ಮೈಸೂರು: 8, 0, 6, 6, 2, 8, 4, 2, 0, 0... ಹತ್ತು ಅಂಕಿಗಳನ್ನು ಹೊಂದಿರುವ ಈ ಪಟ್ಟಿ ಯಾರದ್ದೋ ಮೊಬೈಲ್ ಸಂಖ್ಯೆ ಇರಬಹುದು ಎಂದು ಭಾವಿಸಿದರೆ ಅದು ತಪ್ಪು. ಏಕೆಂದರೆ ಇದು ಗಂಗೋತ್ರಿ ಗ್ಲೇಡ್ಸ್ ಅಂಗಳದಲ್ಲಿ ಇಂಡಿಯಾ ಬ್ಲ್ಯೂ ಆಟಗಾರ್ತಿಯರು ಗಳಿಸಿದ ರನ್.
‘ನಮ್ಮೂರಲ್ಲಿ ಮಹಿಳೆಯರು ಆಡುತ್ತಿದ್ದಾರೆ’ ಎಂಬ ಉತ್ಸಾಹದಿಂದ ಆಟವನ್ನು ಕಣ್ತುಂಬಿಕೊಳ್ಳಲು ಬಂದಿದ್ದ ಸ್ಥಳೀಯ ಕ್ರಿಕೆಟ್ ಪ್ರೇಮಿಗಳು ಬೇಸರ ದಿಂದಲೇ ವಾಪಸಾಗಬೇಕಾಯಿತು. ಗ್ಲೇಡ್ಸ್‌ನಲ್ಲಿ ಭಾನುವಾರ ನಡೆದ ಮಹಿಳೆಯರ ಚಾಲೆಂಜರ್ ಟ್ರೋಫಿ ಏಕದಿನ ಕ್ರಿಕೆಟ್ ಟೂರ್ನಿಯ ಮೊದಲ ಪಂದ್ಯದಲ್ಲಿ ಇಂಡಿಯಾ ರೆಡ್ ನೀಡಿದ 143 ರನ್‌ಗಳ ಅಲ್ಪ ಗುರಿಯನ್ನು ಮುಟ್ಟಲು ಇಂಡಿಯಾ ಬ್ಲ್ಯೂ ಬಳಗದವರಿಗೆ ಸಾಧ್ಯವಾಗಲಿಲ್ಲ. ಈ ಪರಿಣಾಮ ರೆಡ್ ತಂಡದವರು 25 ರನ್‌ಗಳಿಂದ ಗೆದ್ದು ನಿಟ್ಟುಸಿರು ಬಿಟ್ಟರು.
ಮೊದಲು ಬ್ಯಾಟ್ ಮಾಡಿದ ರೆಡ್ ತಂಡ 50 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು 142 ರನ್ ಗಳಿಸಿತು. ಸುಲಭ ಗುರಿ ಎದುರು ಬ್ಲ್ಯೂ ಬಳಗ 41.4 ಓವರ್‌ಗಳಲ್ಲಿ 117 ರನ್ ಗಳಿಸುವಷ್ಟರಲ್ಲಿ ಆಲೌಟ್ ಆಯಿತು. ಬ್ಲ್ಯೂ ತಂಡದ ತಿರುಷ್ ಕಾಮಿನಿ (66; 168 ನಿಮಿಷ, 118 ಎಸೆತ, 8 ಬೌಂಡರಿ) ಅವರ ಏಕಾಂಗಿ ಪ್ರಯತ್ನ ಸಾಕಾಗಲಿಲ್ಲ. ಉಳಿದ ಆಟಗಾರ್ತಿಯರು ಎರಡಂಕಿ ಮೊತ್ತ ಕೂಡ ಮುಟ್ಟಲಿಲ್ಲ.
ನಿಧಾನವೇ ಪ್ರಧಾನ: ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಇಂಡಿಯಾ ರೆಡ್ ತಂಡದವರು ನಿಧಾನವೇ ಪ್ರಧಾನ ಎಂಬ ತತ್ವಕ್ಕೆ ಅಂಟಿಕೊಂಡು ಆಡಿದರು. ಅಷ್ಟೇ ಅಲ್ಲ; ಕೇವಲ 21 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡು ಆರಂಭದಲ್ಲೇ ಎಡವಟ್ಟು ಮಾಡಿಕೊಂಡರು.
