ADVERTISEMENT

ಕ್ವಾರ್ಟರ್‌ಗೆ ಅಲೆಕ್ಸಾಂಡರ್‌ ಜೆರೆವ್ ಲಗ್ಗೆ

ಏಜೆನ್ಸೀಸ್
Published 19 ಏಪ್ರಿಲ್ 2018, 19:30 IST
Last Updated 19 ಏಪ್ರಿಲ್ 2018, 19:30 IST
ಜೇನ್ ಲೆನಾರ್ಡ್ ಸ್ಟ್ರಫ್ ಎದುರಿನ ಪಂದ್ಯ ಗೆದ್ದ ನಂತರ ಸಂಭ್ರಮಿಸಿದ ಅಲೆಕ್ಸಾಂಡರ್ ಜೆರೆವ್‌ –ಎಎಫ್‌ಪಿ ಚಿತ್ರ
ಜೇನ್ ಲೆನಾರ್ಡ್ ಸ್ಟ್ರಫ್ ಎದುರಿನ ಪಂದ್ಯ ಗೆದ್ದ ನಂತರ ಸಂಭ್ರಮಿಸಿದ ಅಲೆಕ್ಸಾಂಡರ್ ಜೆರೆವ್‌ –ಎಎಫ್‌ಪಿ ಚಿತ್ರ   

ಮಾಂಟೆ ಕಾರ್ಲೊ: ರೋಚಕ ಹೋರಾಟದಲ್ಲಿ ಮೂರನೇ ಶ್ರೇಯಾಂಕದ ಆಟಗಾರ ಅಲೆಕ್ಸಾಂಡರ್ ಜೆರೆವ್‌ ಅವರು ಮಾಂಟೆ ಕಾರ್ಲೊ ಮಾಸ್ಟರ್ಸ್‌ ಟೆನಿಸ್ ಟೂರ್ನಿಯ ಕ್ವಾರ್ಟರ್ ಫೈನಲ್ ಪ್ರವೇಶಿಸಿದರು. ಎಂಟರ ಘಟ್ಟದ ಪಂದ್ಯದಲ್ಲಿ ಜರ್ಮನಿಯ ಅಲೆಕ್ಸಾಂಡರ್ ಅವರು ತಮ್ಮ ಸಹೋದರ ಮಿಶಾ ಜೆರೆವ್ ಜೊತೆ ಸೆಣಸುವ ಸಾಧ್ಯತೆ ಇದೆ.

ಗುರುವಾರ ಸ್ಟ್ರಫ್‌ ವಿರುದ್ಧ ನಡೆದ ಪಂದ್ಯದಲ್ಲಿ ಜೆರೆವ್‌ ಉತ್ತಮ ಆಟ ಆಡಿದರು. ಮೊದಲ ಸೆಟ್‌ನಲ್ಲಿ 6–4ರಿಂದ ಜಯ ಸಾಧಿಸಿದ ಅವರು ನಂತರ 4–6ರ ಹಿನ್ನಡೆ ಕಂಡರು. ಆದರೆ ನಿರ್ಣಾಯಕ ಸೆಟ್‌ನಲ್ಲಿ 6–4ರಿಂದ ಗೆದ್ದು ಮುಂದಿನ ಹಂತಕ್ಕೆ ಲಗ್ಗೆ ಇಟ್ಟರು.

ಮೊದಲ ಸೆಟ್‌ನ ಏಳನೇ ಗೇಮ್‌ನಲ್ಲಿ ಬ್ರೇಕ್ ಪಾಯಿಂಟ್ ಗಳಿಸಿದ ಜೆರೆವ್‌ ಮುಂದಿನ ಸೆಟ್‌ನ ಆರಂಭದಲ್ಲಿ ಉತ್ತಮ ಮುನ್ನಡೆ ಸಾಧಿಸಿದರು. ಆದರೆ ಎದುರಾಳಿ ಆಧಿಪತ್ಯ ಸಾಧಿಸುತ್ತಿದ್ದಂತೆ ಹತಾಶೆಗೊಂಡರು. ಸೆಟ್‌ ಗೆದ್ದು ಸ್ಟ್ರಫ್‌ ಪಂದ್ಯದಲ್ಲಿ ಸಮಬಲ ಸಾಧಿಸುತ್ತಿದ್ದಂತೆ ಜೆರೆವ್ ರ‍್ಯಾಕೆಟ್‌ ನೆಲಕ್ಕೆ ಬಡಿದು ಅಸಮಾಧಾನ ವ್ಯಕ್ತಪಡಿಸಿದರು.

ADVERTISEMENT

ಮೂರನೇ ಸೆಟ್‌ನಲ್ಲಿ ತಿರುಗೇಟು ನೀಡಿದ ಜೆರೆವ್‌ ಆರಂಭದಲ್ಲೇ 5–2ರಿಂದ ಮುನ್ನಡೆ ಗಳಿಸಿದರು. ಆರನೇ ಗೇಮ್‌ನ ಒಂದು ಹಂತದಲ್ಲಿ ಸ್ವಲ್ಪ ಎಡವಿದರೂ ನಂತರ ಸುಧಾರಿಸಿಕೊಂಡು ಸೆಟ್ ಮತ್ತು ಪಂದ್ಯ ಗೆದ್ದರು.

ಡೇವಿಡ್ ಗಫಿನ್‌ ಎಂಟರ ಘಟ್ಟಕ್ಕೆ: ಆರನೇ ಶ್ರೇಯಾಂಕಿತ ಆಟಗಾರ, ಬೆಲ್ಜಿಯಂನ ಡೇವಿಡ್ ಗಫಿನ್‌ 6–4, 7–5ರಿಂದ ರಾಬರ್ಟೊ ಬೌಟಿಸ್ಟಾ ಅಗುಟ್ ಅವರನ್ನು ಮಣಿಸಿ ಎಂಟರ ಘಟ್ಟಕ್ಕೆ ಪ್ರವೇಶಿಸಿದರು.

ಜೊಕೊವಿಚ್‌ಗೆ ಆಘಾತ: ಆಸ್ಟ್ರೇಲಿಯಾದ ಡೊಮಿನಿಕ್‌ ಥೀಮ್ ಅವರಿಗೆ ಮಣಿದ ಸರ್ಬಿಯಾದ ನೊವಾಕ್ ಜೊಕೊವಿಚ್‌ ಮಾಂಟೆ ಕಾರ್ಲೊ ಟೂರ್ನಿಯಿಂದ ಹೊರಬಿದ್ದರು. ಗುರುವಾರ ನಡೆದ ಮೂರನೇ ಸುತ್ತಿನ ಪಂದ್ಯದಲ್ಲಿ ಥೀಮ್‌ 6–7 (2/7), 6–2, 6–3ರಿಂದ ಗೆದ್ದು ಕ್ವಾರ್ಟರ್ ಫೈನಲ್‌ ‍ಪ್ರವೇಶಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.