ADVERTISEMENT

ಟಾಸ್‌ ಗೆದ್ದ ಭಾರತ, ಇಂಗ್ಲೆಂಡ್‌ ಬ್ಯಾಟಿಂಗ್‌

ಏಜೆನ್ಸೀಸ್
Published 22 ಜನವರಿ 2017, 9:11 IST
Last Updated 22 ಜನವರಿ 2017, 9:11 IST
ಟಾಸ್‌ ಗೆದ್ದ ಭಾರತ, ಇಂಗ್ಲೆಂಡ್‌ ಬ್ಯಾಟಿಂಗ್‌
ಟಾಸ್‌ ಗೆದ್ದ ಭಾರತ, ಇಂಗ್ಲೆಂಡ್‌ ಬ್ಯಾಟಿಂಗ್‌   

ಕೋಲ್ಕತ್ತ: ಇಂಗ್ಲೆಂಡ್‌ ವಿರುದ್ಧದ ಮೂರನೇ ಮತ್ತು ಅಂತಿಮ ಪಂದ್ಯ ಇಲ್ಲಿನ ಈಡನ್‌ ಗಾರ್ಡನ್ಸ್‌ ಕ್ರೀಡಾಂಗಣದಲ್ಲಿ ಆರಂಭವಾಗಿದೆ. ಟಾಸ್‌ ಗೆದ್ದ ವಿರಾಟ್‌ ಕೊಹ್ಲಿ ಫೀಲ್ಡಿಂಗ್‌ ಆಯ್ದುಕೊಂಡಿದ್ದಾರೆ.

ಆರಂಭದ ಎರಡೂ ಪಂದ್ಯಗಳಲ್ಲಿ ಗೆಲುವು ಪಡೆದು  ಸರಣಿ ಕೈವಶ ಮಾಡಿಕೊಂಡಿರುವ ಭಾರತ ತಂಡ ಇಂಗ್ಲೆಂಡ್ ತಂಡಕ್ಕೆ ಮತ್ತೊಂದು ಆಘಾತ ನೀಡುವ ವಿಶ್ವಾಸದಲ್ಲಿದೆ. ಕೊನೆಯ ಪಂದ್ಯದಲ್ಲಿಯೂ ಗೆಲುವು ಸಾಧಿಸಿ ‘ಕ್ಲೀನ್‌ ಸ್ವೀಪ್‌’ ಮಾಡುವ ಗುರಿ ಆತಿಥೇಯರ ಮುಂದಿದೆ.

ಪ್ರಾರಂಭಿಕ ಬ್ಯಾಟ್ಸ್‌ಮನ್‌ ಶಿಖರ್‌ ಧವನ್‌ ಸ್ಥಾನದಲ್ಲಿ ಅಜಿಂಕ್ಯಾ ರಹಾನೆ ಕಣಕ್ಕಿಳಿಯಲಿದ್ದಾರೆ. ಇನ್ನೂ ಮಧ್ಯಮ ಕ್ರಮಾಂಕದ ಎಲ್ಲಾ ಬ್ಯಾಟ್ಸ್‌ಮನ್‌ಗಳು ಉತ್ತಮ ಲಯದಲ್ಲಿರುವ ಕಾರಣ ಇಲ್ಲಿಯೂ ಮತ್ತೆ ರನ್‌ ಹೊಳೆ ಹರೆಯುವ ನಿರೀಕ್ಷೆಯಿದೆ.   

ADVERTISEMENT

ಇಂಗ್ಲೆಂಡ್‌ ವಿಕೆಟ್‌ ನಷ್ಟವಿಲ್ಲದೆ 16.3 ಓವರ್‌ನಲ್ಲಿ 96 ರನ್‌ಗಳಿಸಿದೆ.
ಜಾಸನ್‌ ರಾಯ್‌–56; ಸ್ಯಾಮ್‌ ಬಿಲ್ಲಿಂಗ್ಸ್‌ –35

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.