ಈ ಹಂತದಲ್ಲಿ ಪೂನಮ್ ರಾವತ್ (18; 53 ಎಸೆತ) ಹಾಗೂ ಶಿಖಾ ಪಾಂಡೆ (13; 38 ಎಸೆತ) ತಂಡಕ್ಕೆ ಆಸರೆಯಾ ದರು. ಇವರಿಬ್ಬರು 65 ಎಸೆತ ಎದುರಿಸಿ 4ನೇ ವಿಕೆಟ್‌ಗೆ 25 ರನ್ ಸೇರಿಸಿದರು.
ಈ ತಂಡದ ಸ್ಕೋರ್ ನೂರರ ಗಡಿ ದಾಟಲು ಕಾರಣವಾಗಿದ್ದು ಸ್ನೇಹಲ್ ರಾಣಾ (26; 49 ಎಸೆತ) ಹಾಗೂ ಪೂನಮ್ ಯಾದವ್ (ಔಟಾಗದೆ 30; 73 ಎಸೆತ). ಯಾದವ್ ಎಂಟನೇ ವಿಕೆಟ್‌ಗೆ ಸ್ನೇಹಲ್ ಜೊತೆ ಸೇರಿ 33 ರನ್ ಸೇರಿಸಿದರು. ಬ್ಲ್ಯೂ ತಂಡದ ನಿರಂಜನಾ 3 ವಿಕೆಟ್ ಕಬಳಿಸಿ ಎದುರಾಳಿಯನ್ನು ನಿಯಂತ್ರಿಸಿದರು. ಹಾಗಾಗಿ ರೆಡ್ ತಂಡದ ರನ್‌ರೇಟ್ ಕೇವಲ 2.80.
ಏಕಾಂಗಿ ಹೋರಾಟ: ಸುಲಭ ಗುರಿ ಎದುರು ಇಂಡಿಯಾ ಬ್ಲ್ಯೂ ಆರಂಭ ದಿಂದಲೇ ತಡಬಡಾಯಿಸಿತು. ತಿರುಷ್ ಕಾಮಿನಿ ಹೊರತು ಪಡಿಸಿದರೆ ಉಳಿದ ವರು ಹೀಗೆ ಬಂದು ಹಾಗೆ ಹೋದರು. ಕಾಮಿನಿ 43 ರನ್ ಗಳಿಸಿದ್ದಾಗ ಸ್ಮೃತಿ ಮಂದಾನಾ ಕ್ಯಾಚ್ ಕೈಚೆಲ್ಲಿದರು. ಆ ಜೀವದಾನದ ಲಾಭ ಪಡೆದ ಅವರು ಅರ್ಧ ಶತಕ ಬಾರಿಸಿದರು.
ಅಷ್ಟೇ ಅಲ್ಲ, ಮೈಸೂರಿನ ರಕ್ಷಿತಾ ಕೆ. ಕಾಳೇಗೌಡ ಜೊತೆ ಎರಡನೇ ವಿಕೆಟ್‌ಗೆ 41 ರನ್ (35 ಎಸೆತ) ಸೇರಿಸಿ ಗೆಲುವಿನ ಆಸೆ ಹುಟ್ಟಿಸಿದ್ದರು. ಆದರೆ, ಉಳಿದವ ರಿಂದ ಉತ್ತಮ ಬೆಂಬಲ ಸಿಗಲಿಲ್ಲ. ಚೆನ್ನಾಗಿಯೇ ಆಡುತ್ತಿದ್ದ ಕಾಮಿನಿ ಅವರು ಶುಭಲಕ್ಷ್ಮೀ ಬೌಲಿಂಗ್‌ನಲ್ಲಿ ಫುಲ್‌ಟಾಸ್ ಎಸೆತದಲ್ಲಿ ಕ್ಯಾಚ್ ನೀಡಿದರು. ಕೊನೆಯ ಐದು ವಿಕೆಟ್‌ಗಳು 18 ರನ್‌ಗಳ ಅಂತರದಲ್ಲಿ ಪತನ ಗೊಂಡವು. ಇದಕ್ಕೆ ಕಾರಣವಾಗಿದ್ದು ಶುಭಲಕ್ಷ್ಮೀ ಅವರ ಪ್ರಭಾವಿ ಬೌಲಿಂಗ್. 4 ವಿಕೆಟ್ ಕಬಳಿಸಿ ಪಂದ್ಯಕ್ಕೆ ತಿರುವು ನೀಡಿದರು.
