ADVERTISEMENT

ಜಯದ ನಿರೀಕ್ಷೆಯಲ್ಲಿ ವಿಜೇಂದರ್

​ಪ್ರಜಾವಾಣಿ ವಾರ್ತೆ
Published 29 ಏಪ್ರಿಲ್ 2016, 19:30 IST
Last Updated 29 ಏಪ್ರಿಲ್ 2016, 19:30 IST
ಜಯದ ನಿರೀಕ್ಷೆಯಲ್ಲಿ ವಿಜೇಂದರ್
ಜಯದ ನಿರೀಕ್ಷೆಯಲ್ಲಿ ವಿಜೇಂದರ್   

ಲಂಡನ್ (ಪಿಟಿಐ): ವೃತ್ತಿಪರ ಬಾಕ್ಸಿಂಗ್ ಸೇರಿದ ಬಳಿಕ ಆಡಿದ ನಾಲ್ಕೂ ಪಂದ್ಯಗಳಲ್ಲಿ ಗೆಲುವು ಪಡೆದಿರುವ ಭಾರತದ ಬಾಕ್ಸರ್‌ ವಿಜೇಂದರ್‌ ಸಿಂಗ್ ಈಗ ಐದನೇ ಹೋರಾಟಕ್ಕೆ ಸಜ್ಜಾಗಿದ್ದಾರೆ.

ವಿಜೇಂದರ್ ಅವರು ವೃತ್ತಿಪರ ಬಾಕ್ಸಿಂಗ್‌ನ ಐದನೇ ಹೋರಾಟ ಶನಿವಾರ ನಡೆಯಲಿದ್ದು ಫ್ರಾನ್ಸ್‌ನ ಮ್ಯಾಟಿಒಜಿ ರಾಯರ್‌ ಎದುರು ಪೈಪೋಟಿ ನಡೆಸಲಿದ್ದಾರೆ. ವಿಜೇಂದರ್‌ ಅವರಿಗೆ ರಾಯರ್ ಅತ್ಯಂತ ಕಠಿಣ ಎದುರಾಳಿ ಎನಿಸಿದ್ದಾರೆ. 

ಒಟ್ಟು 44 ಬೌಟ್‌ಗಳನ್ನು ಆಡಿದ ಅನುಭವ ಹೊಂದಿರುವ ರಾಯರ್ 14 ಪಂದ್ಯಗಳಲ್ಲಿ ಗೆಲುವು ಪಡೆದಿದ್ದಾರೆ. ಇವರ ನಡುವಣ ಹೋರಾಟಕ್ಕೆ ಇಲ್ಲಿನ ಸ್ಟ್ರಾಟ್‌ಫರ್ಡ್‌ ಕಾಪರ್‌ ಅರೆನಾ ವೇದಿಕೆ ಒದಗಿಸಿದೆ.

‘ರಾಯರ್‌ ಕಠಿಣ ಎದುರಾಳಿ ಎಂಬುದು ಗೊತ್ತು. ಆದರೆ ನಾನು ದುರ್ಬಲ ಅಲ್ಲ ಎಂಬುದೂ ತಿಳಿದಿದೆ’ ಎಂದು ವಿಜೇಂದರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

‘ವಿಜೇಂದರ್‌ ಅಮೆಚೂರ್‌ ಬಾಕ್ಸಿಂಗ್‌ನಲ್ಲಿ ಆಡಿದ ಅನೇಕ ಪಂದ್ಯಗಳನ್ನು ನೋಡಿದ್ದೇನೆ. ವೃತ್ತಿಪರ ಬಾಕ್ಸಿಂಗ್‌ನಲ್ಲಿ ಆಡಿದ ಎಲ್ಲಾ ಪಂದ್ಯಗಳಲ್ಲಿ  ಗೆಲುವು ಪಡೆದ  ಬಗ್ಗೆಯೂ  ತಿಳಿದುಕೊಂಡಿದ್ದೇನೆ. ಅವರಿಂದ ಕಠಿಣ ಸವಾಲು ಎದುರಾಗಲಿದೆ. ಇದೊಂದು ಅತ್ಯುತ್ತಮ ಪಂದ್ಯವಾಗಿರ ಲಿದೆ’ ಎಂದು ರಾಯರ್‌ ಹೇಳಿದ್ದಾರೆ.

ಈ  ಪಂದ್ಯ ಸ್ಟಾರ್ ಸ್ಪೋರ್ಟ್‌ 2 ಮತ್ತು ಎಚ್‌.ಡಿ 2 ವಾಹಿನಿಯಲ್ಲಿ ನೇರ ಪ್ರಸಾರ ವಾಗಲಿದೆ. ಭಾರತದ ಕಾಲಮಾನದ ಪ್ರಕಾರ ರಾತ್ರಿ 10.30ಕ್ಕೆ ಪಂದ್ಯ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.