿ ಮಿಂಚಿತು.

ಹರಿಹರಪುರ ಗೆಳೆಯರ ಬಳಗ ಮತ್ತು ರಾಜ್ಯ ಅಮೆಚೂರ್ ಕಬಡ್ಡಿ ಸಂಸ್ಥೆ ಜಂಟಿಯಾಗಿ ಟೂರ್ನಿ ಆಯೋಜಿಸಿತ್ತು. ಮೊದಲ ಬಾರಿಗೆ ರಬ್ಬರ್ ಹಾಸಿನ ಅಂಕಣದಲ್ಲಿ ಟೂರ್ನಿ ಆಯೋಜಿಸ ಲಾಗಿತ್ತು.

ಚಾಂಪಿಯನ್ ತಂಡಕ್ಕೆ  ₹45 ಸಾವಿರ ನಗದು, ಪಾರಿತೋಷಕ ಮತ್ತು ಆಟಗಾರರಿಗೆ ವೈಯಕ್ತಿಕ ಪದಕಗಳನ್ನು ನೀಡಲಾಯಿತು. ರನ್ನರ್ಸ್‌ ಅಪ್ ಸ್ಥಾನ ಪಡೆದ ಬೆಂಗಳೂರು ಕೋಸ್ಟಲ್ ತಂಡಕ್ಕೆ ₹ 25 ಸಾವಿರ ನಗದು ಲಭಿಸಿತು.

ಸೆಮಿಫೈನಲ್ ಪ್ರವೇಶಿಸಿದ್ದ ಗೋಲ್ಡನ್ ಲೇಔಟ್ ಮಂಗಳೂರು ತಂಡ ಮತ್ತು ಮಾರುತಿ ಬೆಂಗಳೂರು ತಂಡಗಳಿಗೆ ತಲಾ ₹ 7500 ನಗದು ಬಹು ಮಾನ ಪಡೆದುಕೊಂಡವು. ಟೂರ್ನಿ ಯಲ್ಲಿ 13 ತಂಡಗಳು ಭಾಗವಹಿಸಿದ್ದವು.

ಆಳ್ವಾಸ್ ತಂಡದ  ರಕ್ಷಿತ್ ಪೂಜಾರಿ ಟೂರ್ನಿಯ ಅತ್ಯುತ್ತಮ ಆಲ್‌ರೌಂಡರ್‌ ಪ್ರಶಸ್ತಿಗೆ ಪಾತ್ರರಾದರು. ಪೋಸ್ಟಲ್ ಬೆಂಗಳೂರು ತಂಡದ ಆರ್ಮುಗಂ (ಅತ್ಯುತ್ತಮ ದಾಳಿಗಾರ), ಮಾರುತಿ ಬೆಂಗಳೂರು ತಂಡದ ಮನೋಜ್ (ಅತ್ಯುತ್ತಮ ಹಿಡಿತಗಾರ) ಗೌರವ ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.