ಸ್ಕೋರ್‌ಕಾರ್ಡ್
ಇಂಡಿಯಾ ರೆಡ್ 9 ಕ್ಕೆ 142 (50 ಓವರ್‌ಗಳಲ್ಲಿ)
ಲತಿಕಾ ಕುಮಾರಿ ಸಿ ಸುಷ್ಮಾ ವರ್ಮ ಬಿ ಕವಿತಾ ಪಾಟೀಲ್ 01
ಸ್ಮೃತಿ ಮಂದಾನಾ ಸಿ ವೇದಾ ಕೃಷ್ಣಮೂರ್ತಿ ಬಿ ನಿರಂಜನಾ ನಾಗರಾಜನ್ 00
ಪೂನಮ್ ರಾವತ್ ಸ್ಟಂಪ್ಡ್ ಸುಷ್ಮಾ ವರ್ಮ ಬಿ ಪ್ರೀತಿ ಬೋಸ್ 18
ಮೇಘನಾ ಸಿಂಗ್ ಸಿ ಸುಷ್ಮಾ ವರ್ಮ ಬಿ ನಿರಂಜನಾ ನಾಗರಾಜನ್ 12
ಶಿಖಾ ಪಾಂಡೆ ರನ್‌ಔಟ್ (ಕವಿತಾ ಪಾಟೀಲ್) 13
ಸ್ನೇಹಾ ರಾಣಾ ಹಿಟ್‌ವಿಕೆಟ್ ಬಿ ಹರ್ಮನ್‌ಪ್ರೀತ್ ಕೌರ್ 26
ಪೂನಮ್ ಯಾದವ್ ಔಟಾಗದೆ 30
ಆರ್. ಕಲ್ಪನಾ ಸಿ ವೇದಾ ಕೃಷ್ಣಮೂರ್ತಿ ಬಿ ಪ್ರೀತಿ ಬೋಸ್ 06
ಸ್ನೇಹಲ್ ಪ್ರಧಾನ್ ಸ್ಟಂಪ್ಡ್ ಸುಷ್ಮಾ ವರ್ಮ ಬಿ ಹರ್ಮನ್‌ಪ್ರೀತ್ ಕೌರ್ 12
ಶುಭಲಕ್ಷ್ಮೀ ಸಿ ಹರ್ಮನ್‌ಪ್ರೀತ್ ಕೌರ್ ಬಿ ನಿರಂಜನಾ ನಾಗರಾಜನ್ 06
ರಾಜೇಶ್ವರಿ ಗಾಯಕ್ವಾಡ್ ಔಟಾಗದೆ 00
ಇತರೆ: (ಲೆಗ್‌ಬೈ–3, ವೈಡ್–10, ನೋಬಾಲ್–1) 14
ವಿಕೆಟ್ ಪತನ: 1–6 (ಸ್ಮೃತಿ; 2.1); 2–6 (ಲತಿಕಾ; 2.6); 3–21 (ಮೇಘನಾ; 8.5); 4–46 (ರಾವತ್; 19.4); 5–67 (ಪಾಂಡೆ; 23.6); 6–90 (ರಾಣಾ; 34.1); 7–96 (ಕಲ್ಪನಾ; 36.5); 8–129 (ಪ್ರಧಾನ್; 47.1); 9–141 (ಶುಭಲಕ್ಷ್ಮಿ; 49.3)
ಬೌಲಿಂಗ್ ವಿವರ: ನಿರಂಜನಾ ನಾಗರಾಜನ್ 9–2–20–3 (ವೈಡ್–1), ಕವಿತಾ ಪಾಟೀಲ್ 7–2–15–1, ಏಕ್ತಾ ಬಿಸ್ತ್ 10–3–25–0 (ನೋಬಾಲ್–1), ಅನನ್ಯಾ ಉಪೇಂದ್ರನ್ 2–0–12–0 (ವೈಡ್–1), ಪ್ರೀತಿ ಬೋಸ್ 10–3–24–2, ಹರ್ಮನ್‌ಪ್ರೀತ್ ಕೌರ್ 9–0–29–2, ವೇದಾ ಕೃಷ್ಣಮೂರ್ತಿ 3–0–14–0 (ವೈಡ್–8)
ಇಂಡಿಯಾ ಬ್ಲೂ 117 (41.4 ಓವರ್‌ಗಳಲ್ಲಿ)
