ADVERTISEMENT

ಜಹೀರ್ ಖಾನ್–ಸಾಗರಿಕಾ ನಿಶ್ಚಿತಾರ್ಥ

ಪಿಟಿಐ
Published 24 ಏಪ್ರಿಲ್ 2017, 19:30 IST
Last Updated 24 ಏಪ್ರಿಲ್ 2017, 19:30 IST
ಜಹೀರ್‌ ಖಾನ್‌
ಜಹೀರ್‌ ಖಾನ್‌   

ನವದೆಹಲಿ: ಐಪಿಎಲ್ ಟೂರ್ನಿಯ ಡೆಲ್ಲಿ ಡೇರ್‌ಡೆವಿಲ್ಸ್‌ ತಂಡದ ನಾಯಕ ಜಹೀರ್ ಖಾನ್ ಮತ್ತು ಬಾಲಿವುಡ್ ನಟಿ ಸಾಗರಿಕಾ ಘಾಟಗೆ ಅವರ ನಿಶ್ಚಿತಾರ್ಥವು  ನೆರವೇರಿದೆ.

ಈ ವಿಷಯವನ್ನು ಜಹೀರ್ ಟ್ವಿಟರ್ ಮೂಲಕ ಬಹಿರಂಗಗೊಳಿಸಿದ್ದಾರೆ. ಸಾಗರಿಕಾ ಅವರು ‘ಚಕ್‌ ದೇ ಇಂಡಿಯಾ’ ಹಿಂದಿ ಸಿನಿಮಾದಲ್ಲಿ ನಟಿಸಿದ್ದರು.

ಜಹೀರ್ ಮತ್ತು ಸಾಗರಿಕಾ ಅವರು ಬಹುಕಾಲದ ಸ್ನೇಹಿತರಾಗಿದ್ದರು. 38 ವರ್ಷದ ಜಹೀರ್ ಪ್ರಥಮದರ್ಜೆ ಕ್ರಿಕೆಟ್‌ನಿಂದ ಎರಡು ವರ್ಷಗಳ ಹಿಂದೆ ನಿವೃತ್ತರಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT