ADVERTISEMENT

ಜಹೀರ್‌ಗೆ ಡೆವಿಲ್ಸ್‌ ನಾಯಕತ್ವ

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2016, 18:54 IST
Last Updated 28 ಮಾರ್ಚ್ 2016, 18:54 IST

ನವದೆಹಲಿ (ಪಿಟಿಐ): ಎಡಗೈ ವೇಗಿ ಜಹೀರ್‌ ಖಾನ್‌ ಅವರನ್ನು ಐಪಿಎಲ್‌ನಲ್ಲಿ ಡೆಲ್ಲಿ ಡೇರ್‌ಡೆವಿಲ್ಸ್‌ ತಂಡದ ನಾಯಕರನ್ನಾಗಿ ನೇಮಿಸಲಾಗಿದೆ.

ಈ ವಿಷಯವನ್ನು ಡೇರ್‌ಡೆವಿಲ್ಸ್‌ ಫ್ರಾಂಚೈಸ್‌ ಸೋಮವಾರ ಬಹಿರಂಗಗೊಳಿಸಿದೆ. ಜಹೀರ್‌ ಹೋದ ವರ್ಷ ಅಂತರರಾಷ್ಟ್ರೀಯ ಕ್ರೀಡಾ ಬದುಕಿಗೆ ನಿವೃತ್ತಿ ಹೇಳಿದ್ದರು. ಅವರು 92 ಟೆಸ್ಟ್‌ ಪಂದ್ಯಗಳಿಂದ 311 ಮತ್ತು 282 ಏಕದಿನ ಪಂದ್ಯಗಳನ್ನಾಡಿ 200 ವಿಕೆಟ್‌ ಉರುಳಿಸಿದ್ದಾರೆ. ಜತೆಗೆ 17 ಟ್ವೆಂಟಿ–20 ಪಂದ್ಯಗಳಲ್ಲೂ ಭಾರತ ತಂಡವನ್ನು ಪ್ರತಿನಿಧಿಸಿದ್ದಾರೆ.

ಹಿಂದಿನ ಆವೃತ್ತಿಯಲ್ಲಿ ಜಹೀರ್‌ ಮತ್ತು ಯುವರಾಜ್‌ ಸಿಂಗ್‌ ತಂಡದಲ್ಲಿ ದ್ದರು.  ದಕ್ಷಿಣ ಆಫ್ರಿಕಾದ ಆಲ್‌ರೌಂಡರ್‌ ಜೆಪಿ ಡುಮಿನಿ ತಂಡವನ್ನು ಮುನ್ನಡೆಸಿ ದ್ದರು. ಈ ಬಾರಿ ಫ್ರಾಂಚೈಸ್‌ ಯುವರಾಜ್‌ ಅವರನ್ನು ತಂಡದಿಂದ ಕೈಬಿಟ್ಟಿತ್ತು.

‘ಒಬ್ಬ ಸಮರ್ಥ ನಾಯಕನಿಗೆ ಇರಬೇಕಾದ ಎಲ್ಲಾ ಗುಣಗಳು ಜಹೀರ್‌ ಅವರಲ್ಲಿದೆ. ಅವರ ಜತೆ ಹಿಂದೆ ಆಡಿದವರೆಲ್ಲಾ ಇದನ್ನು ಚೆನ್ನಾಗಿ ಬಲ್ಲರು’ ಎಂದು ಡೆವಿಲ್ಸ್‌ ಸಲಹೆಗಾರ ರಾಹುಲ್‌ ದ್ರಾವಿಡ್‌ ತಿಳಿಸಿದ್ದಾರೆ.   ‘ಜ್ಯಾಕ್‌ ತಮಗೆ ನೀಡಿರುವ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುತ್ತಾರೆ ಎಂಬ ನಂಬಿಕೆ   ಖಂಡಿತವಾಗಿಯೂ ನನಗಿದೆ. ಅವರು ಇತರ ಆಟಗಾರ ರಲ್ಲೂ ಸ್ಫೂರ್ತಿ ತುಂಬಲಿದ್ದಾರೆ’ ಎಂದು ‘ಜಾಮಿ’ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.