ಪರಮಿತಾ ರಾಯ್ ಬಿ ಸ್ನೇಹಾ ರಾಣಾ 00
ತಿರುಷ್ ಕಾಮಿನಿ ಸಿ ಲತಿಕಾ ಕುಮಾರಿ ಬಿ ಶುಭಲಕ್ಷ್ಮೀ ಶರ್ಮ 66
ರಕ್ಷಿತಾ ಕೆ. ಕಾಳೇಗೌಡ ಬಿ ಶಿಖಾ ಪಾಂಡೆ 08
ಹರ್ಮನ್‌ಪ್ರೀತ್ ಕೌರ್ ಎಲ್‌ಬಿಡಬ್ಲ್ಯು ಬಿ ರಾಜೇಶ್ವರಿ ಗಾಯಕ್ವಾಡ್ 06
ಸುಷ್ಮಾ ವರ್ಮ ಸಿ ಸ್ಮೃತಿ ಮಂದಾನಾ ಬಿ ಸ್ನೇಹಾ ರಾಣಾ 06
ವೇದಾ ಕೃಷ್ಣಮೂರ್ತಿ ಸಿ ಶಿಖಾ ಪಾಂಡೆ ಬಿ ಪೂನಮ್ ಯಾದವ್ 02
ನಿರಂಜನಾ ನಾಗರಾಜನ್ ಸಿ ಲತಿಕಾ ಕುಮಾರಿ ಬಿ ಶುಭಲಕ್ಷ್ಮೀ ಶರ್ಮ 08
ಅನನ್ಯಾ ಉಪೇಂದ್ರನ್ ಸಿ ಕಲ್ಪನಾ ಬಿ ಶುಭಲಕ್ಷ್ಮೀ ಶರ್ಮ 04
ಏಕ್ತಾ ಬಿಸ್ತ್ ಔಟಾಗದೆ 02
ಪ್ರೀತಿ ಬೋಸ್ ಬಿ ಶುಭಲಕ್ಷ್ಮೀ ಶರ್ಮ 00
ಕವಿತಾ ಪಾಟೀಲ್ ಬಿ ಸ್ನೇಹಲ್ ಪ್ರಧಾನ್ 00
ಇತರೆ: (ಲೆಗ್‌ಬೈ–3, ವೈಡ್–12) 15
ವಿಕೆಟ್ ಪತನ: 1– 0 (ಪರಮಿತಾ; 0.3); 2–41(ರಕ್ಷಿತಾ; 6.2); 3–59 (ಕೌರ್; 18.2); 4–70 (ಸುಷ್ಮಾ; 23.4); 5–77 (ವೇದಾ; 26.4); 6–99 (ನಿರಂಜನಾ; 36.1); 7–112 (ತಿರುಷ್; 38.6); 8–116 (ಅನನ್ಯಾ; 40.1); 9–116 (ಪ್ರೀತಿ; 40.6); 10–117 (ಕವಿತಾ; 41.4)
ಬೌಲಿಂಗ್ ವಿವರ: ಸ್ನೇಹಾ ರಾಣಾ 10–4–15–2, ಸ್ನೇಹಲ್ ಪ್ರಧಾನ್ 8.4–1–21–1 (ವೈಡ್–1), ಶಿಖಾ ಪಾಂಡೆ 7–0–18–1 (ವೈಡ್–1), ಶುಭಲಕ್ಷ್ಮೀ ಶರ್ಮ 6–0–30–4 (ವೈಡ್–10), ರಾಜೇಶ್ವರಿ ಗಾಯಕ್ವಾಡ್ 5–1–15–1, ಪೂನಮ್ ಯಾದವ್ 5–0–15–1
ಫಲಿತಾಂಶ: ಇಂಡಿಯಾ ರೆಡ್‌ಗೆ 25 ರನ್‌ಗಳ ಜಯ ಹಾಗೂ 4 ಪಾಯಿಂಟ್. ಮುಂದಿನ ಪಂದ್ಯ: ಇಂಡಿಯಾ ಬ್ಲ್ಯೂ–ಇಂಡಿಯಾ ಗ್ರೀನ್ (ಜೂನ್ 15)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.