ADVERTISEMENT

ಕ್ರಿಕೆಟ್: ಆರ್‌ಡಬ್ಲ್ಯುಎಫ್ ತಂಡಕ್ಕೆ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2017, 19:30 IST
Last Updated 21 ಮಾರ್ಚ್ 2017, 19:30 IST
ಚಾಂಪಿಯನ್ ಆದ ರೈಲು ಗಾಲಿ ಕಾರ್ಖಾನೆ ತಂಡದ ಆಟಗಾರರು.  (ಕುಳಿತವರು, ಎಡದಿಂದ ಬಲಕ್ಕೆ) ಆರ್‌. ಜೋನಾಥನ್ (ನಾಯಕ), ಎಸ್.ಆರ್.ದೀಪು (ಕೋಚ್‌), ಎಲ್‌.ಎಮ್.ಪಾಂಡೆ (ಮ್ಯಾನೇಜರ್‌), ಒ.ಪಿ.ಅಗರ್ವಾಲ್‌ (ಮ್ಯಾನೇಜರ್‌), ಅಜಯ್ ಸಿಂಗ್‌ (ಆರ್‌ಡಬ್ಲ್ಯುಎಫ್‌ಎಸ್‌ಎ ಅಧ್ಯಕ್ಷ), ಸಂದೀಪ್ ಸಿಂಗ್‌ (ಕಾರ್ಯದರ್ಶಿ), ಕೆ.ಎರೆಗೌಡ. (ನಿಂತವರು); ಎಸ್‌.ಪಿ ಮಂಜುನಾಥ್‌, ಎಸ್.ಕೆ.ಮೊಯಿನುದ್ದೀನ್‌, ಸುನಿಲ್ ಕುಮಾರ್ ಜೈನ್, ಮಂಜೇಶ್ ರೆಡ್ಡಿ, ಪ್ರಸನ್ನ ಪಾಟೀಲ್, ಶೋಯಬ್ ಮ್ಯಾನೇಜರ್‌, ವಿ. ಚೆಲುವರಾಜ್‌, ಪ್ರಜ್ಞೇಶ್ ದೇಸಾಯಿ, ಕೆ. ಪ್ರವೀಣ್‌, ಸಿ.ಕೆ ಅಕ್ಷಯ್‌, ಪಿ.ಯೋಗೇಶ್‌,  ಕೆ.ಎಚ್‌.ಮನೋಜ್‌, ಸಂದೀಪ್ ಹೆಬ್ಬಾರ್‌.

ಬೆಂಗಳೂರು: ವಿ. ಚೆಲುವರಾಜ್‌ (118), ಹಾಗೂ ಆರ್‌. ಜೋನಾಥನ್‌ (118) ಅವರ ಮೂರನೇ ವಿಕೆಟ್‌ ಜತೆಯಾಟದಿಂದ ಬಂದ 210 ರನ್‌ಗಳ  ನೆರವಿನಿಂದ ರೈಲು ಗಾಲಿ ಕಾರ್ಖಾನೆ ತಂಡ ಇಲ್ಲಿ ನಡೆದ ಕೆಎಸ್‌ಎಫ್‌ಎ ವತಿಯ ಗುಂಪು 2ರ ಕ್ರಿಕೆಟ್ ಟೂರ್ನಿಯಲ್ಲಿ ಎಸ್‌ಬಿಐ ವಿರುದ್ಧದ ಫೈನಲ್ ಪಂದ್ಯವನ್ನು 14ರನ್‌ಗಳಲ್ಲಿ ಗೆದ್ದುಕೊಳ್ಳುವ ಮೂಲಕ ಚಾಂಪಿಯನ್ ಆಗಿದೆ.

ಮೊದಲು ಬ್ಯಾಟ್ ಮಾಡಿದ ಆರ್‌ಡಬ್ಲ್ಯುಎಫ್ ತಂಡ 49.1 ಓವರ್‌ ಗಳಲ್ಲಿ ಎಲ್ಲಾ ವಿಕೆಟ್‌ ಕಳೆದುಕೊಂಡು 303ರನ್ ಕಲೆಹಾಕಿತು.ಇದಕ್ಕೆ ಉತ್ತರ ವಾಗಿ ಎಸ್‌ಬಿಐ 48.2 ಓವರ್‌ಗಳಲ್ಲಿ 289ರನ್ ಗಳಿಸುವಷ್ಟರಲ್ಲಿ ಸರ್ವಪತನ ಗೊಂಡಿತು.  ಆರ್‌ಡಬ್ಲ್ಯುಎಫ್ ತಂಡದ ಇಬ್ಬರು ಶತಕ ಬಾರಿಸಿದರು. ಚೆಲುವ ರಾಜ್ 115 ಎಸೆತಗಳಲ್ಲಿ 118 ರನ್ ದಾಖಲಿಸಿದರೆ, ಜೋನಾ ಥನ್ 123 ಎಸೆತಗಳಲ್ಲಿ 118 ರನ್ ಕಲೆ ಹಾಕಿದರು. ಮೂರನೇ ವಿಕೆಟ್ ಜತೆ ಯಾಟದಲ್ಲಿ ಈ ಜೋಡಿ 210 ರನ್‌  ಸೇರಿಸಿತು.

ಸಂಕ್ಷಿಪ್ತ ಸ್ಕೋರು: ಆರ್‌ಡಬ್ಲ್ಯು ಎಫ್: 49.1 ಓವರ್‌ಗಳಲ್ಲಿ 303 (ವಿ. ಚೆಲುವರಾಜ್‌ 118, ಆರ್‌. ಜೋನಾ ಥನ್‌ 118, ಸಿ.ಕೆ.ಅಕ್ಷಯ್‌ 20, ಎಸ್‌.ಪಿ ಮಂಜುನಾಥ್‌ 22; ಎಚ್‌.ಎಸ್.ಶರತ್‌ 70ಕ್ಕೆ3, ಎಸ್‌.ಅರವಿಂದ್ 72ಕ್ಕೆ3, ಅನಿವೃದ್‌ ಜೋಷಿ 38ಕ್ಕೆ4). ಸ್ಟೇಟ್ ಬ್ಯಾಂಕ್ ಆಫ್‌ ಮೈಸೂರು: 48.2 ಓವರ್‌ಗಳಲ್ಲಿ 289 (ಡಿ. ನಿಶ್ಚಲ್‌ 25, ಕೆ.ಸಿ ಅವಿನಾಶ್ 29, ಅಬ್ಬಾಸ್ 74, ಪವನ್ ದೇಶ್‌ಪಾಂಡೆ 25, ಕೆ.ಎನ್‌. ಭರತ್‌ 54, ಬಿ. ಅಖಿಲ್ 22; ಮನೋಜ್‌ 51ಕ್ಕೆ3, ಶೋಯಬ್‌ ಮ್ಯಾನೇಜರ್ 72ಕ್ಕೆ2, ಸುನಿಲ್ ಕುಮಾರ್ ಜೈನ್ 11ಕ್ಕೆ2, ಎಸ್‌.ಕೆ ಮೊಯಿನುದ್ದೀನ್ 68ಕ್ಕೆ2).

ADVERTISEMENT

ಫಲಿತಾಂಶ: ಆರ್‌ಡಬ್ಲ್ಯುಎಫ್ ತಂಡಕ್ಕೆ 14 ರನ್‌ಗಳ ಜಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.